ಕರ್ನಾಟಕ

karnataka

ETV Bharat / sports

ಶೇನ್‌ ವಾರ್ನ್‌ ಕಳೆದುಕೊಂಡ ಕ್ರಿಕೆಟ್‌ಲೋಕ: ಸ್ಪಿನ್ ಮಾಂತ್ರಿಕನ ಸಾವಿಗೆ ಜಗತ್ತಿನೆಲ್ಲೆಡೆ ಕಂಬನಿ - ಸ್ಪಿನ್ ದಿಗ್ಗಜ ಶೇನ್​ ವಾರ್ನ್ ನಿಧನ

ಆಸ್ಟ್ರೇಲಿಯಾ ಕ್ರಿಕೆಟ್​ ದಂತಕಥೆ ಶೇನ್​ ವಾರ್ನ್ ಅವರು ಥಾಯ್ಲೆಂಡ್‌ನಲ್ಲಿ​ ಹೃದಯಾಘಾತದಿಂದ ನಿಧನರಾಗಿದ್ದು, ಜಗತ್ತಿನಾದ್ಯಂತ ಕ್ರಿಕೆಟರುಗಳು​​ ಕಂಬನಿ ಮಿಡಿದಿದ್ದಾರೆ.

Legend Shane warne dies
Legend Shane warne dies

By

Published : Mar 4, 2022, 8:53 PM IST

ಹೈದರಾಬಾದ್​:ಆಸ್ಟ್ರೇಲಿಯಾ ಕ್ರಿಕೆಟ್​ನ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ದಿಢೀರ್​ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

52 ವರ್ಷದ ಮಾಜಿ ಕ್ರಿಕೆಟಿಗನ ದಿಢೀರ್ ಸಾವಿನಿಂದಾಗಿ ಕ್ರಿಕೆಟ್ ಲೋಕ ಆಘಾತಕ್ಕೊಳಗಾಗಿದ್ದು, ಸಾರ್ವಕಾಲಿಕ ಶ್ರೇಷ್ಠ ಆಟಗಾರನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ವಿರೇಂದ್ರ ಸೆಹ್ವಾಗ್​: ನಮ್ಮಿಂದ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಶ್ರೇಷ್ಠ ಸ್ಪಿನ್ನರ್​ಗಳಲ್ಲಿ ಒಬ್ಬರಾದ ಸೂಪರ್​ ಸ್ಟಾರ್​ ವಾರ್ನ್​ ಇನ್ನಿಲ್ಲ. ಬದುಕು ಬಹಳ ಸೂಕ್ಷ್ಮವಾಗಿದೆ. ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.

ಶೋಯೆಬ್​ ಅಖ್ತರ್​:ದಂತಕಥೆ ಶೆನ್​ ವಾರ್ನ್ ನಿಧನದ ಆಘಾತಕಾರಿ ಸುದ್ದಿ ಕೇಳಿ ದುಃಖಿತನಾಗಿದ್ದೇನೆ. ಎಂತಹ ದಂತಕಥೆ, ಎಂತಹ ಮನುಷ್ಯ, ಎಂತಹ ಕ್ರಿಕೆಟಿಗ ಎಂದು ಬರೆದುಕೊಂಡಿದ್ದಾರೆ.

ಶಿಖರ್ ಧವನ್​:ಶೇನ್​ ವಾರ್ನ್​ ಸಾವಿನ ಸುದ್ಧಿ ಕೇಳಿ ಆಘಾತವಾಗಿದೆ. ಕ್ರಿಕೆಟ್​ಗೆ ತುಂಬಲಾರದ ನಷ್ಟ. ನನ್ನ ಬಳಿ ಯಾವುದೇ ಪದಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಹಾನೆ: ಶೇನ್​ ವಾರ್ನ್​ ಇನ್ನಿಲ್ಲ ಎಂಬ ಮಾತು ಕೇಳಿ ಶಾಕ್ ಆಗಿದೆ. ನಿಮ್ಮೊಂದಿಗೆ ಅತ್ಯದ್ಭುತವಾದ ಕೆಲವೊಂದು ವರ್ಷ ಜೊತೆಯಾಗಿ ಕಳೆದಿರುವುದಕ್ಕೆ ಹೆಮ್ಮೆ ಇದೆ.

ಗೌತಮ್ ಗಂಭೀರ್​: ಕೆಲವೇ ಕೆಲ ಪ್ರತಿಭೆಗಳೊಂದಿಗೆ ನಿಮ್ಮ ಮನೋಭಾವವನ್ನು ಹೊಂದಿಸಬಹುದು. ಬೌಲಿಂಗ್​ ಅನ್ನು ಮ್ಯಾಜಿಕ್​ನಂತೆ ಕಾಣುವ ರೀತಿ ಮಾಡಿದ್ದೀರಿ.

ವಖಾರ್ ಯೂನಿಸ್​:ಶೆನ್ ವಾರ್ನ್​ ಇನ್ನಿಲ್ಲ. ಈ ಸುದ್ದಿ ಕೇಳಿ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಈ ಸುದ್ದಿ ನಮ್ಮ ಕ್ರಿಕೆಟ್​ ಜಗತ್ತಿಗೆ ದೊಡ್ಡ ನಷ್ಟ. ಗುಡ್​ಬೈ ಲೆಜೆಂಡ್.

ಕುಮಾರ್ ಸಂಗಕ್ಕಾರ: ನಿಜಕ್ಕೂ ಇದೊಂದು ಶಾಕ್. ಸ್ನೇಹಿತನ ಕಳೆದುಕೊಂಡಿರುವ ಬಗ್ಗೆ ಆಘಾತವಾಗಿದೆ. ನಂಬಲು ಸಾಧ್ಯವಾಗುತ್ತಿಲ್ಲ.

ಇದರ ಜೊತೆಗೆ, ರಿಷಭ್ ಪಂತ್, ಬ್ರಾಥ್​ವೈಟ್, ವಾಷಿಂಗ್ಟನ್ ಸುಂದರ್​, ರೋಹಿತ್ ಶರ್ಮಾ, ಹರ್ಷಾ ಬೋಗ್ಲೆ ಸೇರಿ ಅನೇಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details