ಕ್ರೈಸ್ಟ್‌ಚರ್ಚ್ (ನ್ಯೂಜಿಲೆಂಡ್):ಇಲ್ಲಿನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ 219 ರನ್ಗಳಿಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿದೆ. ಈ ಅಲ್ಪ ಮೊತ್ತ ಬೆನ್ನುತ್ತಿರುವ ಎರುರಾಳಿ ನ್ಯೂಜಿಲೆಂಡ್ ತಂಡ ಸದ್ಯ 104 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.
ಮೊದಲು ಕ್ರೀಸ್ಗೆ ಇಳಿದ ನಾಯಕ ಶಿಖರ್ ಧವನ್ (28) ಮತ್ತು ಶುಭ್ಮನ್ ಗಿಲ್ (13) ಅಲ್ಪ ಮೊತ್ತದ ರನ್ ಗಳಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ಎಡವಿದರು. ಬಳಿಕ ಬಂದ ಶ್ರೇಯಸ್ ಅಯ್ಯರ್ ತಮ್ಮ ಆಟಕ್ಕೆ ವೇಗ ನೀಡಿದರು. ಅರ್ಧ ಶತಕಕ್ಕೆ ಕೇವಲ 1 ರನ್ (49) ಬಾಕಿ ಇರುವಾಗಲೇ ವಿಕೆಟ್ ಒಪ್ಪಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.