ನವದೆಹಲಿ:ಬಯೋಬಬಲ್ನಲ್ಲಿಯೂ ಕೋವಿಡ್ 19 ಪ್ರಕರಣಗಳು ಕಂಡು ಬಂದ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ಅನ್ನು ರದ್ದುಗೊಳಿಸಿದೆ. ಆದರೆ ಸಾಮಾಜಿಕ ಜಾಲಾತಾಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೇಂಡ್ ಆಗುತ್ತಿದೆ.
ಟೂರ್ನಮೆಂಟ್ ರದ್ಧಾದ ಸುದ್ದಿ ಹೊರಬರುತ್ತಿದ್ದಂತೆ RCB Fans ಎಂಬ ಪದ ಟ್ವಿಟರ್ನ ಟಾಪ್ ಟ್ರೆಂಡ್ ಆಗುತ್ತಿದೆ. 13 ಆವೃತ್ತಿಗಳಲ್ಲಿ 3 ಬಾರಿ ಫೈನಲ್ ತಲುಪಿಯೂ ಒಂದು ಟ್ರೋಫಿ ಗೆಲ್ಲಲಾಗದ ನತದೃಷ್ಟ ತಂಡ ಆರ್ಸಿಬಿ ಪರ ಕೆಲವು ಮೆಮ್ಸ್ ಮತ್ತು ಜೋಕ್ಸ್ ಟ್ವಿಟರ್ನಲ್ಲಿ ಪೋಸ್ಟ್ ಆಗುತ್ತಿವೆ.
ಟೂರ್ನಮೆಂಟ್ನಲ್ಲಿ ಅತ್ಯುತ್ತಮವಾಗಿ ಆರಂಭಿಸಿದ್ದ ಆರ್ಸಿಬಿ ಈ ಸುದ್ದಿಯಿಂದ ಎಷ್ಟು ಬೇಸರ ತಂದಿದೆ. ಮತ್ತು ಇದರ ಬಗ್ಗೆ ಇತರೆ 7 ಫ್ರಾಂಚೈಸಿಗಳ ಪ್ರತಿಕ್ರಿಯೆ ಹೇಗಿದೆ ಎಂಬ ಮೆಮ್ಸ್ಗಳು ಸದ್ದು ಮಾಡುತ್ತಿವೆ. ಆರ್ಸಿಬಿ 14ನೇ ಆವೃತ್ತಿಯನ್ನ ಅದ್ಭುತವಾಗಿ ಶುರು ಮಾಡಿತ್ತು. ಸತತ 4 ಪಂದ್ಯಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದಿದ್ದ ತಂಡ ನಂತರ 3 ಪಂದ್ಯಗಳಲ್ಲಿ 2 ಸೋಲು ಕಂಡಿತ್ತು. ಆದರೂ 7 ಪಂದ್ಯಗಳಲ್ಲಿ 10 ಅಂಕ ಪಡೆದು ಟಾಪ್ 3ರಲ್ಲಿ ಕಾಣಿಸಿಕೊಂಡಿತ್ತು.
ಈ ಬಾರಿ ಮ್ಯಾಕ್ಸ್ವೆಲ್, ಜೆಮೀಸನ್ ಸೇರ್ಪಡೆಯೊಂದಿಗೆ ಬಲಿಷ್ಠ ತಂಡವಾಗಿದ್ದ ಆರ್ಸಿಬಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ತಂಡಗಳಲ್ಲಿ ಒಂದಾಗಿತ್ತು. ಆದರೆ ಕೋವಿಡ್ 19 ಆರ್ಸಿಬಿ ಅಭಿಮಾನಿಗಳ ಕನಸಿಗೆ ತಣ್ಣೀರೆರಚಿದೆ.
ಕೆಲವು ತಮಾಷೆಯ ಟ್ವಿಟರ್ ಮೆಮ್ಸ್ಗಳು ಇಲ್ಲಿವೆ.