ಕರ್ನಾಟಕ

karnataka

ETV Bharat / sports

ಕನ್ಫರ್ಮ್​​: ನಾಯಕತ್ವದಿಂದ ಕೆಳಗಿಳಿದ ರವೀಂದ್ರ ಜಡೇಜಾ ಐಪಿಎಲ್​​ನಿಂದಲೇ ಔಟ್​ - ಐಪಿಎಲ್​ನಲ್ಲಿ ಜಡೇಜಾ ಔಟ್​

ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ಯಾಪ್ಟನ್​ ರವೀಂದ್ರ ಜಡೇಜಾ ಗಾಯಗೊಂಡಿರುವ ಕಾರಣ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಸಿಎಸ್​​ಕೆ ಟ್ವೀಟ್ ಮಾಡಿದೆ.

Ravindra Jadeja ruled out
Ravindra Jadeja ruled out

By

Published : May 11, 2022, 4:18 PM IST

Updated : May 11, 2022, 9:28 PM IST

ಮುಂಬೈ :ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಸೀಸನ್​​ನಲ್ಲಿ ಹೇಳಿಕೊಳ್ಳುವಂತಹ ಆರಂಭ ಸಿಕ್ಕಿಲ್ಲ. ಇದೇ ಕಾರಣಕ್ಕಾಗಿ ಈಗಾಗಲೇ ಪ್ಲೇ-ಆಫ್​ ರೇಸ್​​ನಿಂದ ಬಹುತೇಕ ಹೊರ ಬಿದ್ದಿದೆ. ಇದರ ಬೆನ್ನಲ್ಲೇ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಟೂರ್ನಿ ಆರಂಭಗೊಳ್ಳುತ್ತಿದ್ದಂತೆ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡಿದ್ದ ಆಲ್​ರೌಂಡರ್​ ರವೀಂದ್ರ ಜಡೇಜಾ ಗಾಯಗೊಂಡಿದ್ದಾರೆ. ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿಎಸ್​​ಕೆ ಫ್ರಾಂಚೈಸಿ ಖುದ್ದಾಗಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.

2022ರ ಇಂಡಿಯನ್ ಪ್ರೀಮಿಯರ್​ ಲೀಗ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಪ್ರಮುಖ ವೇಗಿ ದೀಪಕ್​ ಚಾಹರ್​ ಆವೃತ್ತಿಯಿಂದ ಹೊರಗೆ ಉಳಿದಿದ್ದರು. ಇದಾದ ಬಳಿಕ ಆಡಮ್​ ಮಿಲ್ನೆ ಕೂಡ ಹೊರಗೆ ಉಳಿದಿದ್ದರು. ಇದೀಗ ರವೀಂದ್ರ ಜಡೇಜಾ ಗಾಯಗೊಂಡಿದ್ದು, ಉಳಿದ ಪಂದ್ಯಗಳಿಗೆ ಗೈರಾಗಲಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ನಡೆದ ಪಂದ್ಯದ ವೇಳೆ ರವೀಂದ್ರ ಜಡೇಜಾ ಗಾಯಗೊಂಡಿದ್ದರು. ಹೀಗಾಗಿ, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಜಡೇಜಾ ಮೈದಾನಕ್ಕಿಳಿದಿರಲಿಲ್ಲ. ಇದರ ಬೆನ್ನಲ್ಲೇ ಸಿಎಸ್​​ಕೆ ಈ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ:ಮುಂಬೈ ತಂಡಕ್ಕೆ ಗಾಯದ ಮೇಲೆ ಬರೆ.. ಐಪಿಎಲ್​​ನಿಂದ ಹೊರಬಿದ್ದ ಸೂರ್ಯಕುಮಾರ್​

2022ರ ಐಪಿಎಲ್​ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಜಡೇಜಾ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ, ತಂಡದ ಕಳಪೆ ಪ್ರದರ್ಶನದಿಂದಾಗಿ ಅವರು ತಮ್ಮ ನಾಯಕತ್ವದ ಜವಾಬ್ದಾರಿ ಮರಳಿ ಧೋನಿ ಹೆಗಲಿಗೆ ಹಾಕಿದ್ದರು. ಈ ಆವೃತ್ತಿಯಲ್ಲಿ ಸಿಎಸ್​ಕೆ ಆಡಿರುವ 11 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಗೆಲುವು ದಾಖಲಿಸಿ, 8 ಪಾಯಿಂಟ್​​ಗಳಿಸಿದೆ.

ಪ್ಲೇಆಫ್​ಗೆ ಪ್ರವೇಶ ಪಡೆದುಕೊಳ್ಳಬೇಕಾದರೆ ಮುಂದಿನ ಎಲ್ಲ ಪಂದ್ಯ ಗೆಲ್ಲಬೇಕಾಗಿದ್ದು, ರಾಜಸ್ಥಾನ ಹಾಗೂ ಬೆಂಗಳೂರು ತಂಡಗಳು ಉಳಿದ ಪಂದ್ಯಗಳಲ್ಲಿ ಸೋಲು ಕಾಣಬೇಕಾಗಿದೆ. ಮುಂಬೈ ಇಂಡಿಯನ್ಸ್​​ ತಂಡದ ಸ್ಟಾರ್​ ಬ್ಯಾಟರ್ ಸೂರ್ಯಕುಮಾರ್ ಯಾದವ್​ ಗಾಯಗೊಂಡಿರುವ ಕಾರಣ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

Last Updated : May 11, 2022, 9:28 PM IST

ABOUT THE AUTHOR

...view details