ದುಬೈ :ಸನ್ರೈಸರ್ಸ್ ಹೈದರಾಬಾದ್ ನೀಡಿರುವ135ರನ್ಗಳ ಗುರಿ ಬೆನ್ನತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನತ್ತ ದಾಪುಗಾಲು ಹಾಕಿದ್ದು, ತಂಡದ ಪರ ಆರಂಭಿಕ ಆಟಗಾರ ಶಿಖರ್ ಧವನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪೃಥ್ವಿ ಶಾ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಧವನ್ 37 ಎಸೆತಗಳಲ್ಲಿ 1 ಸಿಕ್ಸರ್ 6 ಬೌಂಡರಿ ಸೇರಿದಂತೆ 42ರನ್ಗಳಿಕೆ ಮಾಡಿದ್ದು, ಇವರಿಗೆ ಶ್ರೇಯಸ್ ಅಯ್ಯರ್ ಉತ್ತಮ ಸಾಥ್ ನೀಡಿದರು.
ಮೊದಲ 10 ಓವರ್ಗಳಲ್ಲಿ 1 ವಿಕೆಟ್ನಷ್ಟಕ್ಕೆ 69ರನ್ಗಳಿಸಿದ್ದ ಡೆಲ್ಲಿ ಕೊನೆಯ 10 ಓವರ್ಗಳಲ್ಲಿ ಗೆಲುವಿನ ನಗೆ ಬೀರಲು 66ರನ್ಗಳ ಅವಶ್ಯಕತೆ ಇತ್ತು.
ಸನ್ರೈಸರ್ಸ್ ಬ್ಯಾಟಿಂಗ್
14ನೇ ಆವೃತ್ತಿಯಲ್ಲಿ ತನ್ನ ನೀರಸ ಪ್ರದರ್ಶನವನ್ನು ಮುಂದುವರಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ಕೇವಲ 135 ರನ್ಗಳ ಸಾಧಾರಣ ಟಾರ್ಗೆಟ್ ನೀಡಿದೆ.
ಈ ಮೈದಾನದಲ್ಲಿ ನಡೆದಿದ್ದ ಹಿಂದಿನ 2 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ಪಂದ್ಯಗಳು ಜಯ ಸಾಧಿಸಿದ್ದರಿಂದ ಹೈದರಾಬಾದ್ ತಂಡದ ನಾಯಕ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಆದರೆ, ಮೊದಲ ಓವರ್ನಲ್ಲೇ ಮಾಜಿ ನಾಯಕ ಡೇವಿಡ್ ವಾರ್ನರ್ ಕೇವಲ 3 ಎಸೆತಗಳನ್ನ ಎದುರಿಸಿ ಖಾತೆ ತೆರೆಯದೇ ನಿರ್ಗಮಿಸಿ ಹೈದರಾಬಾದ್ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.
ನಂತರ ಬಂದ ಕೇನ್ ವಿಲಿಯಮ್ಸನ್ ವಿಕೆಟ್ ಕೀಪರ್ ಶಾ ಜೊತೆಗೂಡಿ 2ನೇ ವಿಕೆಟ್ಗೆ 29 ರನ್ಗಳ ಜೊತೆಯಾಟ ನೀಡಿದರು. ಶಾ 17 ಎಸೆತಗಳಲ್ಲಿ 18 ರನ್ಗಳಿಸಿ ನಿರ್ಗಮಿಸಿದರು. ಡೆಲ್ಲಿ ಬೌಲರ್ಗಳ ದಾಳಿಗೆ ಉತ್ತರಿಸಲಾಗದೆ ಪರದಾಡಿದ ವಿಲಿಯಮ್ಸನ್ 26 ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಸಿಡಿಸಿ 18 ರನ್ಗಳಿಸಿ ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು.
ಮನೀಶ್ ಪಾಂಡೆ ಆಟ 17 ರನ್ಗೆ ಸೀಮಿತವಾದರೆ ಮತ್ತು ಕೇದಾರ್ ಜಾಧವ್(3) ಬಂದ ದಾರಿಯಲ್ಲೇ ವಾಪಸ್ ತೆರಳಿದರು. ಇವರಿಬ್ಬರನ್ನು ಕ್ರಮವಾಗಿ ದ.ಆಫ್ರಿಕಾದ ರಬಾಡ ಮತ್ತು ನಾರ್ಟ್ಜ್ ಪೆವಿಲಿಯನ್ಗಟ್ಟಿದರು.
ಆಲ್ರೌಂಡರ್ ಜೇಸನ್ ಹೋಲ್ಡರ್ 10 ರನ್ಗಳಿಸಿ ಅಕ್ಷರ್ ಪಟೇಲ್ಗೆ 2ನೇ ಬಲಿಯಾದರು. ಕೊನೆಯಲ್ಲಿ ಅದ್ಬುಲ್ ಸಮದ್ 28 ಮತ್ತು ರಶೀದ್ ಖಾನ್ 22 ರನ್ಗಳಿಸಿ ತಂಡದ ಮೊತ್ತವನ್ನು 100 ಗಡಿ ದಾಟಿಸಿದರು. ಡೆಲ್ಲಿ ಪರ ಕಗಿಸೋ ರಬಡಾ 37ಕ್ಕೆ 3, ಎನ್ರಿಚ್ ನಾರ್ಟ್ಜ್ 12ಕ್ಕೆ 2, ಅಕ್ಷರ್ ಪಟೇಲ್ 21ಕ್ಕೆ 2 ವಿಕೆಟ್ ಪಡೆದು ಮಿಂಚಿದರು.