ಕರ್ನಾಟಕ

karnataka

ETV Bharat / sports

ಭಾರತ - ಆಸ್ಟ್ರೇಲಿಯಾ ಏಕದಿನ ಪಂದ್ಯ: ಕ್ರಿಕೆಟ್​ ಜೀವನದಲ್ಲಿ 20 ಸಾವಿರ ರನ್ ಗಳಿಸಿ ದಾಖಲೆ ಬರೆದ ಮಿಥಾಲಿ - Richa Ghosh

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯವು ಮ್ಯಾಕೆ ಹರೂಪ್ ಪಾರ್ಕ್‌ನಲ್ಲಿ ನಡೆದಿದೆ. ಈ ಆಟದಲ್ಲಿ ಮಿಥಾಲಿ 107 ಎಸೆತಗಳಲ್ಲಿ 61 ರನ್ ಗಳಿಸಿದ್ದು, ಈ ಮೂಲಕ ತಮ್ಮ ಒಟ್ಟಾರೆ ಕ್ರಿಕೆಟ್​ ಬದುಕಿನಲ್ಲಿ 20 ಸಾವಿರ ರನ್​ ಗಳಿಸಿ ಸಾಧನೆ ತೋರಿದ್ದಾರೆ.

Mithali Raj
ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯ

By

Published : Sep 21, 2021, 11:01 AM IST

ಮ್ಯಾಕೆ (ಆಸ್ಟ್ರೇಲಿಯಾ): ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳಾ ಏಕದಿನ ಸರಣಿ ಆರಂಭವಾಗಿದ್ದು, ಮೊದಲು ಬ್ಯಾಟಿಂಗ್​ ಆರಂಭಿಸಿದ ಭಾರತದ ವನಿತೆಯರು 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ, ತಂಡದ ನಾಯಕಿ ಮಿಥಾಲಿ ರಾಜ್​ ತಮ್ಮ ಒಟ್ಟಾರೆ ಕ್ರಿಕೆಟ್ ಜೀವನದಲ್ಲಿ 20,000 ರನ್ ಗಳಿಸಿ ದಾಖಲೆ ಬರೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯವು ಮ್ಯಾಕೆ ಹರೂಪ್ ಪಾರ್ಕ್‌ನಲ್ಲಿ ನಡೆದಿದೆ. ಈ ಆಟದಲ್ಲಿ ಮಿಥಾಲಿ 107 ಎಸೆತಗಳಲ್ಲಿ 61 ರನ್ ಗಳಿಸಿದ್ದು, ಈ ಮೂಲಕ ತಮ್ಮ ಕ್ರಿಕೆಟ್​ ಬದುಕಿನಲ್ಲಿ 20 ಸಾವಿರ ರನ್​ ಗಳಿಸಿ ಸಾಧನೆ ತೋರಿದ್ದಾರೆ.

ಮಿಥಾಲಿ ಈಗಾಗಲೇ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್​ನ ಮೂರು ಮಾದರಿಯ ಆಟಗಳಲ್ಲಿ ಅತಿ ಹೆಚ್ಚು ಸ್ಕೋರರ್ ಆಗಿ ಹೊರ ಹೊಮ್ಮಿದ್ದಾರೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಮಿಥಾಲಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಸ್ಕೋರರ್ ಎನಿಸಿಕೊಂಡಿದ್ದರು.

ಇನ್ನು ಮಿಥಾಲಿಯ ಹೊರತಾಗಿ, ಯಾಸ್ತ್ರಿಕಾ ಭಾಟಿಯಾ ಕೂಡ ಎರಡು ಬೌಂಡರಿಗಳ ನೆರವಿನಿಂದ 35 ರನ್​ ಬಾರಿಸಿದ್ದಾರೆ. ಇನ್ನು ಶಫಾಲಿ (8) ಮತ್ತು ಮಂಧಾನ (16) ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು.

ಭಾರತ ಆರನೇ ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 38 ರನ್​ ಮಾತ್ರ ಗಳಿಸಿತ್ತು. ಈ ಬಳಿಕ ​ಫೀಲ್ಡ್​ಗಿಳಿದ ಯಾಸ್ತ್ರಿಕಾ ಮತ್ತು ಮಿಥಾಲಿ ಕ್ರೀಸ್​ನಲ್ಲಿ ಒಂದಾದರು. ಉತ್ತಮ ಜೊತೆಯಾಟ ಆಡಿದ ಆಟಗಾರರು ಭಾರತ ಉತ್ತಮ ಮೊತ್ತ ದಾಖಲಿಸಲು ನೆರವಾದರು. 26ನೇ ಓವರ್​ನಲ್ಲಿ ಭಾಟಿಯಾ ವಿಕೆಟ್ ಒಪ್ಪಿಸಿದರು. ಭಾರತದ ವನಿತೆಯರು ಅಂತಿಮವಾಗಿ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿದ್ದಾರೆ. ಆಸ್ಟ್ರೇಲಿಯಾಕ್ಕೆ 226 ರನ್​ಗಳ ಟಾರ್ಗೆಟ್​ ಕೊಟ್ಟಿದ್ದಾರೆ.

ABOUT THE AUTHOR

...view details