ಕರ್ನಾಟಕ

karnataka

ETV Bharat / sports

RCB vs CSK: ಟೂರ್ನಿಯಲ್ಲಿ ಸಿಕ್ಕಿರುವ ಅತ್ಯಂತ ಪ್ರಮುಖ ಗೆಲುವು- ಜೋಶ್ ಹೇಜಲ್​ವುಡ್​ - ಎಂಎಸ್ ಧೋನಿ

"ಭಾಗಶಃ ಇಲ್ಲಿಯವರೆಗಿನ ಟೂರ್ನಮೆಂಟ್​ನಲ್ಲೇ ನಮಗೆ ಸಿಕ್ಕಂತಹ ಗೆಲುವುಗಳಲ್ಲಿ ಇದು ಪ್ರಮುಖವಾದದ್ದು. ಪ್ಲೇ-ಆಫ್ ಪ್ರವೇಶಿಸಲು ನಾವು ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾದ ಹಂತದಲ್ಲಿದ್ದೇವೆ. ಈ ನಿಟ್ಟಿನಲ್ಲಿ ಇದು ನಮ್ಮ ಮೊದಲ ಹೆಜ್ಜೆ" ಎಂದು ಆಸ್ಟ್ರೇಲಿಯಾದ ವೇಗಿ​ ತಿಳಿಸಿದರು.

Most important victory of the tournament: Hazlewood
ಜೋಶ್ ಹೇಜಲ್​ವುಡ್​

By

Published : May 5, 2022, 12:24 PM IST

ಮುಂಬೈ: ಪ್ಲೇ-ಆಫ್​ ದೃಷ್ಟಿಯಿಂದ ಸಿಎಸ್​ಕೆ ವಿರುದ್ಧ ನಮಗೆ ಸಿಕ್ಕಿರುವ ಅತ್ಯಮೂಲ್ಯ ಗೆಲುವಿದು ಎಂದು ಆರ್​ಸಿಬಿ ವೇಗದ ಬೌಲರ್​ ಜೋಶ್ ಹೇಜಲ್​ವುಡ್​ ಅಭಿಪ್ರಾಯಪಟ್ಟರು. ಬುಧವಾರ ನಡೆದ ಪಂದ್ಯದಲ್ಲಿ ಆರ್​ಸಿಬಿ ಮೊದಲು ಬ್ಯಾಟ್ ಮಾಡಿ 173 ರನ್​ಗಳಿಸಿತ್ತು. ಲೊಮ್ರೋರ್​ 42, ಡುಪ್ಲೆಸಿಸ್​ 38 ಮತ್ತು ದಿನೇಶ್​ ಕಾರ್ತಿಕ್​ ಅಜೇಯ 26 ರನ್​ಗಳಿಸಿದ್ದರು. 174 ರನ್​ಗಳ ಗುರಿ ಬೆನ್ನಟ್ಟಿದ ಸಿಎಸ್​ಕೆ ಉತ್ತಮ ಆರಂಭದ ಹೊರತಾಗಿಯೂ 13 ರನ್​ಗಳಿಂದ ಸೋಲುಂಡಿತು. ಇದೇ ವೇಳೆ, ಸತತ 3 ಸೋಲುಗಳ ನಂತರ ಆರ್​ಸಿಬಿ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಪಡೆದು ಅಂಕಪಟ್ಟಿಯಲ್ಲಿ ಮತ್ತೆ ಟಾಪ್​ 4ಕ್ಕೆ ಪ್ರವೇಶಿಸಿತು.

"ಭಾಗಶಃ ಇಲ್ಲಿಯವರೆಗೆ ಟೂರ್ನಮೆಂಟ್​ನಲ್ಲೇ ನಮಗೆ ಸಿಕ್ಕಂತಹ ಗೆಲುವುಗಳಲ್ಲಿ ಇದು ಪ್ರಮುಖವಾದದ್ದು. ಪ್ಲೇ-ಆಫ್ ಪ್ರವೇಶಿಸಲು ನಾವು ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾದ ಹಂತದಲ್ಲಿದ್ದೇವೆ. ಈ ನಿಟ್ಟಿನಲ್ಲಿ ಇದು ನಮ್ಮ ಮೊದಲ ಹೆಜ್ಜೆ" ಎಂದು ಹೇಜಲ್‌ವುಡ್​ ಹೇಳಿದರು.

"ನಾವು ಕಳೆದ ಮೂರು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ. ಈ ಪಂದ್ಯದಲ್ಲಿ ನಾವು ಎಲ್ಲಾ ವಿಭಾಗದಲ್ಲಿ ಪ್ರಗತಿ ಸಾಧಿಸಿದ್ದೇವೆ. ಮುಂದಿನ ಹಂತ ಪ್ರವೇಶಿಸಲು ನಮ್ಮೆಲ್ಲಾ ಅವಕಾಶಗಳನ್ನು ಹಿಡಿದಿಟ್ಟುಕೊಂಡಿದ್ದೇವೆ. ಆದ್ದರಿಂದ ಇದುವರೆಗಿನ ಗೆಲುವುಗಳಲ್ಲಿ ಇದು ಪ್ರಮುಖವಾಗಿದೆ" ಎಂದು ವಿವರಿಸಿದರು.

ಪ್ರಸ್ತುತ ಆರ್​ಸಿಬಿ 11 ಪಂದ್ಯಗಳನ್ನಾಡಿದ್ದು, 6 ಗೆಲುವು ಮತ್ತು 5 ಸೋಲು ಕಂಡಿದೆ. ಈ ಮುಖೇನ 12 ಅಂಕಗಳನ್ನು ಹೊಂದಿದೆ. ಗುಜರಾತ್​ ಮತ್ತು ಲಖನೌ ತಂಡಗಳು ಈಗಾಗಲೇ ತಮ್ಮ ಪ್ಲೇ-ಆಫ್​ ಸ್ಥಾನಗಳನ್ನು ಖಚಿತಪಡಿಸಿಕೊಂಡಿದ್ದು, ಕೊನೆಯ 2 ಸ್ಥಾನಗಳಿಗೆ ಪೈಪೋಟಿ ಹೆಚ್ಚಾಗಿದೆ. ಉಳಿದ ಮೂರು ಪಂದ್ಯಗಳನ್ನು ಗೆದ್ದರೆ ಆರ್​ಸಿಬಿ 18 ಅಂಕಗಳನ್ನು ಪಡೆಯಲಿದ್ದು ಮೊದಲೆರಡು ಸ್ಥಾನ ಪಡೆಯುವ ಅವಕಾಶವಿದೆ.

ಇದನ್ನೂ ಓದಿ:ಬ್ಯಾಟ್ಸ್​ಮನ್​ಗಳ ವೈಫಲ್ಯ ಸೋಲಿಗೆ ಕಾರಣ: ಧೋನಿ

ABOUT THE AUTHOR

...view details