ಕರ್ನಾಟಕ

karnataka

ETV Bharat / sports

ತಂಡದ ಆಯ್ಕೆ ಕುರಿತು ಯೋಚಿಸುವುನ್ನ ಬಿಟ್ಟು ಬಿಡಿ: ಟೀಂ ಇಂಡಿಯಾ ಸೆಲೆಕ್ಷನ್ ಬಗ್ಗೆ ABD ಹೀಗಂದಿದ್ಯಾಕೆ..? - ರವೀಂದ್ರ ಜಡೇಜಾ

4ನೇ ಟೆಸ್ಟ್​ ಪಂದ್ಯಕ್ಕೆ ಟೀಂ ಇಂಡಿಯಾ ಸೆಲೆಕ್ಷನ್ ಕುರಿತು ಟೀಕೆಗಳು ವ್ಯಕ್ತವಾಗಿದ್ದವು. ಫಿಟ್ ಆಗಿದ್ದ ಸ್ಪಿನ್ನರ್ ಆರ್​.ಅಶ್ವಿನ್​​ ಅವರನ್ನು ಹೊರಗಿಟ್ಟಿದಕ್ಕೆ ಕೊಹ್ಲಿ ನಡೆಗೆ ಟೀಕೆ ವ್ಯಕ್ತವಾಗಿತ್ತು. ಆದರೆ, ಸೌತ್ ಆಫ್ರಿಕಾ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್​ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ.

ab-de-villiers-tweeted-on-team-india-selection
ಟೀಂ ಇಂಡಿಯಾ ಸೆಲೆಕ್ಷನ್ ಬಗ್ಗೆ ಎಬಿಡಿ ಹೀಗಂದಿದ್ಯಾಕೆ..?

By

Published : Sep 7, 2021, 2:12 PM IST

ದುಬೈ: ಐಪಿಎಲ್ ಉಳಿದ ಪಂದ್ಯಗಳಿಗಾಗಿ ಆರ್​ಸಿಬಿ ತಂಡದಲ್ಲಿ ಬ್ಯಾಟ ಬೀಸಲು ಎಬಿ ಡಿ ವಿಲಿಯರ್ಸ್​ ಈಗಾಗಲೇ ದುಬೈ ತಲುಪಿದ್ದಾರೆ. ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಪಂದ್ಯದಲ್ಲಿ ಜಯಗಳಿಸಿದ ಭಾರತ ತಂಡವನ್ನ ಎಬಿಡಿ ಅಭಿನಂದಿಸಿದ್ದಾರೆ. ಜೊತೆಗೆ ಟೀಂ ಇಂಡಿಯಾ ಸೆಲೆಕ್ಷನ್ ಕುರಿತಂತೆ ಕೇಳಿ ಬಂದ ಅಪಸ್ವರಕ್ಕೂ ಉತ್ತರಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಎಬಿಡಿ, ಭಾರತ ತಂಡ ಉತ್ತಮ ಪ್ರದರ್ಶನ ನೀಡಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಹಲವರು ಅದ್ಭುತ ಕೌಶಲ್ಯ, ಧೈರ್ಯದ ಆಟ ಪ್ರದರ್ಶಿಸಿದ್ದಾರೆ. ಇಂಗ್ಲೆಂಡ್​​​ನ ಜೋ ರೂಟ್​ ಸಹ ಒಳ್ಳೆಯ ಆಟ ಆಡಿದ್ದಾರೆ. ಫೈನಲ್ ಪಂದ್ಯಕ್ಕಾಗಿ ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಅಲ್ಲದೇ ಟೀಂ ಇಂಡಿಯಾ ಆಡುವ 11ರಲ್ಲಿ ಅಶ್ವಿನ್ ಬದಲಿಗೆ ಸ್ಪಿನ್ನರ್ ಜಡೇಜಾ ಕಣಕ್ಕಿಳಿಸಿರುವುದು ಎಷ್ಟು ಸರಿ ಎಂಬ ಟೀಕೆ ಕೇಳಿ ಬಂದಿದೆ. ಇದಕ್ಕೆ ಉತ್ತರಿಸಿದ ಎಬಿಡಿ, ಒಬ್ಬ ಟೆಸ್ಟ್​​ ಕ್ರಿಕೆಟ್​​ನ ಪ್ರೇಕ್ಷಕನಾಗಿ ಹೇಳುತ್ತಿದ್ದೇನೆ. ತಂಡದ ಆಯ್ಕೆ ಮತ್ತು ಇತರ ಅಸಂಬದ್ಧ ವಿಚಾರಗಳ ಯೋಚಿಸುವುನ್ನ ಬಿಟ್ಟು ಬಿಡಿ. ನಿಮ್ಮ ಕಣ್ಣ ಮುಂದೆ ಸ್ಪರ್ಧೆ, ಉತ್ಸಾಹ, ಕೌಶಲ್ಯ ಹಾಗೂ ದೇಶ ಪ್ರೇಮ ಮೆಚ್ಚಿಕೊಳ್ಳಲು ಆರಂಭಿಸಿ. ಇಲ್ಲದಿದ್ದರೆ ನೀವು ಉತ್ತಮ ಆಟ ಕಳೆದುಕೊಳ್ಳುತ್ತೀರಿ ಎಂದಿದ್ದಾರೆ.

5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಸಾಧಿಸಿದೆ. ಸೆ.10ರಿಂದ ಕೊನೆ ಟೆಸ್ಟ್ ಆರಂಭವಾಗಲಿದ್ದು, ಕುತೂಹಲ ಮೂಡಿಸಿದೆ. ಇತ್ತ ಸೆ.19ರಿಂದ ಉಳಿದ ಐಪಿಎಲ್ ಪಂದ್ಯಗಳು ಆರಂಭವಾಗುತ್ತಿದ್ದು, ಎಬಿಡಿ ವಿಲಿಯರ್ಸ್​ ಆರ್​ಸಿಬಿ ತಂಡ ಸೇರಿಕೊಂಡಿದ್ದಾರೆ. ಸೆ.20 ರಂದು ಕೋಲ್ಕತ್ತಾ ವಿರುದ್ಧ ಆರ್​ಸಿಬಿ 2ನೇ ಅವಧಿಯ ಮೊದಲ ಪಂದ್ಯವಾಡಲಿದೆ.

ಈಗಾಗಲೇ ಉತ್ತಮ ಪ್ರದರ್ಶನ ತೋರಿರುವ ಆರ್​ಸಿಬಿ ಈ ಬಾರಿಯ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿದೆ.

ABOUT THE AUTHOR

...view details