ನವದೆಹಲಿ: ಎಡಗೈ ಹೆಬ್ಬೆರಳು ಮುರಿತದಿಂದಾಗಿ ಕೌಂಟಿ ಇಲೆವೆನ್ ವಿರುದ್ಧದ ಭಾರತದ ಅಭ್ಯಾಸ ಪ್ರಥಮ ಪಂದ್ಯದಿಂದ ಹೊರಗುಳಿದಿದ್ದ ಯುವ ವೇಗಿ ಅವೇಶ್ ಖಾನ್ ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯದಿಂದಲೂ ಹೊರಗುಳಿದಿದ್ದಾರೆ.
ಭಾರತ - ಇಂಗ್ಲೆಂಡ್ ಪಂದ್ಯ: ಸರಣಿಯಿಂದ Avesh Khan ಹೊರಕ್ಕೆ! - ಬಿಸಿಸಿಐ ಇತ್ತೀಚಿನ ಸುದ್ದಿ
ಅವೇಶ್ ಖಾನ್ ಗಾಯದಿಂದ ಕೆಲ ದಿನಗಳವರೆಗೆ ತಂಡದಿಂದ ಹೊರಗುಳಿಯಬಹುದು. ಅವರು ಸ್ಟ್ಯಾಂಡ್ ಬೈ ಆಟಗಾರನಾಗಿದ್ದು, ಅವರ ಸ್ಥಾನವನ್ನು ನಿರ್ವಹಿಸಲು ಬಿಸಿಸಿಐ ಪರ್ಯಾಯ ವ್ಯವಸ್ಥೆ ಮಾಡಲಿದೆ ಎಂದು ಮೂಲಗಳು ತಿಳಿಸಿದೆ.
ಅವೇಶ್ ಖಾನ್
ಬಿಸಿಸಿಐನ ಹಿರಿಯ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದು, "ಅವೇಶ್ ಖಾನ್ ಗಾಯದಿಂದ ಕೆಲ ದಿನಗಳವರೆಗೆ ತಂಡದಿಂದ ಹೊರಗುಳಿಯಬಹುದು. ಅವರು ಸ್ಟ್ಯಾಂಡ್ ಬೈ ಆಟಗಾರನಾಗಿದ್ದು, ಅವರ ಸ್ಥಾನವನ್ನು ನಿರ್ವಹಿಸಲು ಬಿಸಿಸಿಐ ಪರ್ಯಾಯ ವ್ಯವಸ್ಥೆ ಮಾಡಲಿದೆ. ಇನ್ನು ವೇಗಿ ಅವೇಶ್ ಖಾನ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಹೇಳಿದ್ದಾರೆ.
ಆಗಸ್ಟ್ 4 ದಿಂದ ನಟ್ಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ನಲ್ಲಿ ಭಾರತ - ಇಂಗ್ಲೆಂಡ್ ಪಂದ್ಯ ನಡೆಯಲಿದೆ.