ದುಬೈ:ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳು ಆರಂಭಗೊಂಡು ಕೇವಲ ಮೂರು ದಿನ ಕಳೆದಿದೆ. ಈ ಬೆನ್ನಲ್ಲೇ ಕೊರೊನಾ ಕರಿಛಾಯೆ ಆವರಿಸಿದೆ. ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ. ನಟರಾಜನ್ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿದೆ.
ಟಿ.ನಟರಾಜನ್ಗೆ ಕೋವಿಡ್ ದೃಢಪಟ್ಟಿರುವ ವಿಷಯವನ್ನು ಖಚಿತಪಡಿಸಿರುವ ಬಿಸಿಸಿಐ, ಇಂದಿನ ಪಂದ್ಯಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ನಟರಾಜನ್ ಜೊತೆ ಸಂಪರ್ಕ ಹೊಂದಿದ್ದ ಇತರೆ ಆಟಗಾರರಾದ ವಿಜಯ್ ಶಂಕರ್, ನೆಟ್ ಬೌಲರ್ ಪೆರಿಯಸಾಮಿ ಗಣೇಶನ್, ಟೀಂ ಮ್ಯಾನೇಜರ್ ಶ್ಯಾಮ್ ಸುಂದರ್, ವೈದ್ಯೆ ಅಂಜನಾ ವನನ್, ವಿಜಯ್ ಕುಮಾರ್ ಹಾಗೂ ತುಷಾರ್ ಕೇದಾರ್ ಐಸೋಲೇಷನ್ಗೊಳಗಾಗಿದ್ದಾರೆ. ಆದರೆ ಅವರ ಆರ್ಟಿ-ಪಿಸಿಆರ್ ವರದಿ ನೆಗೆಟಿವ್ ಬಂದಿದೆ.