ಮುಂಬೈ:ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ಧೋನಿ ನಾಯಕತ್ವದ ಸಿಎಸ್ಕೆ ತಂಡ 45 ರನ್ಗಳ ಭರ್ಜರಿ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಈ ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಹೊಡೆದ ಒಂದು ಡೈವ್ ಬಾರಿ ಸಂಚಲನ ಮೂಡಿಸಿದೆ.
ಪಂದ್ಯದಲ್ಲಿ ಧೋನಿ ಸಿಂಗಲ್ಸ್ ಮೊರೆ ಹೋಗಿದ್ದಾರೆ. ಅದು ಸಾಧ್ಯವಾಗಲಿಲ್ಲ. ಏಕೆಂದರೆ ಫೀಲ್ಡರ್ ಆಗಲೇ ಚೆಂಡನ್ನು ಕೀಪರ್ನತ್ತ ಎಸೆದಿದ್ದರು. ಈ ವೇಳೆ ಇನ್ನೇನು ಧೋನಿ ಔಟ್ ಆಗ್ತಾರೆ ಎಂದುಕೊಂಡಾಗ ಡೈವ್ ಹೊಡೆಯುವ ಮೂಲಕ ಧೋನಿ ಕ್ರೀಸ್ ತಲುಪಿದ್ದರು. ಈ ಮೂಲಕ ರನೌಟ್‌ನಿಂದ ಪಾರಾದರು.
ಧೋನಿ, ಬಹುಶಃ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಯೆಂಬಂತೆ ಹೊಡೆದ ಡೈವ್ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಎರಡು ವರ್ಷಗಳ ಹಿಂದೆ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ರನೌಟ್ ಆಗಿದ್ದರು. ಆ ಸಮಯದಲ್ಲಿ ಡೈವ್ ಹೊಡೆದಿದ್ದಲ್ಲಿ ಅವರು ಕ್ರೀಸ್ ತಲುಪುವ ಸಾಧ್ಯತೆಯಿತ್ತು. ಆದರೆ ಅಂದು ಡೈವ್ ಮಾಡಿರಲಿಲ್ಲ.
ನಿನ್ನೆಯ ಪಂದ್ಯದಲ್ಲಿ ಧೋನಿ ಡೈವ್ ಗಮನಿಸಿದ ಕ್ರಿಕೆಟ್‌ಪ್ರಿಯರು ಮತ್ತು ಅಭಿಮಾನಿಗಳು, ಈ ಡೈವ್ ಅಂದು ಹೊಡೆದಿದ್ದರೆ! ಎಂದು ವಿಮರ್ಶೆ ಮಾಡಿದ್ದಾರೆ.
ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ರವೀಂದ್ರ ಜಡೇಜಾ ಜೊತೆಗೆ ಧೋನಿ ಮಹತ್ವದ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಪಂದ್ಯದ ನಿರ್ಣಾಯಕ ಹಂತದಲ್ಲಿ ಮಾರ್ಟಿನ್ ಗಪ್ಟಿಲ್ ನೇರ ಥ್ರೋದಲ್ಲಿ ರನೌಟ್ ಆಗುವ ಮೂಲಕ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿತ್ತು. ಇದು ಏಕದಿನ ಕ್ರಿಕೆಟ್ನಲ್ಲಿ ಧೋನಿ ಆಡಿದ ಕೊನೆಯ ಇನ್ನಿಂಗ್ಸ್ ಆಗಿದೆ.
ಇದನ್ನೂ ಓದಿ: ಐಪಿಎಲ್ 2021: ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ಗೆ 45 ರನ್ಗಳ ಭರ್ಜರಿ ಗೆಲುವು