ನವದೆಹಲಿ: ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಬುಧವಾರ ತಮ್ಮ ಟ್ವಿಟರ್ನಲ್ಲಿ ಟೆಸ್ಟ್ ತಂಡದ ಜರ್ಸಿ ತೊಟ್ಟಿರುವ ಫೋಟೋ ಶೇರ್ ಮಾಡಿಕೊಂಡಿದ್ದು, ತಾವೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಇನ್ನೂ ಸಾಕಷ್ಟು ದೂರ ಸಾಗಬೇಕಿದೆ ಎಂದು ಬರೆದುಕೊಂಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿರುವ ರವೀಂದ್ರ ಜಡೇಜಾ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಆದರೆ ಜಡೇಜಾ ಮೂರು ಮಾದರಿಯಲ್ಲಿ ಸಕ್ರಿಯರಾಗಿರುವುದರಿಂದ ಕೆಲಸದೊತ್ತಡವನ್ನು ನಿಯಂತ್ರಿಸಲು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿಯಾಗಲಿದ್ದಾರೆ ಎಂದು ವರದಿಯಾಗಿದ್ದವು. ಆದರೆ ಇದನ್ನೆಲ್ಲಾ ಒಂದೇ ಪೋಸ್ಟ್ ಮೂಲಕ ಜಡೇಜಾ ತೆರೆ ಎಳೆದಿದ್ದಾರೆ.