ಬೆಂಗಳೂರು:ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಳೆ ಮತ್ತೆ ಗೆಲುವಿನ ಲಯಕ್ಕೆ ಮರಳಲು ಸಜ್ಜಾಗಿದೆ. ಲೀಗ್ನ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಚೊಚ್ಚಲ ಗೆಲುವಿಗೆ ಕಾಯುತ್ತಿದೆ. ತಂಡವನ್ನು ಹುರಿದುಂಬಿಸಲು ಬೆಂಗಳೂರಿಗೆ ರಿಷಬ್ ಪಂತ್ ಬಂದಿದ್ದು ಅಭ್ಯಾಸದ ವೇಳೆ ತಂಡದೊಂದಿಗಿದ್ದು ಸಂವಾದ ಮಾಡಿದ್ದಾರೆ.
ಆರ್ಸಿಬಿಯಲ್ಲಿ ಬ್ಯಾಟರ್ಗಳು ಫಾರ್ಮ್ನಲ್ಲಿದ್ದು ಬೃಹತ್ ಮೊತ್ತ ಕಲೆ ಹಾಕಿದರೂ ಸೋಲನುಭವಿಸುತ್ತಿದ್ದಾರೆ. ಬೆಂಗಳೂರು ತಂಡವು ಬೌಲಿಂಗ್ನಲ್ಲಿ ನಿಯಂತ್ರಣ ಸಾಧಿಸುವಲ್ಲಿ ವಿಫಲವಾಗುತ್ತಿದೆ. ಮೊದಲ ಪಂದ್ಯ ಮುಂಬೈ ವಿರುದ್ಧವೂ ಡೆತ್ ಓವರ್ನಲ್ಲಿ ತಿಲಕ್ ವರ್ಮಾ ಸವಾರಿ ಮಾಡಿದ್ದರು. ಕೆಕೆಆರ್ ವಿರುದ್ಧ ಶಾರ್ದೂಲ್ ಠಾಕೂರ್ ಮತ್ತು ಲಕ್ನೊ ವಿರುದ್ಧ ಸ್ಟೋಯಿನ್ಸ್ ಮತ್ತು ಪೂರನ್ ಮಾರಕರಾದರು.
ಹೆಚ್ಚುವರಿ ರನ್ಗೆ ಕಡಿವಾಣ ಅಗತ್ಯ:ಬೆಂಗಳೂರು ತಂಡ ಮುಂಬೈ ಎದುರು 11, ಕೆಕೆಆರ್ 23 ಮತ್ತು ಲಕ್ನೋ ಮೇಲೆ 16 ರನ್ ಹೆಚ್ಚುವರಿ ನೀಡಿತ್ತು. ತಂಡದ ಸೋಲಿಗೆ ಇದೂ ಕಾರಣ ಎಂದರೆ ತಪ್ಪಾಗದು. 5ನೇ ವಿಕೆಟ್ ಜಾಗದಲ್ಲಿ ಬೌಲಿಂಗ್ ಮಾಡಿ ರನ್ ಕಡಿವಾಣಕ್ಕೆ ಪ್ರಯತ್ನಿಸಿ, ಹೆಚ್ಚು ವೈಡ್ ಬಾಲ್ ಹಾಕುತ್ತಿರುವುದು ತಂಡಕ್ಕೆ ಹೊರೆಯಾಗಿದೆ.
ಹಸರಂಗ, ಜೋಶ್ ತಂಡಕ್ಕೆ ಸೇರ್ಪಡೆ:ಲಂಕಾ ಬೌಲರ್ ವನಿಂದು ಹಸರಂಗ ಹಾಗೂ ಗಾಯದಿಂದ ಚೇತರಿಸಿಕೊಂಡು ಜೋಶ್ ಹೇಜಲ್‌ವುಡ್ ತಂಡ ಸೇರಿಕೊಂಡಿದ್ದಾರೆ. ಆಡುವ ಬಳಗದಲ್ಲಿ ಯಾವ ನಾಲ್ವರು ವಿದೇಶಿಗರನ್ನು ಉಳಿಸಿಕೊಳ್ಳುವುದು ಎಂಬುದೇ ತಂಡಕ್ಕೆ ತಲೆನೋವಾಗಿದೆ. ಡೇವಿಡ್ ವಿಲ್ಲಿ ಮತ್ತು ವೇಯ್ನ್ ಪಾರ್ನೆಲ್ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ವಾರ್ನರ್ಗೆ ಜೊತೆಯಾಟದ ಸಮಸ್ಯೆ:ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ಗೆ ಸರಿಯಾದ ಜೊತೆಯಾಟ ದೊರೆಯದಿರುವುದು ಸಮಸ್ಯೆಯಾಗಿದೆ. ಕಳೆದ ನಾಲ್ಕು ಪಂದ್ಯದಲ್ಲಿ ವಾರ್ನರ್ ಮೂರು ಅರ್ಧಶತಕದಿಂದ 209 ರನ್ ಗಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಬಿರುಸಿನ ಅರ್ಧಶತಕ ಮಾಡಿ ಸಾಥ್ ನೀಡಿದ್ದರು. ಉಳಿದಂತೆಪೃಥ್ವಿ ಶಾ, ಮನೀಶ್ ಪಾಂಡೆ, ಮಿಚೆಲ್ ಮಾರ್ಷ್, ರೋವ್‌ಮನ್ ಪೊವೆಲ್ ಬ್ಯಾಟ್ ಘರ್ಜಿಸುತ್ತಿಲ್ಲ.