ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ನಾಲ್ಕನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಲಖನೌ ಸೂಪರ್ ಜೈಂಟ್ಸ್ ಆರಂಭಿಕ ಆಟಗಾರರ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ದೀಪಕ್ ಹೂಡಾ ಹಾಗೂ ಆಯೂಷ್ ಬದೌನಿ ಅರ್ಧ ಶತಕಗಳ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತ್ತು. ಆದರೆ ಎದುರಾಳಿ ಗುಜರಾತ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮತ್ತು ಜವಾಬ್ದಾರಿಯುತ ಆಟದಿಂದಾಗಿ ಲಖನೌ ನೀಡಿದ ಮೊತ್ತದ ಗುರಿಯನ್ನು ತಲುಪಿತು.
ಲಖನೌ ಇನ್ನಿಂಗ್ಸ್: ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹೊಸದಾಗಿ ಐಪಿಎಲ್ಗೆ ಪದಾರ್ಪಣೆ ಮಾಡಿರುವ ಲಖನೌ ಹಾಗೂ ಗುಜರಾತ್ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಗುಜರಾತ್ ತಂಡ ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಆರಂಭಿಕರಾಗಿ ಕಣಕ್ಕಿಳಿದ ಲಖನೌ ಕ್ಯಾಪ್ಟನ್ ರಾಹುಲ್ (0) ಮೊಹಮ್ಮದ್ ಶಮಿ ಎಸೆದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆದರು. ಇದರ ಬೆನ್ನಲ್ಲೇ ಕ್ವಿಂಟನ್ ಡಿಕಾಕ್ (7ರನ್) ಕೂಡ ಶಮಿ ಓವರ್ನಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಬಳಿಕ ಬಂದ ಲಿವಿಸ್ 10 ರನ್, ಮನೀಷ್ ಪಾಂಡೆ 6 ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದರು.
ಓದಿ:ಪುಟಿನ್ ವಿರುದ್ಧ ನೈತಿಕ ಆಕ್ರೋಶ ಹೊರಹಾಕಿದ್ದೇನೆ ಅಷ್ಟೇ: ಬೈಡನ್
ಅಬ್ಬರಿಸಿದ ಹೂಡಾ - ಬದೌನಿ ಜೋಡಿ: ಗುಜರಾತ್ ಬೌಲಿಂಗ್ ದಾಳಿಗೆ ತತ್ತರಿಸಿ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡ ಲಖನೌ ತಂಡಕ್ಕೆ ದೀಪಕ್ ಹೂಡಾ- ಆಯೂಷ್ ಬದೌನಿ ಜೋಡಿ ಉತ್ತಮ ಜೊತೆಯಾಟವಾಡಿತು. ಎದುರಾಳಿ ಬೌಲರ್ಗಳನ್ನು ಸುಲಭವಾಗಿ ಎದುರಿಸಿದ ಈ ಆಟಗಾರರು ಉತ್ತಮ ರನ್ ಕಲೆಹಾಕಿದರು. ಹೂಡಾ ತಾವು ಎದುರಿಸಿದ 41 ಎಸೆತಗಳಲ್ಲಿ 2 ಸಿಕ್ಸರ್, 6 ಬೌಂಡರಿ ಸಮೇತ 55 ರನ್ಗಳನ್ನು ಕಲೆ ಹಾಕಿದರೆ, ಬದೌನಿ 41 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿ ಸಮೇತ 54 ರನ್ಗಳಿಸಿದರು. ಇದಾದ ಬಳಿಕ ಕಣಕ್ಕಿಳಿದ ಕೃನಾಲ್ ಪಾಂಡ್ಯಾ ತಾವು ಎದುರಿಸಿದ 13 ಎಸೆತಗಳಲ್ಲಿ 3 ಬೌಂಡರಿ ಸಮೇತ 21ರನ್ ಬಾರಿಸಿದರು.
ತಂಡ ಕೊನೆಯದಾಗಿ 20 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 158ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡದ ಗೆಲುವಿಗೆ 159ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿತ್ತು. ಗುಜರಾತ್ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದುಕೊಂಡರೆ, ವರುಣ್ ಆ್ಯರೊನ್ 2 ವಿಕೆಟ್ ಹಾಗೂ ರಶೀದ್ ಖಾನ್ 1 ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.