ಕರ್ನಾಟಕ

karnataka

ETV Bharat / sports

ಮೈಕಲ್ ವಾನ್ ಪ್ರಕಾರ್ ಧೋನಿ ನಂತರ ಸಿಎಸ್​ಕೆ ನಾಯಕ ಸ್ಥಾನಕ್ಕೆ ಈತ ಸೂಕ್ತನಂತೆ! - Ravindra Jadeja

ಸೋಮವಾರ ನಡೆದ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 4 ಕ್ಯಾಚ್ ಮತ್ತು ಜೋಶ್ ಬಟ್ಲರ್​​ ಹಾಗೂ ಶಿವಂ ದುಬೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ರವೀಂದ್ರ ಜಡೇಜಾರ ಆಲ್​ರೌಂಡರ್​ ಸಾಮರ್ಥ್ಯವೇ ಅವರನ್ನು ಧೋನಿ ಸ್ಥಾನಕ್ಕೆ ಸೂಕ್ತವಾದ ಅಭ್ಯರ್ಥಿಯನ್ನಾಗಿಸಿದೆ ಎಂದು ವಾನ್​​ ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್

By

Published : Apr 20, 2021, 4:40 PM IST

ಮುಂಬೈ:ಮೂರು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿಯ ನಂತರ ಆಲ್​ರೌಂಡರ್​ ರವೀಂದ್ರ ಜಡೇಜಾ ತಂಡದ ನಾಯಕನಾಗಬೇಕೆಂದು ಮೈಕಲ್​ ವಾನ್​ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಐಪಿಎಲ್​ನಲ್ಲಿ ಮಾತ್ರ ಇನ್ನೂ ಆಡುತ್ತಿದ್ದು, ಈ ಆವೃತ್ತಿ ನಂತರ ಐಪಿಎಲ್​​ನಿಂದಲೂ ದೂರವಾಗುವ ಸಾಧ್ಯತೆಯಿದೆ. ಆದರೆ ಸಿಎಸ್​ಕೆ ಸಿಇಒ ಪ್ರಕಾರ ಧೋನಿ ಮತ್ತೊಂದು ಆವೃತ್ತಿ ಆಡಬೇಕೆಂದು ಬಯಸಿದ್ದಾರೆ. ಇನ್ನು ಧೋನಿಯ ನಂತರ ಅವರ ಉತ್ತರಾಧಿಕಾರಿಯನ್ನು ಈಗಲೇ ಕಂಡುಕೊಳ್ಳಬೇಕೆಂದಿರುವ ಮೈಕಲ್ ವಾನ್, ಅದಕ್ಕೆ ಸೂಕ್ತವಾದ ಆಟಗಾರ ಜಡೇಜಾ ಎಂದು ಹೇಳಿದ್ದಾರೆ.

ಸೋಮವಾರ ನಡೆದ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 4 ಕ್ಯಾಚ್ ಮತ್ತು ಜೋಶ್ ಬಟ್ಲರ್​​ ಹಾಗೂ ಶಿವಂ ದುಬೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ರವೀಂದ್ರ ಜಡೇಜಾರ ಆಲ್​ರೌಂಡರ್​ ಸಾಮರ್ಥ್ಯವೇ ಅವರನ್ನು ಧೋನಿ ಸ್ಥಾನಕ್ಕೆ ಸೂಕ್ತವಾದ ಅಭ್ಯರ್ಥಿಯನ್ನಾಗಿಸಿದೆ ಎಂದು ಹೇಳಿದ್ದಾರೆ.

"ಧೋನಿ ಇನ್ನೂ 2-3 ವರ್ಷಗಳ ಕಾಲ ಆಡುತ್ತಾರೆ ಎಂದು ನೀವು ಹೇಳಬಹುದು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅದಕ್ಕಿಂತ ಹೆಚ್ಚು ವರ್ಷ ಆತ ಆಡಲಾರ. ಆದ್ದರಿಂದ ನೀವು ಯಾರೊಂದಿಗೆ ತಂಡ ಮುನ್ನಡೆಯಬೇಕು ಎಂಬುದನ್ನು ನೋಡಬೇಕಾಗುತ್ತದೆ. ನನ್ನ ಪ್ರಕಾರ ರವೀಂದ್ರ ಜಡೇಜಾರ ಸುತ್ತ ತಂಡವನ್ನು ನಿರ್ಮಿಸಬಹುದು. ಅವರು ಬೌಲಿಂಗ್, ಫಿಲ್ಡಿಂಗ್, ಬ್ಯಾಟಿಂಗ್ ಮತ್ತು ಮೈಂಡ್​ಸೆಟ್​ನಲ್ಲೂ ಅತ್ಯುತ್ತಮವಾಗಿದ್ದಾರೆ" ಎಂದು ವಾನ್ ಕ್ರಿಕ್​ಬಜ್​ ಸಂವಾದದಲ್ಲಿ ಹೇಳಿದ್ದಾರೆ.

ಅಲ್ಲದೆ ಜಡೇಜಾ ಅಗ್ರ ನಾಲ್ಕರಲ್ಲಿ ಬ್ಯಾಟಿಂಗ್ ಮಾಡಬಲ್ಲ ಆಟಗಾರ. ಜೊತೆಗೆ ಎದುರಾಳಿಗಳ ಬಲವನ್ನು ಅವಲಂಬಿಸಿ ಆರಂಭದ ಓವರ್​ಗಳನ್ನು ಮಾಡಬಲ್ಲ ಎಂದು ವಾನ್ ಹೇಳಿದ್ದಾರೆ.

ಇದನ್ನು ಓದಿ: ಆಟದ ಬಗ್ಗೆ ಗ್ಯಾರಂಟಿ ಕೊಡಲಾರೆ, ಫಿಟ್ನೆಸ್​ ಬಗ್ಗೆ ನೀಡಬಹುದು: ಧೋನಿ

ABOUT THE AUTHOR

...view details