ಹೈದರಾಬಾದ್:ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕೊರೊನಾ ವೈರಸ್ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇದೀಗ ಡರ್ಹಮ್ನಲ್ಲಿ ವಿರಾಟ್ ಕೊಹ್ಲಿ ಪಡೆ ಸೇರಿಕೊಂಡಿದ್ದು, ಇದರ ಬೆನ್ನಲ್ಲೇ ಟ್ವಿಟರ್ನಲ್ಲಿ ಕೆಲವೊಂದು ಫೋಟೋ ಹಾಕಿಕೊಂಡಿದ್ದು, ಆಶ್ಚರ್ಯಕರವಾದ ಕ್ಯಾಪ್ಶನ್ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳನ್ನಾಡಲು ಟೀಂ ಇಂಡಿಯಾ ಲಂಡನ್ನಲ್ಲಿದ್ದು, ಸದ್ಯ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಿದೆ. ಇದರ ಮಧ್ಯೆ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕೊರೊನಾ ಸೋಂಕಿಗೊಳಗಾಗಿದ್ದು ದೃಢಗೊಂಡಿತ್ತು. ಹೀಗಾಗಿ ಅವರನ್ನು ಐಸೋಲೇಷನ್ಗೆ ಒಳಪಡಿಸಲಾಗಿತ್ತು. ಇದೀಗ ಕೋವಿಡ್ ಗೆದ್ದಿರುವ ರಿಷಭ್ ಪಂತ್ ಡರ್ಹಮ್ನಲ್ಲಿ ತಂಡ ಸೇರಿಕೊಂಡಿದ್ದು, ಕೋಚ್ ರವಿಶಾಸ್ತ್ರಿ ಅವರನ್ನ ಅದ್ಧೂರಿಯಾಗಿ ವೆಲ್ಕಮ್ ಮಾಡಿಕೊಂಡಿದ್ದಾರೆ.
ತಂಡ ಸೇರಿಕೊಂಡಿರುವುದು ನಿಜಕ್ಕೂ ಥ್ರಿಲ್ ಆಗ್ತಿದೆ. ಅದ್ಧೂರಿಯಾಗಿ ವೆಲ್ಕಮ್ ಮಾಡಿಕೊಂಡಿದ್ದಕ್ಕಾಗಿ ಥ್ಯಾಂಕ್ಯೂ ರವಿಶಾಸ್ತ್ರಿ ಎಂದು ಹೇಳಿದ್ದಾರೆ. ಇದರ ಜೊತೆಗೆ ಟೀಂ ಇಂಡಿಯಾ ಪ್ಲೇಯರ್ಸ್ಗಳೊಂದಿಗಿನ ಫೋಟೋ ಶೇರ್ ಮಾಡಿದ್ದಾರೆ. ಪಂತ್ ಸಂಪೂರ್ಣವಾಗಿ ಗುಣಮುಖರಾಗಿ ತಂಡ ಸೇರಿಕೊಂಡಿರುವ ವಿಚಾರವನ್ನು ಭಾರತೀಯ ಕ್ರಿಕೆಟ್ ಮಂಡಳಿ ಟ್ವಿಟ್ ಮೂಲಕ ದೃಢಪಡಿಸಿತ್ತು.