ಕರ್ನಾಟಕ

karnataka

ETV Bharat / sports

ಸಿಎಸ್​ಕೆ ವಿರುದ್ಧ ರಾಜಸ್ಥಾನ್​ ರಾಯಲ್ಸ್​ಗೆ ಭರ್ಜರಿ ಜಯ.. ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಆರ್​ಆರ್​ - ರಾಜಸ್ಥಾನ ನಾಯಕ ಸಂಜು ಸಾಮ್ಸನ್

ಗುರುವಾರ ನಡೆದ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಆರ್​ಆರ್​ ತಂಡ ಸೋಲಿಸಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್​ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.

Sawai Mansingh Stadium Jaipur  Indian Premier League 2023  spinners guide RR to 32 run win over CSK  Rajasthan Royals won by 32 runs  Rajasthan Royals vs Chennai Super Kings  ಸಿಎಸ್​ಕೆ ವಿರುದ್ಧ ರಾಜಸ್ಥಾನ್​ ರಾಯಲ್ಸ್​ಗೆ ಭರ್ಜರಿ ಜಯ  ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಆರ್​ಆರ್​ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ರಾಜಸ್ಥಾನ ರಾಯಲ್ಸ್​ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ  ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್  ಆರ್ ಆರ್​ ತಂಡದ ಸ್ಪಿನ್ನರ್​ಗಳಾದ ಆಡಮ್ ಝಂಪಾ  ತಂಡಕ್ಕೆ ಭರ್ಜರಿ ಜಯ  ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್  ರಾಜಸ್ಥಾನ ನಾಯಕ ಸಂಜು ಸಾಮ್ಸನ್
ಸಿಎಸ್​ಕೆ ವಿರುದ್ಧ ರಾಜಸ್ಥಾನ್​ ರಾಯಲ್ಸ್​ಗೆ ಭರ್ಜರಿ ಜಯ

By

Published : Apr 28, 2023, 7:02 AM IST

Updated : Apr 28, 2023, 7:48 AM IST

ಜೈಪುರ:ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಸುವಲ್ಲಿ ಯಶಸ್ವಿ ಆದರು. ಗುರುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್‌ಗಳು ಚೆನ್ನೈ ಸೂಪರ್ ಕಿಂಗ್ಸ್‌ಗೆ 32 ರನ್‌ಗಳ ಸೋಲುಣಿಸಿ, ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.

ಆರ್ ಆರ್​ ತಂಡದ ಸ್ಪಿನ್ನರ್​ಗಳಾದ ಆಡಮ್ ಝಂಪಾ 3 ಓವರ್‌ಗಳಲ್ಲಿ 22 ರನ್​ ನೀಡಿ ಮೂರು ವಿಕೆಟ್​ ಉರುಳಿಸಿದರು. ರವಿಚಂದ್ರನ್ ಅಶ್ವಿನ್ 35 ರನ್​ ನೀಡಿ ಪ್ರಮುಖ ಎರಡು ವಿಕೆಟ್​ ಪಡೆದರು. ಇನ್ನು ಚೆನ್ನೈ ಸೂಪರ್​ ಕಿಂಗ್ಸ್ ಪರ ರುತುರಾಜ್ ಗಾಯಕ್‌ವಾಡ್ 47 ಮತ್ತು ಶಿವಂ ದುಬೆ 52 ರನ್​ ಬಾರಿಸಿದರಾದರೂ ಸಿಎಸ್‌ಕೆ 6 ವಿಕೆಟ್‌ಗೆ 170 ರನ್​ ಗಳಿಸಲಷ್ಟೇ ಸಾಧ್ಯವಾಯಿತು. ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 32 ರನ್​ಗಳ ಸೋಲು ಅನುಭವಿಸುವ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಾರಿತು. ಇನ್ನು ಈ ಗೆಲುವಿನ ಮೂಲಕ ಆರ್​ಆರ್​ ತಂಡ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 202 ರನ್​ ಬಾರಿಸುವ ಮೂಲಕ ಧೋನಿ ಪಡೆಗೆ ಗೆಲ್ಲಲು 203 ರನ್​ಗಳ ಗುರಿ ನೀಡಿತು. ಆರ್​ ಆರ್​ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗು ಜೋಸ್ ಬಟ್ಲರ್ ಪವರ್​ ಫ್ಲೇನಲ್ಲಿ ಉತ್ತಮ ಆಟವಾಡುವ ಮೂಲಕ ತಂಡದ ಮೊತ್ತ 50 ರನ್​ ಗಡಿ ದಾಟಿಸಿದರು. ಹೀಗೆ ಆಕರ್ಶಕ ಬೌಂಡರಿ ಸಿಕ್ಸರ್​ ಹೊಡೆಯುತ್ತಿದ್ದ ಈ ಜೋಡಿಯನ್ನು 9ನೇ ಓವರ್​ನಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಮಾಡಿ ಜೋಸ್ ಬಟ್ಲರ್​ನನ್ನು ಔಟ್​ ಮಾಡುವ ಮೂಲಕ ಬೇರ್ಪಡಿಸಿದರು. ಜೋಸ್ ಬಟ್ಲರ್ 21 ಬಾಲ್​ನಲ್ಲಿ 27 ರನ್ ಗಳಿಸಿ ಶಿವಂ ದುಬೆಗೆ ಕ್ಯಾಚ್​ ಕೊಟ್ಟು ಪೆವಿಲಿಯನ್​ಯತ್ತ ಹೆಜ್ಜೆಹಾಕಿದರು.

ಬಳಿಕ ಬಂದ ರಾಜಸ್ಥಾನ ನಾಯಕ ಸಂಜು ಸಾಮ್ಸನ್​ ಉತ್ತಮ ಆಟ ಆಡುವ ಭರವಸೆ ಮೂಡಿಸಿದ್ದರು. ಆದ್ರೆ ಸ್ವಲ್ಪ ಸಮಯದ ಬಳಿಕ ಮತ್ತೆ ನಿರಾಸೆ ಮೂಡಿಸಿದರು. ಮತ್ತೊಂದೆಡೆ ಬಿಗಿ ಬೌಲಿಂಗ್​ ದಾಳಿ ಮುಂದುವರಿಸಿದ ​ತುಷಾರ್ ದೇಶಪಾಂಡೆ 13ನೇ ಓವರ್​ನಲ್ಲಿ ಸಂಜು ಸಾಮ್ಸನ್​ರನ್ನು (17) ಹಾಗು ಅದೇ ಓವರ್​ನಲ್ಲಿ ಮತ್ತೊಬ್ಬ ಆರಂಭಿಕ ಸ್ಫೋಟಕ ಬ್ಯಾಟ್​ಮನ್​ ಯಶಸ್ವಿ ಜೈಸ್ವಾಲ್ ರನ್​ಗೆ ಕಟ್ಟಿ ಹಾಕಿದರು. ಯಶಸ್ವಿ ಜೈಸ್ವಾಲ್ 43 ಎಸೆತಗಳಲ್ಲಿ8 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನ ಬಾರಿಸುವ ಮೂಲಕ 77 ರನ್​ಗಳನ್ನ ಕಲೆ ಹಾಕಿದರು.

ಇನ್ನು ಧ್ರುವ್ ಜುರೆಲ್ 34 ರನ್​ಗಳನ್ನ ಹೊಡೆಯುವ ಮೂಲಕ ತಂಡದ ಮೊತ್ತ ಏರಲು ಕಾರಣರಾದರು. ಇನ್ನು ಪಡಿಕಲ್ ಅಜೇಯ 27 ರನ್ ಗಳನ್ನು ಬಾರಿಸುವ ಮೂಲಕ ಸಂಜು ಸ್ಯಾಮ್ಸನ್​ ಪಡೆ ಬರೋಬ್ಬರಿ 202 ರನ್​ಗಳನ್ನು ಪೇರಿಸಿತು. ಅಂತಿಮವಾಗಿ ಚೆನ್ನೈ ಸೂಪರ್​ ಕಿಂಗ್ಸ್​ಗೆ 203 ರನ್​ಗಳ ಗೆಲುವಿನ ಗುರಿ ನೀಡಿತು. ಈ ಮೊತ್ತ ಬೆನ್ನಟ್ಟಿದ ಧೋನಿ ಪಡೆ 170 ರನ್​ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಅಂತಿಮವಾಗಿ ತಂಡ 32 ರನ್​ಗಳ ಸೋಲು ಅನುಭವಿಸುವ ಮೂಲಕ ನಿರಾಶೆ ಅನುಭವಿಸಿತು.

ಓದಿ:ಐಪಿಎಲ್​ : ಆರೆಂಜ್​, ಪರ್ಪಲ್​ ಕ್ಯಾಪ್​ಗೆ ಆಟಗಾರರ ಪೈಪೋಟಿ, ಅಗ್ರಸ್ಥಾನಕ್ಕೆ ತಂಡಗಳ ಹೋರಾಟ

Last Updated : Apr 28, 2023, 7:48 AM IST

ABOUT THE AUTHOR

...view details