ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ಆಸೀಸ್‌ನ ಕೇನ್ ರಿಚರ್ಡ್ಸನ್ ಹಾಗೂ ಆ್ಯಡಂ ಜಂಪಾ ಐಪಿಎಲ್‌ನ 2021ರ ಅವೃತ್ತಿಯ 2ನೇ ಭಾಗದಲ್ಲಿ ಆಡೋದು ಅನುಮಾನ. ಈ ಇಬ್ಬರು ಆಟಗಾರರು ಐಸಿಸಿ ಟಿ-20ಗೆ ಆಸ್ಟ್ರೇಲಿಯಾ ಪ್ರಕಟಿಸಿರುವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಿನ್ನೆಯಷ್ಟೇ ಆಸಿಸ್ ಐಸಿಸಿ ವಿಶ್ವಕಪ್ ಟಿ-20 ತಂಡವನ್ನು ಪ್ರಕಟಿಸಿತ್ತು.
ಆರ್‌ಸಿಬಿಗೆ ಶಾಕ್: ಮುಂದುವರಿದ ಭಾಗದ ಐಪಿಎಲ್‌ಗೆ ಕೇನ್ ರಿಚರ್ಡ್ಸನ್, ಆ್ಯಡಂ ಜಂಪಾ ಅಲಭ್ಯ? - ಕೇನ್ ರಿಚರ್ಡ್ಸ್‌ನ್
ಐಸಿಸಿ ಟಿ-20 ಆಸೀಸ್ ತಂಡದಲ್ಲಿ ಸ್ಥಾನ ಪಡೆದಿರುವ ಕೇನ್ ರಿಚರ್ಡ್ಸನ್ ಹಾಗೂ ಆ್ಯಡಂ ಜಂಪಾ ಐಪಿಎಲ್‌ನಲ್ಲಿ ಆರ್‌ಸಿಬಿಯ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಯುಎಇನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾಗವಹಿಸದಿರಲು ಈ ಇಬ್ಬರು ಆಟಗಾರರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ಮೂಲಗಳ ಪ್ರಕಾರ, ಕೇನ್ ರಿಚರ್ಡ್ಸನ್ ತವರಿನಲ್ಲೇ ಉಳಿಯಲು ನಿರ್ಧರಿಸಿದ್ದು, ಯುಎಇಯಲ್ಲಿ ನಡೆಯಲಿರುವ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡದಲ್ಲಿ ಆಡಲು ಇನ್ನೂ ಮನಸು ಮಾಡಿಲ್ಲ. ಯುಎಇಗೆ ಪ್ರಯಾಣ ಬೆಳೆಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ. ಆದರೆ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಜೋಷ್ ಹೇಜಲ್‌ವುಡ್ ಭಾಗವಹಿಸುವುದಾಗಿ ತಮ್ಮ ಫ್ರಾಂಚೈಸಿಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಐಪಿಎಲ್ ಕಾಳಗಕ್ಕೆ ಸಜ್ಜಗೊಂಡ ದುಬೈ: ಕಡ್ಡಾಯ ಕ್ವಾರಂಟೈನ್ ಬಳಿಕ ಮೈದಾನದಲ್ಲಿ ಕಾಣಿಸಿಕೊಂಡ ಚಾಂಪಿಯನ್!?