ಮುಂಬೈ: ಮುಂದಿನ ಎರಡು ಟಿ20 ವಿಶ್ವಕಪ್ಗಳಿಗೆ ರೋಹಿತ್ ಶರ್ಮಾ ಭಾರತ ತಂಡದ ನಾಯಕನಾಗಬೇಕೆಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಉಪನಾಯಕನಾಗಿ ಕೆ.ಎಲ್.ರಾಹುಲ್ ಅಥವಾ ರಿಷಭ್ ಪಂತ್ ಅವರನ್ನು ನೇಮಕ ಮಾಡುವಂತೆ ಅವರು ಸಲಹೆ ನೀಡಿದ್ದಾರೆ.
ಯುಎಇಯಲ್ಲಿ 2021ರ ಟಿ20 ವಿಶ್ವಕಪ್ ಮುಯುತ್ತಿದ್ದಂತೆ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ. ಆ ಸ್ಥಾನಕ್ಕೆ ಈಗಾಗಲೇ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಹೆಸರು ಕೇಳಿಬರುತ್ತಿದೆ. ಆದರೆ ರೋಹಿತ್ ನಾಯಕತ್ವದ ದಾಖಲೆ ಉತ್ತಮವಾಗಿದ್ದು ಅವರೇ ಭಾರತ ತಂಡ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.
"ಮುಂದಿನ ಎರಡು ವಿಶ್ವಕಪ್ಗಳಿಗೆ ರೋಹಿತ್ ಶರ್ಮಾ ನಾಯಕನಾಗಬೇಕೆಂದು ನಾನು ಬಯಸುತ್ತೇನೆ. ಎರಡೂ ವಿಶ್ವಕಪ್ಗಳು ಒಂದರ ಹಿಂದೊಂದು ಬರಲಿವೆ. ಒಂದು ತಿಂಗಳಲ್ಲಿ ಒಂದು ವಿಶ್ವಕಪ್ ನಡೆದರೆ, ಮತ್ತೊಂದು ಸರಿಯಾಗಿ ಒಂದು ವರ್ಷಕ್ಕೆ ನಡೆಯಲಿದೆ. ಈ ನಿರ್ದಿಷ್ಟ ಹಂತದಲ್ಲಿ ನೀವು ಹಲವು ನಾಯಕರನ್ನು ಬದಲಾಯಿಸಲು ಬಯಸುವುದಿಲ್ಲ. ಹಾಗಾಗಿ ಎರಡು ವಿಶ್ವಕಪ್ಗಳಿಗೆ ಭಾರತ ತಂಡದ ನಾಯಕನಾಗಲು ರೋಹಿತ್ ನನ್ನ ಆಯ್ಕೆ" ಎಂದು ಸ್ಟಾರ್ ಸ್ಫೋರ್ಟ್ಸ್ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಗವಾಸ್ಕರ್ ಹೇಳಿದರು.