ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅರ್ಥಪೂರ್ಣ ದೀಪಾವಳಿ ಆಚರಣೆ ಮಾಡುವುದಕ್ಕೆ ಟಿಪ್ಸ್ ಕೊಡುತ್ತೇನೆ ಎಂದು ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದರು. ಆದರೆ, ಈ ಹೇಳಿಕೆಯಿಂದ ಭಾರತೀಯ ನಾಯಕ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಟೀಕೆಯನ್ನು ಎದುರಿಸುವಂತಾಗಿದೆ.
ದೀಪಾವಳಿ ಹತ್ತಿರ ಬರುತ್ತಿದ್ದು, ಯಾವುದೇ ರೀತಿಯ ಪ್ರಾಣಿ, ಪಕ್ಷಿಗಳು ಮತ್ತು ಪರಿಸರಕ್ಕೆ ಹಾನಿಯಾಗದಂತೆ ಅರ್ಥಪೂರ್ಣವಾಗಿ ಆಚರಿಸಲು ಕೆಲವು ಟಿಪ್ಸ್ಗಳನ್ನು ನೀಡುತ್ತೇನೆ ಎಂದು ಕೊಹ್ಲಿ ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು.
ಇಡೀ ವಿಶ್ವಕ್ಕೆ ಮತ್ತು ನಮಗೆಲ್ಲ ಇದು ಕಠಿಣ ವರ್ಷವಾಗಿದೆ. ಅದರಲ್ಲೂ 2ನೇ ಅಲೆಯ ಕೋವಿಡ್-19 2021ಕ್ಕೆ ಭಾರಿ ಹೊಡೆತ ನೀಡಿದೆ. ಹಬ್ಬದ ಋತುವಿನಲ್ಲಿ ನಾವು ದೀಪಾವಳಿಗೆ ಸಿದ್ಧರಾಗುತ್ತಿದ್ದೇವೆ.
ಅದಕ್ಕಾಗಿ ನೀವು ಮತ್ತು ನಿಮ್ಮ ಪ್ರೀತಿ ಪಾತ್ರರಾದ ಕುಟುಂಬಸ್ಥರ ಜೊತೆಗೆ ಅರ್ಥಪೂರ್ಣ ದೀಪಾವಳಿಯನ್ನ ಆಚರಿಸಲು ನಾನು ಕೆಲವು ಟಿಪ್ಸ್ಗಳನ್ನು ನೀಡುತ್ತೇನೆ, ಅದಕ್ಕಾಗಿ ತಮ್ಮ ಪೇಜ್ ಎದುರು ನೋಡುತ್ತಿರಿ ಎಂದು ಕೊಹ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು.