ಕರ್ನಾಟಕ

karnataka

ETV Bharat / sports

ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ 'ಸುಳ್ಳು'... ನಾರಾಯಣ ಹೆಲ್ತ್​ ಸಿಟಿ ಸ್ಪಷ್ಟನೆ - Sourav Ganguly hospital news

ಆರೋಗ್ಯ ತಪಾಸಣೆಗೋಸ್ಕರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿ ಸುಳ್ಳು ಎಂದು ನಾರಾಯಣ ಹೆಲ್ತ್ ಸಿಟಿ ಸ್ಪಷ್ಟನೆ ನೀಡಿದೆ.

Sourav Ganguly
Sourav Ganguly

By

Published : Feb 12, 2022, 2:44 AM IST

Updated : Feb 12, 2022, 2:58 AM IST

ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾರಾಯಣ ಹೆಲ್ತ್ ಸಿಟಿಗೆ ದಾಖಲಾಗಿದ್ದಾರೆಂಬ ಸುದ್ದಿ ಹಬ್ಬಿದ್ದು, ಇದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಖುದ್ದಾಗಿ ಸ್ಪಷ್ಟನೆ ನೀಡಿದೆ.

ಆರೋಗ್ಯ ತಪಾಸಣೆಗೋಸ್ಕರ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿ ಸುಳ್ಳು ಎಂದು ತಿಳಿಸಿರುವ ಆಸ್ಪತ್ರೆ, ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಹರಿದಾಡುತ್ತಿರುವ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ ಎಂದಿದೆ. ಆಸ್ಪತ್ರೆಯ ಡೈರೆಕ್ಟರ್​ ನಿತಿನ್ ಮಂಜುನಾಥ್​ ಮಹತ್ವದ ಪ್ರಕಟಣೆ ಹೊರಡಿಸಿದ್ದು. ಅವರು ಆಸ್ಪತ್ರೆಗೆ ದಾಖಲಾಗಿಲ್ಲ. ಆದರೆ, ಬೆಂಗಳೂರಿಗೆ ಆಗಮಿಸಿರುವ ಕಾರಣ ಶೆಟ್ಟಿ ಅವರನ್ನ ಭೇಟಿ ಮಾಡಲು ಆಗಮಿಸಿದ್ದರು. ಇದರ ಜೊತೆಗೆ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡಿರುವ 100 ಬೆಡ್​ನ ಐಸಿಯು ಘಟಕವನ್ನ ಉದ್ಘಾಟನೆ ಮಾಡಲು ಸೋಮವಾರ ಆಗಮಿಸುತ್ತಿದ್ದಾರೆ ಎಂದಿದ್ದಾರೆ.

ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿ:ಐಪಿಎಲ್​​​ ಮೆಗಾ ಹರಾಜು ಪ್ರಕ್ರಿಯೆಗೋಸ್ಕರ ಬೆಂಗಳೂರಿಗೆ ಆಗಮಿಸಿರುವ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದು, ಹೃದಯ ತಪಾಸಣೆಗೋಸ್ಕರ ನಾರಾಯಣ ಹೆಲ್ತ್​​ ಸಿಟಿಗೆ ದಾಖಲಾಗಿದ್ದಾರೆಂಬ ಮಾಹಿತಿ ತಿಳಿದು ಬಂದಿತ್ತು.

ಇದನ್ನೂ ಓದಿರಿ:IPL ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗ್ತಿಲ್ಲ ಪಂಜಾಬ್ ಒಡತಿ ಪ್ರೀತಿ ಜಿಂಟಾ.. ಕಾರಣ?

ಇಂದು ಮತ್ತು ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅದರಲ್ಲಿ ಭಾಗಿಯಾಗಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬೆಂಗಳೂರೊಗೆ ಆಗಮಿಸಿದ್ದಾರೆ.

Last Updated : Feb 12, 2022, 2:58 AM IST

ABOUT THE AUTHOR

...view details