ಚೆನ್ನೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯಕ್ಕೆ ಹೈದರಾಬಾದ್ ತಂಡದ ಆಟಗಾರ ಮನೀಶ್ ಪಾಂಡೆ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರ ಆಯ್ಕೆದಾರರದ್ದು ಎಂದು ತಂಡದ ನಾಯಕ ಡೇವಿಡ್ ವಾರ್ನರ್ ಹೇಳಿದ್ದಾರೆ.
ಎಸ್‌ಆರ್‌ಹೆಚ್ ತಂಡ ಭಾನುವಾರ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಪಾಂಡೆ ಅವರನ್ನು ಕೈಬಿಟ್ಟು 23 ವರ್ಷದ ವಿರಾಟ್ ಸಿಂಗ್ ಅವರಿ ಆಡುವ 11ರ ಬಳಗದಲ್ಲಿ ಅವಕಾಶ ನೀಡಲಾಗಿತ್ತು. ಈ ಪಂದ್ಯದಲ್ಲಿ ವಿರಾಟ್ ಕೇವಲ ನಾಲ್ಕು ರನ್ಗಳಿಸಿ ಅವೇಶ್ ಖಾನ್ಗೆ ವಿಕೆಟ್ ಒಪ್ಪಿಸಿದ್ದರು.
"ತಂಡದ 11ರ ಬಳಗದಲ್ಲಿ ಯಾರು ಆಡಬೇಕು ಎನ್ನುವುದು ಆಯ್ಕೆದಾರರ ಮೇಲೆ ಅವಲಂಬಿತವಾಗಿರುತ್ತದೆ. ಇದು ನನ್ನ ಅಭಿಪ್ರಾಯದ ಪ್ರಕಾರ ನಡೆದಿಲ್ಲ. ಆದರೆ ದಿನದ ಕೊನೆಯಲ್ಲಿ ಅದು ಅವರು ತೆಗೆದುಕೊಂಡ ನಿರ್ಧಾರ. ಹಾಗಂತ ವಿರಾಟ್ ಒಳ್ಳೆಯ ಆಟಗಾರರನಲ್ಲ ಎಂದರ್ಥವಲ್ಲ. ಅವನು ಉತ್ತಮ ಆಟಗಾರ. ಈ ಪಿಚ್ನಲ್ಲಿ ಹೆಚ್ಚು ಸಮಯ ಕ್ರಿಸ್ ಕಚ್ಚಿ ನಿಲ್ಲುವುದು ತುಂಬಾ ಕಷ್ಟ. ಡೆಲ್ಲಿ ತಂಡ ಮಧ್ಯದಲ್ಲಿ ಚೆನ್ನಾಗಿ ಬೌಲ್ ಮಾಡಿದರು. ಅದು ನಮಗೆ ಸವಾಲಾಗಿ ಪರಿಣಮಿಸಿತು "ಎಂದು ವಾರ್ನರ್ ವಿವರಿಸಿದರು.
ಇದನ್ನೂ ಓದಿ : ಸೂಪರ್ ಓವರ್ನಲ್ಲಿ ರನ್ಗಳಿಸಲು ವಿಫಲ: ಕಾರಣ ತಿಳಿಸಿದ ವಿಲಿಯಮ್ಸನ್