ಕರ್ನಾಟಕ

karnataka

ETV Bharat / sports

ನಾವು ಚೆನ್ನಾಗಿ ಆಡಲಿಲ್ಲ, ಆದರೂ ಗೆದ್ದಿದ್ದು ತುಂಬಾ ಸಂತೋಷ ತಂದಿದೆ: ಧೋನಿ - ಅಬು ಧಾಬಿ

ಭಾನುವಾರ ಕೋಲ್ಕತ್ತಾ ನೈಟ್​ ರೈಡರ್ಸ್ ನೀಡಿದ್ದ 172 ರನ್​ಗಳ ಗುರಿಯನ್ನು ಸಿಎಸ್​ಕೆ ಕೊನೆಯ ಎಸೆತದಲ್ಲಿ ತಲುಪಿ 2 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಇದು ಐಪಿಎಲ್ ಪುನಾರಂಭಗೊಂಡ ನಂತರ ಸಿಎಸ್​ಕೆ ಸಾಧಿಸಿದ ಸತತ 3ನೇ ಗೆಲುವಾಗಿದೆ.

CSK beat KKR
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಸ್ ಧೋನಿ

By

Published : Sep 26, 2021, 10:17 PM IST

ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾನುವಾರ ಕೆಕೆಆರ್​ ವಿರುದ್ಧ 2 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ತಂಡದ ನಾಯಕ ಧೋನಿ ತಮ್ಮ ತಂಡ ಈ ಪಂದ್ಯದಲ್ಲಿ ಚೆನ್ನಾಗಿ ಆಡಲಿಲ್ಲ, ಆದರೂ ಕೊನೆಗೆ ಗೆಲುವು ನಮ್ಮದಾಗಿದ್ದು ತುಂಬಾ ಸಂತೋಷ ತಂದಿದೆ ಎಂದು ಸಿಎಸ್​ಕೆ ತಂಡದ ನಾಯಕ ಎಂ.ಎಸ್.ಧೋನಿ ಹೇಳಿದ್ದಾರೆ.

ಭಾನುವಾರ ಕೋಲ್ಕತ್ತಾ ನೈಟ್​ ರೈಡರ್ಸ್ ನೀಡಿದ್ದ 172 ರನ್​ಗಳ ಗುರಿಯನ್ನು ಸಿಎಸ್​ಕೆ ಕೊನೆಯ ಎಸೆತದಲ್ಲಿ ತಲುಪಿ 2 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಇದು ಐಪಿಎಲ್ ಪುನಾರಂಭಗೊಂಡ ನಂತರ ಸಿಎಸ್​ಕೆ ಸಾಧಿಸಿದ ಸತತ 3ನೇ ಗೆಲುವಾಗಿದೆ.

"ಇದೊಂದು ಒಳ್ಳೆಯ ಗೆಲುವು. ಕೆಲವೊಮ್ಮೆ ಉತ್ತಮ ಕ್ರಿಕೆಟ್ ಆಡಿದಾಗಲೂ ನೀವು ಸೋತಿರುತ್ತೀರಿ. ಆದರೆ ನೀವು ಚೆನ್ನಾಗಿ ಆಡದಿದ್ದರೂ ಪಂದ್ಯ ಗೆದ್ದಾಗ ಅದು ತುಂಬಾ ಸಂತೋಷ ತರುತ್ತದೆ. ಈ ಪಂದ್ಯದಲ್ಲಿ ಎರಡೂ ತಂಡಗಳೂ ಉತ್ತಮ ಕ್ರಿಕೆಟ್ ಆಡಿವೆ ಮತ್ತು ಇದು ಪ್ರೇಕ್ಷಕರಿಗೆ ತುಂಬಾ ಸಂತೋಷ ಉಂಟುಮಾಡಿದೆ ಎಂದು ಭಾವಿಸುತ್ತೇನೆ" ಎಂದು ಧೋನಿ ಪ್ರಶಸ್ತಿ ಸಮಾರಂಭದಲ್ಲಿ ಹೇಳಿದ್ದಾರೆ.

ನಾವು ಉತ್ತಮವಾಗಿ ಬೌಲಿಂಗ್ ಮಾಡಿದೆವು. ವೇಗದ ಬೌಲರ್​ಗಳಿಗೆ ಈ ಪಿಚ್​ನಲ್ಲಿ ಬೌಲಿಂಗ್ ಮಾಡುವುದು ಸುಲಭವಲ್ಲ. ಹಾಗಾಗಿ ನಾವು ವೇಗಿಗಳಿಗೆ ಚಿಕ್ಕ ಸ್ಪೆಲ್​ ನೀಡಿದೆವು. ನನ್ನ ಪ್ರಕಾರ 170(172) ಈ ಪಿಚ್​ನಲ್ಲಿ ತುಂಬಾ ದೊಡ್ಡ ಮೊತ್ತ. ಈ ಪಂದ್ಯವನ್ನು ಅತ್ಯಂತ ರೋಚಕ ಸ್ಥಿತಿಗೆ ಕೊಂಡೊಯ್ದಿದ್ದಕ್ಕೆ ಕೆಕೆಆರ್​ಗೆ ಖಂಡಿತ ಮೆಚ್ಚುಗೆ ಸೂಚಿಸಬೇಕು ಎಂದರು.

ಯುಎಇಯಲ್ಲಿ ಸತತ 6ನೇ ಗೆಲುವಿನ ಪ್ರತಿಕ್ರಿಯಿಸಿದ ಧೋನಿ, ನಾವು (ಕಳೆದ ವರ್ಷದ ವೈಫಲ್ಯ) ಅವುಗಳಿಂದ ಕಲಿಯಬೇಕು ಮತ್ತು ಅದನ್ನು ಬಳಸಿಕೊಂಡು ಬಲಿಷ್ಠರಾಗಿ ಹಿಂತಿರುಗಬೇಕು ಎಂದು ಹೇಳಿದರು.

ಇದನ್ನೂ ಓದಿ: ಕೆಕೆಆರ್​ ವಿರುದ್ಧ 2 ವಿಕೆಟ್​ಗಳ ರೋಚಕ ಜಯ ಸಾಧಿಸಿ ಅಗ್ರಸ್ಥಾನಕ್ಕೇರಿದ ಚೆನ್ನೈ ಸೂಪರ್​ ಕಿಂಗ್ಸ್​

ABOUT THE AUTHOR

...view details