ಕರ್ನಾಟಕ

karnataka

ETV Bharat / sports

RCB vs GT: ಕೊಹ್ಲಿ,ಡುಪ್ಲೆಸಿಸ್​,ಮ್ಯಾಕ್ಸಿ ಅಬ್ಬರಕ್ಕೆ ಸೋತ ಗುಜರಾತ್​.. ಬೆಂಗಳೂರು ಪ್ಲೇ-ಆಫ್​ ಆಸೆ ಜೀವಂತ - ಗುಜರಾತ್​ ವಿರುದ್ಧ ಗೆದ್ದ ಬೆಂಗಳೂರು

ಗುಜರಾತ್​ ಟೈಟನ್ಸ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲು ಮಾಡಿರುವ ಆರ್​ಸಿಬಿ ತಂಡ ಪ್ಲೇ-ಆಫ್​​ ಆಸೆ ಜೀವಂತವಾಗಿಟ್ಟುಕೊಂಡಿದೆ. ಇಂದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿದ ವಿರಾಟ್​ ಎದುರಾಳಿ ಬೌಲರ್​ಗಳನ್ನ ಹಿಗ್ಗಾಮುಗ್ಗಾ ದಂಡಿಸಿದರು.

Royal Challengers Bangalore win
Royal Challengers Bangalore win

By

Published : May 20, 2022, 12:34 AM IST

Updated : May 20, 2022, 12:41 AM IST

ಪುಣೆ: ಆರ್​ಸಿಬಿ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ(73)ಹಾಗೂ ಹಾಲಿ ನಾಯಕ ಫಾಪ್ ಡುಪ್ಲೆಸಿಸ್(44)​ ಆಕರ್ಷಕ 115 ರನ್​​ಗಳ ಜೊತೆಯಾಟ ಹಾಗೂ ಮ್ಯಾಕ್ಸವೆಲ್​ ಸ್ಫೋಟಕ(40) ಆಟದ ನೆರವಿನಿಂದ ಗುಜರಾತ್​ ಟೈಟನ್ಸ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿರುವ ಆರ್​ಸಿಬಿ ಪ್ಲೇ-ಆಫ್​ ರೇಸ್​​ನಲ್ಲಿ ಜೀವಂತವಾಗಿದೆ. ಆದರೂ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೊನೆಯ ಪಂದ್ಯದ ಫಲಿತಾಂಶದ ಮೇಲೆ ಆರ್​ಸಿಬಿ ಹಣೆಬರಹ ನಿರ್ಧಾರವಾಗಲಿದೆ.

115 ರನ್​ಗಳ ಜೊತೆಯಾಟವಾಡಿದ ಕೊಹ್ಲಿ-ಡುಪ್ಲೆಸಿಸ್​​

ವಾಂಖೆಡೆ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟನ್ಸ್​ ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 62ರನ್​​ಗಳ ನೆರವಿನಿಂದ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ನಷ್ಟಕ್ಕೆ 168ರನ್​​​ಗಳಿಕೆ ಮಾಡಿತು.ಡೇವಿಡ್ ಮಿಲ್ಲರ್​(34), ವೃದ್ಧಿಮಾನ್ ಸಹಾ(31) ಹಾಗೂ ಕೊನೆಯಲ್ಲಿ ಅಬ್ಬರಿಸಿದ ರಶೀದ್ ಖಾನ್ ತಾವು ಎದುರಿಸಿದ 6 ಎಸೆತಗಳಲ್ಲಿ ಭರ್ಜರಿ ಎರಡು ಸಿಕ್ಸರ್ ಸೇರಿ 19ರನ್​​ಗಳಿಕೆ ಮಾಡಿದರು. ಆರ್​ಸಿಬಿ ಪರ ಹ್ಯಾಜಲ್​ವುಡ್ 2 ವಿಕೆಟ್ ಪಡೆದರೆ, ಮ್ಯಾಕ್ಸವೆಲ್ ಹಾಗೂ ಹಸರಂಗ ತಲಾ 1 ವಿಕೆಟ್ ಪಡೆದುಕೊಂಡರು.

ಆಕರ್ಷಕ ಅರ್ಧಶತಕ ಸಿಡಿಸಿದ ಹಾರ್ದಿಕ್​ ಪಾಂಡ್ಯಾ

169ರನ್​​ಗಳ ಗುರಿ ಬೆನ್ನತ್ತಿ ಆರ್​ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಮಾಜಿ ನಾಯಕ ವಿರಾಟ್​ ಕೊಹ್ಲಿ ಹಾಗೂ ಹಾಲಿ ಕ್ಯಾಪ್ಟನ್ ಡುಪ್ಲೆಸಿಸ್ ಎದುರಾಳಿ ಬೌಲರ್​ಗಳನ್ನ ಸುಲಭವಾಗಿ ದಂಡಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 115ರನ್​ಗಳ ಜೊತೆಯಾಟವಾಡಿದರು. ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದ ವಿರಾಟ್​ ಕೊಹ್ಲಿ 54 ಎಸೆತಗಳಲ್ಲಿ 73ರನ್​ಗಳಿಕೆ ಮಾಡಿದರು. ಇವರಿಗೆ ಸಾಥ್​ ನೀಡಿದ ನಾಯಕ 44ರನ್​ಗಳಿಸಿದರು. ಇದಾದ ಬಳಿಕ ಬಂದ ಗ್ಲೇನ್​ ಮ್ಯಾಕ್ಸವೆಲ್​ ಕೇವಲ 18 ಎಸೆತಗಳಲ್ಲಿ 40ರನ್​ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದರು. ತಂಡ ಕೊನೆಯದಾಗಿ 18.4 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 170ರನ್​ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ ಪ್ಲೇ-ಆಫ್​ ಆಸೆ ಜೀವಂತವಾಗಿಟ್ಟುಕೊಂಡಿದೆ.

ಬ್ಯಾಟಿಂಗ್​ನಲ್ಲಿ ಮಾಜಿ ಕ್ಯಾಪ್ಟನ್ ವಿರಾಟ್​ ಮಿಂಚು

ಡೆಲ್ಲಿ ಕ್ಯಾಪಿಟಲ್ಸ್​ ಕೊನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದ್ದು, ಇದರ ಆಧಾರದ ಮೇಲೆ ಆರ್​ಸಿಬಿ ಪ್ಲೇಆಫ್​ ಆಡಲಿದೆಯಾ ಎಂಬುದು ನಿರ್ಧಾರವಾಗಲಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ 16 ಪಾಯಿಂಟ್​ಗಳಿಸಿದ್ದು, ಸದ್ಯ 4ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.

ರೇಸ್​​ನಿಂದ ಹೊರಬಿದ್ದ ಪಂಜಾಬ್​, ಹೈದರಾಬಾದ್​:ಗುಜರಾತ್​ ವಿರುದ್ಧ ಬೆಂಗಳೂರು ಗೆಲುವು ದಾಖಲು ಮಾಡುತ್ತಿದ್ದಂತೆ ಪಂಜಾಬ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ತಂಡ ಪ್ಲೇ-ಆಫ್​ ರೇಸ್​ನಿಂದ ಹೊರಬಿದ್ದಿವೆ. ಈಗಾಗಲೇ ಮುಂಬೈ ಹಾಗೂ ಚೆನ್ನೈ ತಂಡ ಈ ರೇಸ್​​ನಿಂದ ಹೊರಹೋಗಿವೆ.ಗುಜರಾತ್​, ಲಖನೌ ಪ್ಲೇ-ಆಫ್​ ರೇಸ್​ಗೆ ಪ್ರವೇಶ ಪಡೆದುಕೊಂಡಿವೆ.

Last Updated : May 20, 2022, 12:41 AM IST

ABOUT THE AUTHOR

...view details