ಕರ್ನಾಟಕ

karnataka

ETV Bharat / sports

2023ರ ಐಪಿಎಲ್​ ಮಿಸ್​ ಮಾಡಿಕೊಳ್ಳಲಿದ್ದಾರೆ ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ಪಂತ್​: ಗಂಗೂಲಿ

2023ರ ಐಪಿಎಲ್​ಗೆ ಹೊತ್ತಿಗೆ ಪಂತ್ ಚೇತರಿಸಿಕೊಂಡು ತಂಡಕ್ಕೆ ಮರಳುವುದು ಸಾಧ್ಯವಿಲ್ಲ, ಹೀಗಾಗಿ ಅವರು ಈ ಬಾರಿಯ ​ಬಾರ್ಡರ್​ ಗವಾಸ್ಕರ್​ ಟ್ರೋಫಿ ಮತ್ತು ಐಪಿಎಲ್​ನ್ನು ಕಳೆದು ಕೊಳ್ಳಲಿದ್ದಾರೆ.

IPL 2023
2023ರ ಐಪಿಎಲ್​ನಲ್ಲಿ ಪಂತ್​ ಆಡುವುದಿಲ್ಲ

By

Published : Jan 11, 2023, 8:45 PM IST

ನವದೆಹಲಿ:ಈ ವರ್ಷದ ಐಪಿಎಲ್​ನಲ್ಲಿ ರಿಷಬ್​ ಪಂತ್​ ಆಡುವುದಿಲ್ಲ ಎಂದು ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ತಿಳಿಸಿದ್ದಾರೆ. ಆರು ತಿಂಗಳ ಕಾಲ ವೈದ್ಯಕೀಯ ಚಿಕಿತ್ಸೆ ಮತ್ತು ವಿಶ್ರಾಂತಿ ಅಗತ್ಯ ಇರುವ ಕಾರಣ ಆಸ್ಟ್ರೇಲಿಯಾ ಜೊತೆಗೆ ನಡೆಯಲಿರುವ ಬಾರ್ಡರ್​ ಗವಾಸ್ಕರ್​ ಟ್ರೋಫಿ ಮತ್ತು 2023 ಐಪಿಎಲ್​ನಲ್ಲಿ ಪಂತ್​ ಆಡಲು ಸಾಧ್ಯವಿಲ್ಲ. ದೆಹಲಿ ಕ್ಯಾಪಿಟಲ್ಸ್ ರಿಷಭ್​​ ಪಂತ್​ ಅನುಪಸ್ಥಿತಿಯಲ್ಲಿ ಪಂದ್ಯಗಳನ್ನು ಆಡಬೇಕಿದೆ. ಪಂತ್​ ಇಲ್ಲದೆ ಡಿಸಿ ತಂಡ ದುರ್ಬಲವಾಗಿ ಕಾಣುತ್ತದೆ ಎಂದು ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಗಂಗೂಲಿ ಹೇಳಿದ್ದಾರೆ.

ತಂಡ ಉತ್ತಮವಾಗಿದೆ, ಕಪ್​ ಗೆಲ್ಲುವ ಭರವಸೆ ತಂಡದಲ್ಲಿದೆ. ಆದರೆ, ಪಂತ್​ ಅವರಬ ಕೊರತೆ ಎದ್ದು ಕಾಣಲಿದೆ. ಪಂತ್​ ಅವರನ್ನು ನಾವು ತಂಡದಲ್ಲಿ ಮಿಸ್ ಮಾಡಿಕೊಳ್ಳುತ್ತೇವೆ. ಡಿಸಿ ತಂಡ ಉತ್ತಮವಾಗಿ ಆಡುವ ನಂಬಿಕೆ ಇದೆ, ಆದರೆ ರಿಷಭ್​ ಪಂತ್ ಅವರ ಗಾಯವು ಡೆಲ್ಲಿ ಕ್ಯಾಪಿಟಲ್ಸ್ ಮೇಲೆ ಪರಿಣಾಮ ಬೀರುತ್ತದೆ ಎಂದು ದಾದ ಹೇಳಿದರು. ಗಂಗೂಲಿ ಅವರು ಡೆಲ್ಲಿ ಕ್ಯಾಪಿಟಲ್ಸ್​ನ ನಿರ್ದೇಶಕರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದರು.

ಗಂಗೂಲಿ ಮತ್ತೆ ನಿರ್ದೇಶಕರಾಗಿ ಡೆಲ್ಲಿ ಕ್ಯಾಪಿಟಲ್ಸ್ ಸೇರಲಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಡಿಸಿ ನೀಡಿಲ್ಲ. ಸೌರವ್ ಈ ಹಿಂದೆ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ಕಾರ್ಯನಿರ್ವಹಿಸಿದ್ದರು. ದೆಹಲಿ ಕ್ಯಾಪಿಟಲ್ಸ್‌ನ ಮಾರ್ಗದರ್ಶಕರಾಗಿ 2019 ರಲ್ಲಿ ದಾದ ಟೀಂ ನೊಂದಿಗೆ ಪಾಲುದಾರಿಕೆ ಹೊಂದಿದ್ದರು. ಐಪಿಎಲ್ ಅಲ್ಲದೇ, ದಕ್ಷಿಣ ಆಫ್ರಿಕಾ ಲೀಗ್ ಮತ್ತು ದುಬೈ ಕ್ರಿಕೆಟ್ ಲೀಗ್‌ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರದರ್ಶನ ನೀಡಲಿದೆ. ಹೀಗಾಗಿ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗಂಗೂಲಿ ಅವರಿಗೆ ನಿರ್ದೇಶಕರ ಸ್ಥಾನ ನೀಡಲಿದೆ ಎನ್ನಲಾಗಿದೆ.

ನಾಯಕತ್ವದ ಹೊಣೆ ಯಾರಿಗೆ ಸಿಗಲಿದೆ: ರಿಷಭ್​​ ಪಂತ್​ ಡೆಲ್ಲಿಯಲ್ಲಿ ಆಡುವುದಿಲ್ಲ ಎಂದಾದರೆ ಇದರ ಸಾರಥ್ಯ ಯಾರ ಕೈಗೆ ಸೇರಲಿದೆ ಎಂಬುದು ಕುತೂಹಲವಾಗಿದೆ. ಅನುಭವಿ ಡೇವಿಡ್​ ವಾರ್ನರ್​ಗೆ ನಾಯಕತ್ವ ನೀಡುತ್ತಾರ ಎಂಬುದು ಕಾದು ನೋಡಬೇಕಿದೆ. ದೇಶಿಯ ಆಟಗಾರರಿಗೆ ಸಾರಥ್ಯ ನೀಡುವುದಾದರೆ ಪೃಥ್ವಿ ಶಾ ಅವರಿಗೆ ಕ್ಯಾಪ್ಟನ್​ ಹ್ಯಾಟ್​ ಬೀಳಲಿದೆ. ಈ ವರ್ಷ ರಾಷ್ಟ್ರೀಯ ತಂಡದಲ್ಲಿ ಉತ್ತಮ ಆಲ್​ರೌಂಡ್​ ಪ್ರದರ್ಶನ ನೀಡಿದ ಅಕ್ಷರ್​ ಪಟೇಲ್​ಗೂ ನಾಯಕತ್ವ ಹೊಣೆ ಸಿಗುವ ಸಾಧ್ಯತೆ ಇದೆ. ಮನೀಶ್​ ಪಾಂಡೆ ಕೂಡ ತಂಡದ ರೇಸ್​ನಲ್ಲಿದ್ದಾರೆ.

2023ರ ಡೆಲ್ಲಿ ಕ್ಯಾಪಿಟಲ್ಸ್​ ತಂಡ:ರಿಷಭ್​​ ಪಂತ್​ (ನಾಯಕ), ಡೇವಿಡ್​ ವಾರ್ನರ್​, ಪೃಥ್ವಿ ಶಾ, ರೊಮೈನ್ ಪೊವೆಲ್, ಅಕ್ಷರ್ ಪಟೇಲ್, ಕಮಲೇಶ್ ನಾಗರಕೋಟಿ, ಲಲಿತ್ ಯಾದವ್, ಮಿಚೆಲ್ ಮಾರ್ಷ್, ಪ್ರವೀಣ್ ದುಬೆ, ರಿಪ್ಪಲ್ ಪಟೇಲ್, ಸರ್ಫರಾಜ್ ಖಾನ್, ವಿಕ್ಕಿ ಓಸ್ತ್ವಾಲ್, ಯಶ್ ಧುಲ್, ಅಮನ್ ಖಾನ್, ಅನ್ರಿಚ್ ನೋರ್ಕಿಯಾ, ಚೇತನ್ ಸಕಾರಿಯಾ, ಚೇತನ್ ಸಕಾರಿಯಾ, ಕುಲದೀಪ್ ಯಾದವ್, ಲುಂಗಿ ಎನ್ಗಿಡಿ, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್, ಫಿಲ್ ಸಾಲ್ಟ್, ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಮನೀಶ್ ಪಾಂಡೆ ಮತ್ತು ರಿಲೆ ರೊಸ್ಸೊ.

ಐಪಿಎಲ್​ನಲ್ಲಿ ಗೆದ್ದ ತಂಡಗಳ ಪಟ್ಟಿ:

2008: ರಾಜಸ್ಥಾನ್ ರಾಯಲ್ಸ್ (ಚೆನ್ನೈ ವಿರುದ್ಧ 3 ವಿಕೆಟ್‌ಗಳಿಂದ ಗೆಲುವು)
2009: ಡೆಕ್ಕನ್ ಚಾರ್ಜರ್ಸ್ (ಬೆಂಗಳೂರು ತಂಡವನ್ನು 6 ರನ್‌ಗಳಿಂದ ಸೋಲಿಸಿತು)
2010: ಚೆನ್ನೈ ಸೂಪರ್ ಕಿಂಗ್ಸ್ (ಮುಂಬೈ ತಂಡವನ್ನು 22 ರನ್‌ಗಳಿಂದ ಸೋಲಿಸಿತು)
2011: ಚೆನ್ನೈ ಸೂಪರ್ ಕಿಂಗ್ಸ್ (ಬೆಂಗಳೂರು ತಂಡವನ್ನು 58 ರನ್‌ಗಳಿಂದ ಸೋಲಿಸಿತು)
2012: ಕೋಲ್ಕತ್ತಾ ನೈಟ್ ರೈಡರ್ಸ್ (ಚೆನ್ನೈ ವಿರುದ್ಧ 5 ವಿಕೆಟ್‌ಗಳಿಂದ ಗೆಲುವು)
2013: ಮುಂಬೈ ಇಂಡಿಯನ್ಸ್ (ಚೆನ್ನೈ ವಿರುದ್ಧ 23 ರನ್‌ಗಳಿಂದ ಗೆಲುವು)
2014: ಕೋಲ್ಕತ್ತಾ ನೈಟ್ ರೈಡರ್ಸ್ (ಪಂಜಾಬ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿತು)
2015: ಮುಂಬೈ ಇಂಡಿಯನ್ಸ್ (ಚೆನ್ನೈ ವಿರುದ್ಧ 41 ರನ್‌ಗಳಿಂದ ಗೆಲುವು)
2016: ಸನ್‌ರೈಸರ್ಸ್ ಹೈದರಾಬಾದ್ (ಬೆಂಗಳೂರು ತಂಡವನ್ನು 8 ರನ್‌ಗಳಿಂದ ಸೋಲಿಸಿತು)
2017: ಮುಂಬೈ ಇಂಡಿಯನ್ಸ್ (1 ರನ್‌ನಿಂದ ರೈಸಿಂಗ್ ಪುಣೆ ಸೂಪರ್‌ಜೈಂಟ್ ಅನ್ನು ಸೋಲಿಸಿತು)
2018: ಚೆನ್ನೈ ಸೂಪರ್ ಕಿಂಗ್ಸ್ (8 ವಿಕೆಟ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸಿತು)
2019: ಮುಂಬೈ ಇಂಡಿಯನ್ಸ್ (ಚೆನ್ನೈ ತಂಡವನ್ನು 1 ರನ್‌ನಿಂದ ಸೋಲಿಸಿತು)
2020: ಮುಂಬೈ ಇಂಡಿಯನ್ಸ್ (ದೆಹಲಿ ಕ್ಯಾಪಿಟಲ್ಸ್ ಅನ್ನು 5 ವಿಕೆಟ್‌ಗಳಿಂದ ಸೋಲಿಸಿತು)
2021: ಚೆನ್ನೈ ಸೂಪರ್ ಕಿಂಗ್ಸ್ (ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು 27 ರನ್‌ಗಳಿಂದ ಸೋಲಿಸಿತು)
2022: ಗುಜರಾತ್ ಟೈಟಾನ್ಸ್ (ರಾಜಸ್ಥಾನ್ ರಾಯಲ್ ವಿರುದ್ಧ ಏಳು ವಿಕೆಟ್‌ಗಳಿಂದ ಗೆಲುವು)

ಇದನ್ನೂ ಓದಿ:ಉಮ್ರಾನ್​ ಮಲಿಕ್​ ದಾಖಲೆ: 156 ಕಿಮೀ ಶರವೇಗದಲ್ಲಿ ಚೆಂಡೆಸೆದ ಮೊದಲ ಭಾರತೀಯ!

ABOUT THE AUTHOR

...view details