ಮೆಲ್ಬೋರ್ನ್(ಆಸ್ಟ್ರೇಲಿಯಾ): ಕ್ರಿಕೆಟ್ ದಂತಕತೆ ಶೇನ್ ವಾರ್ನ್ ಅವರ ಸ್ಮರಣಾ ಕಾರ್ಯಕ್ರಮವನ್ನು ಆಸ್ಟ್ರೇಲಿಯಾ ವಿಕ್ಟೋರಿಯಾ ರಾಜ್ಯ ಆಯೋಜಿಸಲಿದ್ದು, ಮಾರ್ಚ್ 30ರಂದು ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ಅನ್ನು ಆಯ್ಕೆ ಮಾಡಿಕೊಳ್ಳಲಿದೆ. ಎಂಸಿಜಿಯಲ್ಲೇ ಶೇನ್ ವಾರ್ನ್ 700ನೇ ಟೆಸ್ಟ್ ವಿಕೆಟ್ ಪಡೆದಿರುವ ಹಿನ್ನೆಲೆಯಲ್ಲಿ ಈ ಕ್ರೀಡಾಂಗಣವನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಶೇನ್ ವಾರ್ನ್ಗೆ ಧನ್ಯವಾದ ಹೇಳಲು ಎಂಸಿಜಿಗಿಂತ ಉತ್ತಮ ಸ್ಥಳ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಮಾರ್ಚ್ 30ರ ಸಂಜೆ ಎಂಸಿಜಿಯಲ್ಲಿ ನಡೆಯುವ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಶೇನ್ ವಾರ್ನ್ ಅವರು ಕ್ರಿಕೆಟ್ಗೆ ಮತ್ತು ಮತ್ತು ನಮ್ಮ ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತದೆ ಎಂದು ವಿಕ್ಟೋರಿಯಾ ರಾಜ್ಯದ ಮುಖ್ಯಮಂತ್ರಿ (ಪ್ರೀಮಿಯರ್ ಎಂದು ಕರೆಯಲಾಗುತ್ತದೆ) ಡೇನಿಯಲ್ ಆಂಡ್ರ್ಯೂಸ್ ಟ್ವೀಟ್ ಮಾಡಿದ್ದಾರೆ.