ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 38 ಪಂದ್ಯಗಳು ನಡೆದಿದ್ದು, ಅದರಲ್ಲಿ 20 ಮ್ಯಾಚ್ಗಳಲ್ಲಿ 200ಕ್ಕೂ ಅಧಿಕ ಸ್ಕೋರ್‌ಗಳು ದಾಖಲಾಗಿವೆ. ಇದು ಈ ಋತುವಿನಲ್ಲಿ 200 ಪ್ಲಸ್ ಸ್ಕೋರ್‌ಗಳ ಹೊಸ ದಾಖಲೆಯಾಗಿದೆ. 2022 ರಲ್ಲಿ ಅಂತಹ 18 ಪಂದ್ಯಗಳಲ್ಲಿ 200+ಸ್ಕೋರ್‌ಗಳ ದಾಖಲಾಗಿದ್ದವು. ಐಪಿಎಲ್ 2023 ರಲ್ಲಿ 8.91, 2018 ರಲ್ಲಿ 8.64 ಮತ್ತು 2022 ರಲ್ಲಿ 8.54 ರನ್ ರೇಟ್ನಲ್ಲಿ ಪಂದ್ಯಗಳು ನಡೆದಿವೆ.
200 ಪ್ಲಸ್ ಸ್ಕೋರ್ ಮತ್ತು ರನ್ ರೇಟ್ ಏರಿಕೆ ಹಿಂದಿನ ಕಾರಣವೇನು?: ಭಾರತದ ಲೆಜೆಂಡ್ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಪ್ರಭಾವಿ ಆಟಗಾರ (ಇಂಪ್ಯಾಕ್ಟ್ ಪ್ಲೇಯರ್) ಕಾರಣದಿಂದ ಎಂಬ ಅಭಿಪ್ರಾಯ ಹೇಳಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನೂ ತಂಡಗಳು ಇನ್ನೂ ಅರ್ಥ ಮಾಡಿಕೊಳ್ಳುತ್ತಿವೆ ಅಷ್ಟೇ. ಆದರೆ ಈ ಬಾರಿಯ ಐಪಿಎಲ್ನಲ್ಲಿ 200 ಪ್ಲಸ್ ರನ್ ಬರಲು ಹೆಚ್ಚುವರಿ ಆಟಗಾರ ತಂಡಕ್ಕೆ ಸೇರುವುದೇ ಕಾರಣ ಎಂದಿದ್ದಾರೆ.
"ಮೊದಲು ಒಂದು ತಂಡದಲ್ಲಿ ಒಬ್ಬ ಆಲ್ರೌಂಡರ್ ಮಾತ್ರ ಇರುತ್ತಿದ್ದರು. ಆದರೆ ಪ್ರಭಾವಿ ಆಟಗಾರನ ಅವಕಾಶ ಹೆಚ್ಚುವರಿ ಆಲ್ರೌಂಡರ್ ತಂಡಕ್ಕೆ ಸೇರುವ ಅವಕಾಶವನ್ನು ಮಾಡಿಕೊಡುತ್ತಿದೆ. ನನ್ನ ದೃಷ್ಟಿಯಲ್ಲಿ ಜನರು ಇನ್ನೂ ಇಂಪ್ಯಾಕ್ಟ್ ನಿಯಮವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ ಮತ್ತು ಆಡುವ ಹನ್ನೊಂದನ್ನು ಆಯ್ಕೆ ಮಾಡುವ ಮೊದಲು ಇಂಪ್ಯಾಕ್ಟ್ ಆಟಗಾರನ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ. ಕೆಲವು ತಂಡಗಳು ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಚೆನ್ನಾಗಿ ಬಳಸಲು ಕಲಿತಿವೆ. ಆದರೆ ಈ ಋತುವಿನಲ್ಲಿ 200ಕ್ಕೂ ಹೆಚ್ಚು ಸ್ಕೋರ್‌ಗಳು ಇಂಪ್ಯಾಕ್ಟ್ ಆಟಗಾರನ ನಿಯಮದಿಂದ ಆಗಿದೆ" ಎಂದಿದ್ದಾರೆ.