ಐಪಿಎಲ್ 2023 ಋತುವಿಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಹೊಸ ನಾಯಕನಾಗಿ ನಿತೀಶ್ ರಾಣಾ ಅವರನ್ನು ನೇಮಿಸಲಾಗಿದೆ. ಶ್ರೇಯಸ್ ಅಯ್ಯರ್ ಬೆನ್ನುನೋವಿನಿಂದ ಗಾಯಗೊಂಡಿದ್ದರಿಂದ, ರಾಣಾ ಅವರಿಗೆ ನೈಟ್ಸ್‌ನ ಜವಾಬ್ದಾರಿಯನ್ನು ವಹಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ರಾಣಾ 2018 ರಿಂದ ಕೋಲ್ಕತ್ತಾ ತಂಡವನ್ನು ಸೇರಿದ್ದರು.
ಕೋಲ್ಕತ್ತಾ ನೈಟ್ ರೈಡರ್ಸ್ ಈ ನಿರ್ಧಾರವನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಪ್ರಕಟಿಸಿದೆ. ಲೀಗ್ ನಡುವೆ ಅಯ್ಯರ್ ಚೇತರಿಸಿಕೊಂಡು ಮತ್ತೆ ತಂಡಕ್ಕೆ ಮರಳುವ ನಿರೀಕ್ಷೆಯನ್ನು ತಿಳಿಸಿದೆ.
"ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ ನಾಯಕತ್ವ ವಹಿಸಲಿದ್ದಾರೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ಇಂದು ಘೋಷಿಸಿದೆ. ನಾವು ಅದೃಷ್ಟಶಾಲಿಗಳಾಗಿದ್ದಲ್ಲಿ, ಶ್ರೇಯಸ್ ಚೇತರಿಸಿಕೊಳ್ಳುತ್ತಾರೆ ಮತ್ತು ಐಪಿಎಲ್ 2023 ಆವೃತ್ತಿಯಲ್ಲಿ ಭಾಗವಹಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ರಾಜ್ಯ ತಂಡವನ್ನು ಮುನ್ನಡೆಸಿದ ಅನುಭವ ಮತ್ತು 2018 ರಿಂದ ಕೆಕೆಆರ್‌ನೊಂದಿಗೆ ನಿತೀಶ್ ರಾಣ ಅವರ ಆಟದ ಅನುಭವದಿಂದ ಉತ್ತಮವಾಗಿ ನಿಭಾಯಿಸುವ ಭರವಸೆ ಇದೆ.
ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಮತ್ತು ಸಹಾಯಕ ಸಿಬ್ಬಂದಿ ಅಡಿಯಲ್ಲಿ, ಅವರು ಮೈದಾನದ ಹೊರಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಪಡೆಯುತ್ತಾರೆ. ತಂಡದಲ್ಲಿರುವ ಹೆಚ್ಚು ಅನುಭವಿ ನಾಯಕರು ಮೈದಾನದಲ್ಲಿ ನಿತೀಶ್‌ಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತಾರೆ. ಶ್ರೇಯಸ್ ಪೂರ್ಣವಾಗಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ" ಎಂದು ಕೆಕೆಆರ್ ಟ್ವಿಟ್ ಮಾಡಿದೆ.
2018ರಿಂದ ರಾಣಾ ಕೆಕೆಆರ್‌ನಲ್ಲಿ ಆಡುತ್ತಿದ್ದು, ಅವರು ಈ ವರೆಗೆ 74 ಪಂದ್ಯಗಳನ್ನು ಆಡಿದ್ದು 26.02 ಸರಾಸರಿಯಲ್ಲಿ ಒಟ್ಟು 1,744 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲಿ 87 ಅವರ ಗರಿಷ್ಠ ಮೊತ್ತವಾಗಿದೆ. ಅವರು 11 ಅರ್ಧ ಶತಕಗಳನ್ನು ಗಳಿಸಿದ್ದಾರೆ.