ಕರ್ನಾಟಕ

karnataka

ETV Bharat / sports

ಕಳಚಿತೇ ಸಾನಿಯಾ ಶೋಯೆಬ್​ರ 12 ವರ್ಷಗಳ ಪ್ರೀತಿಯಬಂಧ..ಭಾರತ ಪಾಕ್​ ಆಟಗಾರರ ಮಧ್ಯೆ ಪ್ರೀತಿ ಬೆಳೆದಿದ್ದೇಗೆ?

ಮಾಜಿ ಟೆನಿಸ್​ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್​ ಮಲಿಕ್​ ನಡುವಿನ ಬಂಧ ಬಿಳಿಚಿಕೊಂಡಿದೆ. ಕಾನೂನು ಸಮಸ್ಯೆ ಪರಿಹರಿಸಿಕೊಂಡ ಬಳಿಕ ವಿಚ್ಚೇದನ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಅವರ ಆಪ್ತ ವಲಯಗಳು ಮಾಹಿತಿ ನೀಡಿವೆ.

By

Published : Nov 12, 2022, 6:08 PM IST

sania-mirza-and-shoaib-malik-love-story
ಕಳಚಿತೇ ಸಾನಿಯಾ- ಶೋಯೆಬ್​ರ 12 ವರ್ಷಗಳ ಪ್ರೀತಿಯಬಂಧ

ನವದೆಹಲಿ:ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ನಡುವಿನ ವೈವಾಹಿಕ ಜೀವನ ಅಂತ್ಯವಾಗಿದೆ. 12 ವರ್ಷಗಳ ಪ್ರೇಮವಿವಾಹಕ್ಕೆ ಇಬ್ಬರೂ ತಿಲಾಂಜಲಿ ಇಡಲು ಸಿದ್ಧವಾಗಿದ್ದಾರೆ. ಕಾನೂನಾತ್ಮವಾಗಿ ಇಬ್ಬರೂ ಬೇರೆಯಾಗುವ ಹಾದಿಯಲ್ಲಿದ್ದು, ಅವರ ವಿವಾಹ ವಿಚ್ಚೇದನ ಸುದ್ದಿ ದೃಢಪಟ್ಟಿದೆ.

ಸಾನಿಯಾ- ಶೋಯೆಬ್​

2010 ರಲ್ಲಿ ಪ್ರೀತಿಸಿ ವಿವಾಹವಾಗಿದ್ದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್​ ಮಲಿಕ್​ಗೆ 4 ವರ್ಷದ ಇಜಹಾನ್​ ಮಿರ್ಜಾ ಎಂಬ ಪುತ್ರನಿದ್ದಾನೆ. ಸಾನಿಯಾಗಾಗಿ, ಶೋಯೆಬ್​ ಮಲಿಕ್​ ದುಬೈನಲ್ಲಿ ಮನೆ ಖರೀದಿಸಿ ಅಲ್ಲಿಯೇ ವಾಸಿಸುತ್ತಿದ್ದರು. ಇದೀಗ ಇಬ್ಬರೂ ದೂರವಾಗಿದ್ದು ಪ್ರತ್ಯೇಕವಾಗಿ ವಾಸಿಸುತ್ತಿರುವುದು ದೃಢಪಟ್ಟಿದೆ.

ಮಗನ ಜನ್ಮದಿನದಂದು ಸಾನಿಯಾ- ಶೋಯೆಬ್​

ಮಾಧ್ಯಮಗಳ ವರದಿಯನ್ವಯ, ಸಾನಿಯಾ- ಶೋಯೆಬ್​ ದೂರವಾಗಿದ್ದರೂ ಕೆಲ ಕಾನೂನು ಸಮಸ್ಯೆಗಳನ್ನು ಪರಿಹರಿಸಿಕೊಂಡ ಬಳಿಕ ವಿಚ್ಚೇದನವನ್ನು ಅಧಿಕೃತಗೊಳಿಸಲಿದ್ದಾರೆ. ಇಬ್ಬರೂ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಪುತ್ರನ ಪೋಷಣೆ ಬಗ್ಗೆಯೂ ಪ್ರಶ್ನೆಯಿದ್ದು, ಸಹ ಪೋಷಕರಾಗಿ ಇಜಹಾನ್​ ಮಿರ್ಜಾರನ್ನು ಬೆಳೆಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶೋಯೆಬ್​ ಸಾನಿಯಾ ಮೊದಲ ಭೇಟಿ:ಪಾಕಿಸ್ತಾನ ಕ್ರಿಕೆಟರ್​ ಶೋಯೆಬ್​ ಮಲಿಕ್​ ಮತ್ತು ಸಾನಿಯಾ ಮಿರ್ಜಾರ ಮೊದಲ ಭೇಟಿ 2004 ರಲ್ಲಿ ಆಗಿತ್ತು. ಭಾರತದ ಜೊತೆ ಸರಣಿಯಾಡಲು ಬಂದಿದ್ದ ಶೋಯೆಬ್​ ಸಾನಿಯಾರನ್ನು ಮೊದಲ ಬಾರಿಗೆ ಸಂಧಿಸಿದ್ದರು. ಬಳಿಕ 2009 ರಲ್ಲಿ ಎರಡನೇ ಬಾರಿಗೆ ಹೋಬರ್ಟ್‌ನ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಭೇಟಿಯಾದರು. ಬಳಿಕ ಮಲಿಕ್​, ಸ್ನೇಹಿತ ವಕಾರ್ ಯೂನಸ್ ಜೊತೆಗೆ ಸಾನಿಯಾ ಮಿರ್ಜಾರ ಟೆನಿಸ್​ ಆಟವನ್ನು ವೀಕ್ಷಿಸಲು ಬಂದಾಗ ಇಬ್ಬರ ಸಂಬಂಧ ದೃಢಪಟ್ಟಿತ್ತು.

ಮಲಿಕ್​ ಆಹ್ವಾನಿಸಿದ ಸಾನಿಯಾ ಗೆಳೆಯನ ದೂರ:ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಬಾಲ್ಯದ ಗೆಳೆಯ ಸೊಹ್ರಾಬ್​ ಮಿರ್ಜಾ ಜೊತೆಗಿನ ಸಂಬಂಧವನ್ನು ಕಡಿದು ಕೊಂಡಿದ್ದರು. ಇದರಿಂದ ನೊಂದಿದ್ದ ಸಾನಿಯಾ, ಮಲಿಕ್​ ಭೇಟಿ ವರದಾನವಾಗಿತ್ತು. ಈ ಮಧ್ಯೆ ಕ್ರಿಕೆಟ್​ನಲ್ಲಿ ಕಳ್ಳಾಟದಿಂದ 1 ವರ್ಷದ ನಿಷೇಧಕ್ಕೆ ಒಳಗಾಗಿದ್ದ ಶೋಯೆಬ್​ ಮಲಿಕ್​ ಸಾನಿಯಾ ಹಿಂದೆ ಬಿದ್ದು, 2010 ರಲ್ಲಿ ಇಬ್ಬರೂ ವಿವಾಹಬಂಧನಕ್ಕೆ ಒಳಗಾದರು.

ಸಾನಿಯಾರನ್ನು ವರಿಸುವ ಮೊದಲು ಶೋಯೆಬ್​ ಮಲಿಕ್​ ಭಾರತದವರೇ ಆದ ಆಯೇಶಾ ಸಿದ್ಧಿಕಿ ಎಂಬುವರನ್ನು ವಿವಾಹವಾಗಿದ್ದರು. ಇದು ಆರಂಭದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೆಲ್ಲವನ್ನು ಮೆಟ್ಟಿನಿಂತ ಜೋಡಿ 2010 ರ ಏಪ್ರಿಲ್ 12 ರಂದು ಹೈದರಾಬಾದ್‌ನ ತಾಜ್ ಹೋಟೆಲ್‌ನಲ್ಲಿ ಅದ್ಧೂರಿ ವಿವಾಹವಾದರು.

ದುಬೈನಲ್ಲಿ ನೆಲೆಸಿದ್ದ ಜೋಡಿ:ಉಗ್ರರ ಕಾರಣಕ್ಕಾಗಿ ಪಾಕಿಸ್ತಾನಕ್ಕೆ ಯಾವ ತಂಡಗಳೂ ಪಯಣಿಸದ ಕಾರಣ ತಂಡ ದುಬೈಯನ್ನೇ ತವರು ಮೈದಾನ ಮಾಡಿಕೊಂಡಿತ್ತು. ಇದು ಶೋಯೆಬ್​ ಮತ್ತು ಸಾನಿಯಾಗೆ ಪ್ಲಸ್​ ಆಗಿ ಇಬ್ಬರೂ ದುಬೈನಲ್ಲಿ ಮನೆ ಮಾಡಿದ್ದರು. 8 ವರ್ಷದ ಬಳಿಕ 2018 ರ ಅಕ್ಟೋಬರ್ 30 ರಂದು ದಂಪತಿಗೆ ಗಂಡು ಮಗು ಪ್ರಾಪ್ತವಾಯಿತು.

2020 ರಲ್ಲೇ ದೂರ ದೂರ..:ಕೊರೊನಾ ವೇಳೆ ಅಂದರೆ, 2020 ರಲ್ಲಿಯೇ ಇಬ್ಬರು ದೂರವಾಗಿದ್ದ ಬಗ್ಗೆ ವದಂತಿಗಳು ಹರಡಿದ್ದವು. ಕೋವಿಡ್‌ ನಿರ್ಬಂಧಗಳಿಂದಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸಾನಿಯಾ ಮಿರ್ಜಾ ಭಾರತದಲ್ಲಿದ್ದಾಗ ಶೋಯೆಬ್ ಮಲಿಕ್ ಪಾಕಿಸ್ತಾನದಲ್ಲಿದ್ದರು.

ಇಬ್ಬರ ಮಧ್ಯೆ ಬಂದಿದ್ದ ಆಕೆ:ಮಾಧ್ಯಮಗಳ ವರದಿಯ ಪ್ರಕಾರ, ಬಹು ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಸಾನಿಯಾ ಶೋಯೆಬ್​ ಮಧ್ಯೆ ಮತ್ತೊಬ್ಬಾಕೆಯ ಪ್ರವೇಶವೇ ವಿಚ್ಚೇದನಕ್ಕೆ ಕಾರಣ ಎಂದು ಹೇಳಲಾಗಿದೆ. ಶೋಯೆಬ್ ಪಾಕಿಸ್ತಾನಿ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಚರ್ಚೆ ಕೇಳಿಬಂದಿತ್ತು. ಬಳಿಕವೇ ಮಲಿಕ್ ಪಾಕಿಸ್ತಾನದಲ್ಲೇ ನೆಲೆಯೂರಿದರೆ, ಸಾನಿಯಾ ದುಬೈನಲ್ಲಿ ಮಗನೊಂದಿಗೆ ವಾಸಿಸುತ್ತಿದ್ದರು.

ಸೋಷಿಯಲ್​ ಮೀಡಿಯಾದಿಂದ ಬಯಲು:ಸಾನಿಯಾ- ಶೋಯೆಬ್​ ವಿವಾಹ ಬಂಧ ಮುರಿದು ಬಿದ್ದಿದೆ ಎಂಬ ವದಂತಿಗೆ ಸಾನಿಯಾರ ಇನ್​ಸ್ಟಾಗ್ರಾಮ್​ ಪೋಸ್ಟ್​ ಇಂಬು ನೀಡಿತ್ತು. 'ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ. ಅಲ್ಲಾನನ್ನು ಹುಡುಕಲು' ಎಂದು ಸಾನಿಯಾ ಪೋಸ್ಟ್ ಮಾಡಿದ್ದರು. ಅಲ್ಲದೇ, ಪುತ್ರ ಇಜಹಾನ್ ಮಿರ್ಜಾ ಮಲಿಕ್ ಅವರ ಹುಟ್ಟುಹಬ್ಬದ ಫೋಟೋವನ್ನು ಸಾನಿಯಾ ಶೇರ್ ಮಾಡಿಲ್ಲ. ಇಸದು ದಂಪತಿ ವೈವಾಹಿಕ ಜೀವನ ಕೊನೆಗೊಂಡಿದೆ ಎಂಬುದಕ್ಕೆ ರೆಕ್ಕೆಪುಕ್ಕ ನೀಡಿತ್ತು.

ಓದಿ:ಸಾನಿಯಾ-ಶೋಯೆಬ್ ದಾಂಪತ್ಯ ಜೀವನದಲ್ಲಿ ಬಿರುಕು?

ABOUT THE AUTHOR

...view details