ಕರ್ನಾಟಕ

karnataka

ETV Bharat / sports

ಎದೆನೋವು: ಶ್ರೀಲಂಕಾದ ಸ್ಪಿನ್ ಲೆಜೆಂಡ್​ ಮುತ್ತಯ್ಯ ಮುರುಳೀದರನ್ ಆಸ್ಪತ್ರೆಗೆ ದಾಖಲು - ಸನ್​ರೈಸರ್ಸ್ ಹೈದರಾಬಾದ್​

ಪ್ರತಿಷ್ಠಿತ ಕ್ರೀಡಾ ವೆಬ್​ಸೈಟ್​ ಇಎಸ್​ಪಿಎನ್ ಮಾಹಿತಿಯ ಪ್ರಕಾರ ಮುರಳೀಧರನ್​ ಆ್ಯಂಜಿಯೋಪಾಸ್ಟಿಗೆ ಒಳಗಾಗಿದ್ದಾರೆ ಎಂದು ಎನ್ನಲಾಗಿದೆ. ಪ್ರಸ್ತುತ ಅವರಿಗೆ ಸ್ಟಂಟ್​ ಅಳವಡಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದು, ಅವರು ಡಿಸ್ಚಾರ್ಜ್​ ಆದ ನಂತರ ಮತ್ತೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಆದರೆ ಈ ಕುರಿತು ಆಸ್ಪತ್ರೆಯಿಂದ ಯಾವುದೇ ಹೆಲ್ತ್​ ಬುಲೆಟಿನ್ ಪ್ರಕಟವಾಗಿಲ್ಲ.

ಮುತ್ತಯ್ಯ ಮುರುಳೀದರನ್ ಆಸ್ಪತ್ರೆಗೆ ದಾಖಲು
ಮುತ್ತಯ್ಯ ಮುರುಳೀದರನ್ ಆಸ್ಪತ್ರೆಗೆ ದಾಖಲು

By

Published : Apr 18, 2021, 11:04 PM IST

ಚೆನ್ನೈ: ಸನ್​ರೈಸರ್ಸ್​ ಹೈದರಾಬಾದ್​ ತಂಡದ ಬೌಲಿಂಗ್​ ಕೋಚ್​ ಆಗಿರುವ ಶ್ರೀಲಂಕಾದ ಲೆಜೆಂಡ್​ ಮುತ್ತಯ್ಯ ಮುರಳೀಧರನ್​ ಹೃದಯ ಸಂಬಂಧಿ ಸಮಸ್ಯೆಯಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಷ್ಠಿತ ಕ್ರೀಡಾ ವೆಬ್​ಸೈಟ್​ ಇಎಸ್​ಪಿಎನ್ ಮಾಹಿತಿಯ ಪ್ರಕಾರ ಮುರಳೀಧರನ್​ ಆ್ಯಂಜಿಯೋಪಾಸ್ಟಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಅವರಿಗೆ ಸ್ಟಂಟ್​ ಅಳವಡಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದು, ಅವರು ಡಿಸ್ಚಾರ್ಜ್​ ಆದ ನಂತರ ಮತ್ತೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಆದರೆ ಈ ಕುರಿತು ಆಸ್ಪತ್ರೆಯಿಂದ ಯಾವುದೇ ಹೆಲ್ತ್​ ಬುಲೆಟಿನ್ ಪ್ರಕಟವಾಗಿಲ್ಲ.

ಮುರಳೀಧರನ್​ ಪ್ರಸ್ತುತ ಹೈದರಾಬಾದ್​ ತಂಡದೊಂದಿಗೆ ಚೆನ್ನೈನಲ್ಲಿದ್ದರು.

ABOUT THE AUTHOR

...view details