ಕರ್ನಾಟಕ

karnataka

Jasprit Bumrah: ಐರ್ಲೆಂಡ್​ ಪ್ರವಾಸದಲ್ಲಿ ತಂಡಕ್ಕೆ ಮರಳಲಿದ್ದಾರೆ ಸ್ಟಾರ್​ ವೇಗಿ ಬುಮ್ರಾ

ಗಾಯದಿಂದಾಗಿ ಸುಮಾರ ಒಂದು ವರ್ಷಗಳಿಂದ ಭಾರತ ತಂಡದಿಂದ ಹೊರಗುಳಿದಿರುವ ಸ್ಟಾರ್​ ವೇಗಿ ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ಪ್ರವಾಸದ ವೇಳೆ ಮರಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

By

Published : Jun 18, 2023, 4:32 PM IST

Published : Jun 18, 2023, 4:32 PM IST

Jasprit Bumrah
ಜಸ್ಪ್ರೀತ್ ಬುಮ್ರಾ

ಇತ್ತೀಚಿನ ವರದಿಗಳ ಪ್ರಕಾರ ಈ ವರ್ಷದ ಏಷ್ಯಾಕಪ್‌ಗೆ ಮುಂಚಿತವಾಗಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮೈದಾನಕ್ಕೆ ಮರಳುವ ನಿರೀಕ್ಷೆಯಿದೆ. ಇದರಿಂದ ಮುಂದಿನ ಏಕದಿನ ಮತ್ತು ಟಿ 20 ಸರಣಿಗಳಿಗೆ ಬಲಿಷ್ಠ ಬೌಲಿಂಗ್ ಪಡೆಯೊಂದಿಗೆ ಭಾರತ ಕಣಕ್ಕಿಳಿಯಲಿದೆ. ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಬುಮ್ರಾ ಆಗಸ್ಟ್‌ನಲ್ಲಿ ಭಾರತದ ಐರ್ಲೆಂಡ್ ಪ್ರವಾಸದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ವಿಶ್ವ ಕಪ್​ಗೂ ಮುನ್ನ ಗಾಯಕ್ಕೆ ಜಸ್ಪ್ರೀತ್ ಬುಮ್ರಾ ತುತ್ತಾದರು. ಇದರಿಂದ ಭಾರತಕ್ಕೆ ದೊಡ್ಡ ನಷ್ಟವೇ ಆಗಿತ್ತು. ಐಸಿಸಿ ಮೆಗಾ ಈವೆಂಟ್‌ಗೆ ಆಸ್ಟ್ರೇಲಿಯಾಕ್ಕೆ ಮೆನ್​ ಇನ್​ ಬ್ಲೂ ತೆರಳುವ ಮುನ್ನ ಭಾರತಕ್ಕೆ ಇದು ದೊಡ್ಡ ನಷ್ಟವಾಗಿತ್ತು. ಅವರ ಗಾಯವು ಉಲ್ಬಣಗೊಂಡಿತು, ಇದರಿಂದಾಗಿ ಅವರು ಏಷ್ಯಾ ಕಪ್ 2022 ರ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು.

ಸಪ್ಟೆಂಬರ್​ನಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದಿದ್ದಾಗ ಆಡಿದ ಪಂದ್ಯವೇ ಕೊನೆಯದ್ದಾಗಿತ್ತು. ಇದಾದ ನಂತರ ಗಾಯಗೊಂಡ ಅವರು ಶಸ್ತ್ರಚಿಕಿತ್ಸೆಗೆ ಒಳಗಾದದರು. ಹೀಗಾಗಿ ಈ ವರ್ಷದ ಇಂಡಿಯನ್​ ಪ್ರೀಮಿಯರ್​ ಲೀಗ್​ನಿಂದಲೂ ಸಂಪೂರ್ಣ ಹೊರಗುಳಿದಿದ್ದರು. ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಪಂದ್ಯದಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ.

ಜುಲೈ 1 ರಿಂದ 5 ವರೆಗೆ 2022 ರಲ್ಲಿ ಇಂಗ್ಲೆಂಡ್​ನ ಎಡ್ಜಬಸ್ಟನ್​ನಲ್ಲಿ ನಡೆದ ಟೆಸ್ಟ್​ ಬುಮ್ರಾ ಆಡಿದ ಕೊನೆಯ ಟೆಸ್ಟ್​ ಪಂದ್ಯವಾದರೆ, ಅದೇ ಸರಣಿಯಲ್ಲಿ ಇಂಗ್ಲೆಂಡ್​ ವಿರುದ್ಧ ಲಾರ್ಡ್ಸ್​ನಲ್ಲಿ ಕೊನೆಯ ಏಕದಿನ ಪಂದ್ಯವನ್ನು ಜುಲೈ 14 ರಂದು ಆಡಿದ್ದಾರೆ. ಹೀಗಾಗಿ ವೈಟ್​ ಜರ್ಸಿಯಲ್ಲಿ ಕೆಂಪು ಬಾಲ್​ನಲ್ಲಿ ಆಡಿ ಒಂದು ವರ್ಷವೇ ಕಳೆದಿದೆ. ಏಕದಿನ ಪಂದ್ಯಗಳನ್ನೂ ಆಡಿ ವರ್ಷವಾಗಿದೆ.

ಹೀಗಿರುವಾಗ ಭಾರತ ತಂಡದ ಕ್ರಿಕೆಟ್​ ಅಭಿಮಾನಿಗಳಿಗೆ ಸಂತಸದ ಸುದ್ದಿ ಎಂದರೆ ಮುಂದಿನ ಪ್ರಮುಖ ವೈಟ್​ ಬಾಲ್​ ಪಂದ್ಯಗಳಿಗೆ ಬುಮ್ರಾ ಕಮ್​ ಬ್ಯಾಕ್​ ಮಾಡಿಲಿದ್ದಾರೆ ಎಂಬುದು. ವೆಸ್ಟ್​ ಇಂಡೀಸ್​ ಪ್ರವಾಸದ ನಂತರ ನಡುವಿನ ಕೆಲ ದಿನಗಳಲ್ಲಿ ಭಾರತ ಐರ್ಲೆಂಡ್​ ಪ್ರವಾಸವನ್ನು ಮಾಡಲಿದ್ದು, ಇದಕ್ಕೆ ಸ್ಟಾರ್​ ವೇಗಿ ತೆರಳಲಿದ್ದು, ಏಷ್ಯಾ ಕಪ್​ ವೇಳೆಗೆ ತಂಡಕ್ಕೆ ಸಂಪೂರ್ಣ ಫಿಟ್​ ಆಗಲಿದ್ದಾರೆ ಎಂಬ ಮಾಹಿತಿ ಇದೆ.

ಈ ವರ್ಷದ ಕೊನೆಯಲ್ಲಿ ಎಂದರೆ ಅಕ್ಟೋಬರ್​ ಮತ್ತು ನವೆಂಬರ್​ ವೇಳೆಗೆ ಭಾರತದಲ್ಲಿ ವಿಶ್ವಕಪ್​ ಆಯೋಜನೆ ಆಗಲಿದೆ. ಇದಕ್ಕೂ ಮುನ್ನ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಹೈಬ್ರಿಡ್​ ಮಾದರಿಯ ಏಕದಿನ ಏಷ್ಯಾಕಪ್​ ನಡೆಯಲಿದೆ. ಇದಕ್ಕೂ ಮುನ್ನ ಬುಮ್ರಾ ತಂಡಕ್ಕೆ ಸೇರುತ್ತಿದ್ದಾರೆ. ವಿಶ್ವಕಪ್​ ವೇಳೆಗೆ ಸಂಪೂರ್ಣ ಫಾರ್ಮ್​ನಲ್ಲಿದ್ದರೆ ತಂಡ ಬಲಿಷ್ಠವಾಗಲಿದೆ.

ಭಾರತದ ಏಷ್ಯಾಕಪ್ 2023 ಅಭಿಯಾನಕ್ಕಾಗಿ ಭಾರತೀಯ ವೇಗಿ ತಂಡಕ್ಕೆ ಮರಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಆದಾಗ್ಯೂ, ನಿತಿನ್ ಪಟೇಲ್ ಮತ್ತು ಎಸ್ ರಜನಿಕಾಂತ್ ಅವರ ಕಣ್ಗಾವಲಿನ ಅಡಿಯಲ್ಲಿ ಬುಮ್ರಾ ಅವರ ಪುನರ್ವಸತಿ ಸುಗಮವಾಗಿ ಸಾಗಿದೆ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:Usman Khawaja: ಆ್ಯಶಸ್​ ಟೆಸ್ಟ್​- ಇಂಗ್ಲೆಂಡ್​ ನೆಲದಲ್ಲಿ ಉಸ್ಮಾನ್​ ಖವಾಜಾ ಚೊಚ್ಚಲ ಶತಕ, ಆಸೀಸ್​ 5ಕ್ಕೆ 311

ABOUT THE AUTHOR

...view details