ಮುಂಬೈ :ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯ 372 ರನ್ಗಳ ಭಾರಿ ಅಂತರದಲ್ಲಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಎಲ್ಲಾ ಮಾದರಿಗಳಲ್ಲೂ 50 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ಮೊದಲ ಆಟಗಾರ ಎಂಬ ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಿದೆ. ವಾಂಖೆಡೆಯಲ್ಲಿ ಇಂದು ನಡೆದ ಪಂದ್ಯವನ್ನು ಗೆದ್ದ ಬಳಿಕ ಕಿವೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಕೊಹ್ಲಿ ಬಾಯ್ಸ್ ತಮ್ಮದಾಗಿಸಿಕೊಂಡರು.
140 ರನ್ಗಳಿಗೆ 5 ವಿಕೆಟ್ಗಳನ್ನು ಕಳೆದುಕೊಂಡು 4ನೇ ದಿನದಾಟ ಆರಂಭಿಸಿದ ಕಿವೀಸ್ 22 ರನ್ ಕಲೆ ಹಾಕುವಷ್ಟರಲ್ಲಿ ರಚಿನ್ ರವೀಂದ್ರ (18) ಹಾಗೂ ಹೆನ್ರಿ ನಿಕೋಲ್ಸ್ ಅವರ ವಿಕೆಟ್ ಉರುಳಿಸುವಯಲ್ಲಿ ಟೀಂ ಇಂಡಿಯಾ ಬೌಲರ್ಗಳು ಯಶಸ್ವಿಯಾದರು.