ದುಬೈ: ನಾನ್ ಸ್ಟ್ರೈಕರ್ ಎಂಡ್ನಲ್ಲಿರುವ ಬ್ಯಾಟ್ಸ್ಮನ್ಅನ್ನು ಮಂಕಡ್ ಔಟ್ ಮಾಡುವ ಅವಕಾಶ ಸಿಕ್ಕರೂ ರವಿಚಂದ್ರನ್ ಅಶ್ವಿನ್ ಹಿಂದೆ ಸರಿದಿದ್ದಾರೆ.
ಈ ಮೂಲಕ ತಾವು ಈ ಹಿಂದೆ ಮಂಕಡಿಂಗ್ ಮಾಡಿದ್ದನ್ನು ಪುನಾರವರ್ತಿಸದೆ ವಿವಾದದಿಂದ ದೂರ ಸರಿದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಆರ್ಸಿಬಿ ಓಪನರ್ ಆರನ್ ಫಿಂಚ್ ನಾನ್ ಸ್ಟ್ರೈಕರ್ ಎಂಡ್ನ ಕ್ರೀಸ್ನಿಂದ ದೂರವಿದ್ದರೂ ಅಶ್ವಿನ್ ಕೈಯಲ್ಲಿ ಬಾಲ್ ಹಿಡಿದು ನಗುತ್ತಾ ನಿಂತಿದ್ದರು.
ಆದರೂ ಆರನ್ ಫಿಂಚ್ಗೆ ಅಶ್ವಿನ್ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಮಂಕಡಿಂಗ್ ವಿವಾದ ಕುರಿತು ಅಶ್ವಿನ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಕೂಡ ಮುಗುಳ್ನಕ್ಕರು.
ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಇನ್ನಿಂಗ್ಸ್ನ ಮೂರನೇ ಓವರ್ನಲ್ಲಿ ಈ ಘಟನೆ ನಡೆದಿದ್ದು, ಫಿಂಚ್ ತಮ್ಮ ಕ್ರೀಸ್ನಿಂದ ಹೊರ ಬಂದಾಗ ಆಫ್ ಸ್ಪಿನ್ನರ್ ಅಶ್ವಿನ್ ಮಂಕಡಿಂಗ್ಗೆ ಪ್ರಯತ್ನಿಸಲಿಲ್ಲ.
ಪಂದ್ಯಾವಳಿಯಲ್ಲಿ ನಾನ್ ಸ್ಟ್ರೈಕರ್ ಮಂಕಡ್ಅನ್ನು ನಾನು ಇಷ್ಟ ಪಡುವುದಿಲ್ಲ ಎಂದು ಅಶ್ವಿನ್ಗೆ ತಿಳಿಸಿದ್ದೇನೆ ಎಂದು ಪಾಂಟಿಂಗ್ ಐಪಿಎಲ್ 2020 ಪ್ರಾರಂಭವಾಗುವ ಮೊದಲೇ ಹೇಳಿದ್ದರಂತೆ.