ಕ್ರೈಸ್ಟ್‌ಚರ್ಚ್ (ನ್ಯೂಜಿಲೆಂಡ್): ಟಿ20 ವಿಶ್ವಕಪ್‌ಗೂ ಮುನ್ನ ಕಿವೀಸ್ ತಂಡದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಟಿ20 ಕ್ರಿಕೆಟ್‌ಗೆ ಪುನರಾಗಮನ ಮಾಡಲಿದ್ದಾರೆ. ವಿಲಿಯಮ್ಸನ್ 14 ತಿಂಗಳ ನಂತರ ಜನವರಿಯಲ್ಲಿ ಮತ್ತೆ ಟಿ20 ಕ್ರಿಕೆಟ್‌ಗೆ ಮರಳಲಿದ್ದಾರೆ. ಜನವರಿ 12 ರಂದು ಪಾಕಿಸ್ತಾನ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯಲ್ಲಿ 4 ಟಿ20 ಪಂದ್ಯಗಳನ್ನು ಆಡಲಿದ್ದಾರೆ.
ಮಂಡಿರಜ್ಜು ಗಾಯದಿಂದ ಭಾರತದಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಿಂದ ಹೊರಗುಳಿದ ವೇಗದ ಬೌಲರ್ ಮ್ಯಾಟ್ ಹೆನ್ರಿ ಕೂಡ ಪಾಕಿಸ್ತಾನ ವಿರುದ್ಧ ಟಿ20 ಸರಣಿಗೆ ಆಯ್ಕೆ ಆಗಿದ್ದಾರೆ. ಜನವರಿ 12 ರಂದು ಪ್ರಾರಂಭವಾಗುವ ಐದು ಪಂದ್ಯಗಳ ಸರಣಿಗಾಗಿ 13 ಆಟಗಾರರ ನ್ಯೂಜಿಲೆಂಡ್ ತಂಡ ಪ್ರಕಟವಾಗಿದೆ.
ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಅವರು ಪಾಕಿಸ್ತಾನ ಸರಣಿಯು ವಿವಿಧ ಕಾರಣಗಳಿಗಾಗಿ ಮಹತ್ವದ್ದಾಗಿದೆ ಮತ್ತು ಟಿ20 ವಿಶ್ವಕಪ್‌ಗೂ ಪಾಕಿಸ್ತಾನ ಸರಣಿ ಒತ್ತು ನೀಡಿಲಿದೆ ಎಂದಿದ್ದಾರೆ. "ಮ್ಯಾಟ್, ಡೆವೊನ್, ಲಾಕಿ ಮತ್ತು ಕೇನ್ ಅವರನ್ನು ಮರಳಿ ಸ್ವಾಗತಿಸಲು ಸಂತೋಷವಾಗಿದೆ. ಅವರು ತಮ್ಮದೇ ಆದ ನಾಲ್ಕು ಗುಣಮಟ್ಟದ ಆಟಗಾರರು ಮತ್ತು ಅವರ ಕೌಶಲ್ಯ ಮತ್ತು ಅನುಭವವು ನಮ್ಮ ತಂಡವನ್ನು ಬಲಪಡಿಸುತ್ತದೆ. ಟಿ20 ವಿಶ್ವಕಪ್‌ಗೆ ಮೊದಲು ಕೇವಲ ಮೂರು ಟಿ20ಸರಣಿಗಳು ಉಳಿದಿವೆ, ಎಲ್ಲಾ ಪಂದ್ಯಗಳು ನಮ್ಮ ಸಿದ್ಧತೆಗೆ ಪ್ರಮುಖವಾಗಿವೆ" ಎಂದು ಅವರು ಹೇಳಿದರು.