ಕರ್ನಾಟಕ

karnataka

ETV Bharat / sports

KKR vs CSK: ತ್ರಿಪಾಠಿ, ರಾಣಾ ಮಿಂಚು; ಚೆನ್ನೈಗೆ 172 ರನ್ ಸವಾಲು - ಅಬು ಧಾಬಿ

ತ್ರಿಪಾಠಿ 45, ನಿತೀಶ್ ರಾಣಾ ಅಜೇಯ 37 ರನ್​ಗಳ ನೆರವಿನಿಂದ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್​ಗೆ 172 ರನ್​ಗಳ ಕಠಿಣ ಗುರಿ ಗುರಿ ನೀಡಿದೆ.

Chennai Super Kings vs Kolkata Knight Riders
ರಾಹುಲ್ ತ್ರಿಪಾಠಿ

By

Published : Sep 26, 2021, 5:37 PM IST

ಅಬುಧಾಬಿ: ಬ್ಯಾಟರ್ಸ್​ಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ 171 ರನ್​ಗಳ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ.

ಟಾಸ್​ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಹಿಂದಿನ ಪಂದ್ಯಗಳಲ್ಲಿ ಪಡೆದ ಆರಂಭವನ್ನು ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್​ಗೆ ಮುಂದಾದ ಗಿಲ್​ ಕೇವಲ 9 ರನ್​ಗಳಿಸಿ ರನ್​ಔಟ್ ಆದರು. ನಂತರ ವೆಂಕಟೇಶ್ ಅಯ್ಯರ್ ಕೂಡ ಕೇವಲ18 ರನ್​ಗಳಿಸಿ ಠಾಕೂರ್​ ಬೌಲಿಂಗ್​ನಲ್ಲಿ ಧೋನಿಗೆ ಕ್ಯಾಚಿತ್ತು ಔಟಾದರು. ನಂತರ ಬಂದ ನಾಯಕ ಮಾರ್ಗನ್​ (8) ಡುಪ್ಲೆಸಿಸ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಉತ್ತಮವಾಗಿ ಆಡಿದ ರಾಹುಲ್ ತ್ರಿಪಾಠಿ 33 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 45 ರನ್​ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಇವರು ಜಡೇಜಾ ಬೌಲಿಂಗ್​ನಲ್ಲಿ ಬೌಲ್ಡ್ ಆದರು.

ಕೊನೆಯಲ್ಲಿ ಅಬ್ಬರಿಸಿದ ಸ್ಫೋಟಕ ದಾಂಡಿಗ ರಸೆಲ್ 15 ಎಸೆತಗಳಲ್ಲಿ 20, ದಿನೇಶ್​ ಕಾರ್ತಿಕ್​ 11 ಎಸೆತಗಳಲ್ಲಿ 26, ನಿತೀಶ್​ ರಾಣಾ 27 ಎಸೆತಗಳಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಅಜೇಯ 37 ರನ್​ಗಳಿಸಿ ತಂಡದ ಮೊತ್ತವನ್ನು 171ಕ್ಕೇರಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ಶಾರ್ದೂಲ್ ಠಾಕೂರ್ 20ಕ್ಕೆ 2, ಜೋಶ್ ಹೆಜಲ್​ವುಡ್​ 40ಕ್ಕೆ 2, ಜಡೇಜಾ 21ಕ್ಕೆ 1 ವಿಕೆಟ್ ಪಡೆದರು.

ABOUT THE AUTHOR

...view details