ಕರ್ನಾಟಕ

karnataka

ETV Bharat / sports

ತವರೂರು ಮೆಲ್ಬೋರ್ನ್​ ತಲುಪಿದ ಶೇನ್ ವಾರ್ನ್ ಪಾರ್ಥಿವ ಶರೀರ - ಶೇನ್ ವಾರ್ನ್ ಹೃದಯಾಘಾತ

ಆಸ್ಟ್ರೇಲಿಯಾದ ರಾಷ್ಟ್ರೀಯ ಧ್ವಜದಿಂದ ಸುತ್ತಿರುವ ಶವಪೆಟ್ಟಿಗೆಯಲ್ಲಿ ಶೇನ್ ವಾರ್ನ್​ ಅವರ ಪಾರ್ಥಿವ ಶರೀರ ಖಾಸಗಿ ವಿಮಾನದ ಮೂಲಕ ರಾತ್ರಿ 8:30ಕ್ಕೆ (ಆಸ್ಟ್ರೇಲಿಯಾ ಕಾಲಮಾನ) ಮೆಲ್ಬೋರ್ನ್​ ನಗರ ತಲುಪಿದೆ ಎಂದು ತಿಳಿದುಬಂದಿದೆ.

Warne's body arrives in Melbourne
ಮೆಲ್ಬೋರ್ನ್​ ತಲುಪಿದ ಶೇನ್ ವಾರ್ನ್ ಪಾರ್ಥೀವ ಶರೀರ

By

Published : Mar 10, 2022, 7:35 PM IST

ಮೆಲ್ಬೋರ್ನ್​: ಹೃದಯಘಾತದಿಂದ ನಿಧನರಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್‌ ದಂತಕತೆ ಶೇನ್​ ವಾರ್ನ್​ ಅವರ ಪಾರ್ಥಿವ ಶರೀರ ಗುರುವಾರ ಬ್ಯಾಂಕಾಕ್​ನಿಂದ ಮೆಲ್ಬೋರ್ನ್​ ನಗರಕ್ಕೆ ತಲುಪಿದೆ.

ವಿಶ್ವಕಂಡ ಶ್ರೇಷ್ಠ ಸ್ಪಿನ್ನರ್​ಗಳಲ್ಲಿ ಒಬ್ಬರಾದ ವಾರ್ನ್ ರಜಾ ದಿನಗಳನ್ನು ಕಳೆಯಲು ಥಾಯ್ಲೆಂಡ್​ನ ದಕ್ಷಿಣದಲ್ಲಿರುವ ಸಮುಯಿ ದ್ವೀಪಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕಳೆದ ಶುಕ್ರವಾರ ಹಠಾತ್ ಹೃದಯಾಘಾತ ಸಂಭವಿಸಿ ನಿಧನರಾಗಿದ್ದರು.

ಆಸ್ಟ್ರೇಲಿಯಾದ ರಾಷ್ಟ್ರೀಯ ಧ್ವಜದಿಂದ ಸುತ್ತಿರುವ ಶವಪೆಟ್ಟಿಗೆಯಲ್ಲಿ ಶೇನ್ ವಾರ್ನ್​ ಅವರ ಪಾರ್ಥಿವ ಶರೀರ ಖಾಸಗಿ ವಿಮಾನದ ಮೂಲಕ ರಾತ್ರಿ 8:30ಕ್ಕೆ(ಆಸ್ಟ್ರೇಲಿಯಾ ಕಾಲಮಾನ) ಮೆಲ್ಬೋರ್ನ್​ ನಗರ ತಲುಪಿದೆ ಎಂದು ತಿಳಿದುಬಂದಿದೆ.

"ವಾರ್ನ್​ ಮೃತದೇಹ ಗುರುವಾರ ರಾತ್ರಿ 8:30ಕ್ಕೆ ಖಾಸಗಿ ವಿಮಾನದ ಮೂಲಕ ಮೆಲ್ಬೋರ್ನ್​ನ ಎಸೆಂಡನ್ ಫೀಲ್ಡ್ಸ್ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ವಾರ್ನ್ ಪಿಎ ಹಾಗೂ ಸ್ನೇಹಿತ ಹೆಲೆನ್ ನೊಲಾನ್ ಸೇರಿದಂತೆ ಸಾಕಷ್ಟು ಅಭಿಮಾನಿಗಳು ಖಾಸಗಿ ವಿಮಾನವನ್ನು ಬರಮಾಡಿಕೊಂಡಿದ್ದಾರೆ" ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿವೆ.

ಆಸ್ಟ್ರೇಲಿಯಾ ಪರ 145 ಟೆಸ್ಟ್​ ಪಂದ್ಯಗಳನ್ನಾಡಿದ್ದ ವಾರ್ನ್​ 15 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ 708 ವಿಕೆಟ್, 194 ಏಕದಿನ ಪಂದ್ಯಗಳಿಂದ 293 ವಿಕೆಟ್ ಪಡೆದಿದ್ದರು. ಮಾರ್ಚ್​ 30ರಂದು ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲು ಆಸ್ಟ್ರೇಲಿಯಾ ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ:ಕ್ರಿಕೆಟ್ ದಂತಕತೆ ಶೇನ್ ವಾರ್ನ್​ಗೆ ಮಾ.30ರಂದು ಎಂಸಿಜಿಯಲ್ಲಿ ಸ್ಮರಣಾ ಕಾರ್ಯಕ್ರಮ

ABOUT THE AUTHOR

...view details