ಕರ್ನಾಟಕ

karnataka

ETV Bharat / sports

ನ್ಯೂಜಿಲೆಂಡ್ ವಿರುದ್ಧದ T20 ಸರಣಿಗೆ ಟೀಂ​ ಇಂಡಿಯಾ ಆಯ್ಕೆ: ರೋಹಿತ್​ ಕ್ಯಾಪ್ಟನ್​​ - ಟೀಮ್​ ಇಂಡಿಯಾ ಆಯ್ಕೆ

ಮೊದಲ ಟಿ20 ನವೆಂಬರ್ 17ರಂದು ಜೈಪುರದಲ್ಲಿ ನಡೆಯಲಿದೆ. ಇನ್ನುಳಿದ ಎರಡು ಟಿ20 ಪಂದ್ಯಗಳು ಕ್ರಮವಾಗಿ ರಾಂಚಿಯಲ್ಲಿ (19) ಮತ್ತು ಕೋಲ್ಕತ್ತಾದಲ್ಲಿ (21) ನಡೆಯಲಿದೆ. ನಂತರ 25ರಂದು ಟೆಸ್ಟ್ ಸರಣಿ ಆರಂಭವಾಗಲಿದೆ.

ನ್ಯೂಜಿಲೆಂಡ್ ವಿರುದ್ಧದ T20 ಸರಣಿಗೆ ಟೀಮ್​ ಇಂಡಿಯಾ ಆಯ್ಕೆ
ನ್ಯೂಜಿಲೆಂಡ್ ವಿರುದ್ಧದ T20 ಸರಣಿಗೆ ಟೀಮ್​ ಇಂಡಿಯಾ ಆಯ್ಕೆ

By

Published : Nov 9, 2021, 8:30 PM IST

ಮುಂಬೈ: ಕಿವೀಸ್​ ವಿರುದ್ಧ ಟಿ20 ಸರಣಿಗೆ ಅನುಭವಿ ಆಟಗಾರ ರೋಹಿತ್ ಶರ್ಮಾರನ್ನು ಟೀಂ ಇಂಡಿಯಾದ ನೂತನ ಸಾರಥಿಯಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಉಪನಾಯಕನ ಸ್ಥಾನಕ್ಕೆ ಕನ್ನಡಿಗ ಕೆ.ಎಲ್.ರಾಹುಲ್​ ಆಯ್ಕೆಯಾಗಿದ್ದಾರೆ.

ನವೆಂಬರ್‌ 17ರಿಂದ ಕಿವೀಸ್​ ವಿರುದ್ಧ ಟಿ20 ಸರಣಿ ಆರಂಭವಾಗಲಿದ್ದು, ಈ ಸರಣಿಯಲ್ಲಿ ಕೊಹ್ಲಿ ಅಷ್ಟೇ ಅಲ್ಲದೇ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನಿಡಲಾಗಿದೆ. ಹೊಸಬರಿಗೆ ಅವಕಾಶ ನೀಡಲಾಗಿದ್ದು, ಋತುರಾಜ್​ ಗಾಯಕ್ವಾಡ್​, ವೆಂಕಟೇಶ್​ ಅಯ್ಯರ್​, ಅವೀಶ್​ ಖಾನ್​, ಹಾಗೂ ಹರ್ಷಲ್​ ಪಟೇಲ್​ಗೆ ಸ್ಥಾನ ನೀಡಲಾಗಿದೆ.

ಮೊದಲ ಟಿ20 ನವೆಂಬರ್ 17ರಂದು ಜೈಪುರದಲ್ಲಿ ನಡೆಯಲಿದೆ. ಇನ್ನುಳಿದ ಎರಡು ಟಿ20 ಪಂದ್ಯಗಳು ಕ್ರಮವಾಗಿ ರಾಂಚಿಯಲ್ಲಿ (19) ಮತ್ತು ಕೋಲ್ಕತ್ತಾದಲ್ಲಿ (21) ನಡೆಯಲಿದೆ. ನಂತರ 25ರಂದು ಟೆಸ್ಟ್ ಸರಣಿ ಆರಂಭವಾಗಲಿದೆ. ನೂತನ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್ ಅವರ ಮಾರ್ಗದರ್ಶನದ ಮೊದಲ ಸರಣಿ ಇದಾಗಿದೆ.

ಟಿ20 ಸರಣಿ ಬಳಿಕ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು ಮೊದಲ ಟೆಸ್ಟ್​ ಪಂದ್ಯ ರೋಹಿತ್​ ಅವರ ನಾಯಕತ್ವದಲ್ಲೇ ನಡೆಯಲಿದೆ. ವಿರಾಟ್​ ಕೊಹ್ಲಿ ಎರಡನೇ ಟೆಸ್ಟ್​ ವೇಳೆ ಆಗಮಿಸಲಿದ್ದು ಬಳಿಕ ಅವರು ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಟಿ20 ಸರಣಿ ಮುಗಿದ ನಂತರ ನ. 25ರಿಂದ (2 ಪಂದ್ಯ) ಟೆಸ್ಟ್ ಸರಣಿ ಆರಂಭಗೊಳ್ಳಲಿವೆ. ಈ ಟೆಸ್ಟ್ ಸರಣಿಯ ಪೈಕಿ ಮೊದಲನೇ ಪಂದ್ಯ ಕಾನ್ಪುರ ಕ್ರೀಡಾಂಗಣದಲ್ಲಿ ರೋಹಿತ್​ ನಾಯಕತ್ವದಲ್ಲೇ ನಡೆಯಲಿದೆ. ಈ ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿಯಲಿದ್ದು ಎರಡನೇ ಟೆಸ್ಟ್​ನಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ.

ಭಾರತ T20 ತಂಡ :ರೋಹಿತ್​ ಶರ್ಮಾ (ಕ್ಯಾಪ್ಟನ್), ಕೆಎಲ್ ರಾಹುಲ್ (ಉ.ನಾ), ಋತುರಾಜ್​ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್,ರೀಷಬ್​ ಪಂತ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ವೆಂಕಟೇಶ್ ಅಯ್ಯರ್, ಯಜವಿಂದ್ರ ಚಹಾಲ್, ಆರ್. ಅಶ್ವಿನ್, ಅಕ್ಸರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್​​ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.

ಬಿಸಿಸಿಐ ನವೆಂಬರ್ 23 ರಿಂದ ಬ್ಲೋಮ್‌ಫಾಂಟೈನ್‌ನಲ್ಲಿ ಪ್ರಾರಂಭವಾಗಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತ ‘ಎ’ ತಂಡವನ್ನು ಕೂಡಾ ಆಯ್ಕೆ ಮಾಡಿದೆ. ಪ್ರವಾಸದ ವೇಳೆ ಭಾರತ ಎ ತಂಡವು 4 ದಿನಗಳ ಮೂರು ಟೆಸ್ಟ್​​ ಪಂದ್ಯಗಳನ್ನ ಆಡಲಿದೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ 'ಎ' ತಂಡ: ಪ್ರಿಯಾಂಕ್ ಪಾಂಚಾಲ್ (ನಾಯಕ), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್, ಸರ್ಫರಾಜ್ ಖಾನ್, ಬಾಬಾ ಅಪರಾಜಿತ್, ಉಪೇಂದ್ರ ಯಾದವ್ (ವಿಕೆಟ್-ಕೀಪರ್), ಕೆ ಗೌತಮ್, ರಾಹುಲ್ ಚಾಹರ್, ಸೌರಭ್ ಕುಮಾರ್, ನವದೀಪ್ ಸೈನಿ , ಉಮ್ರಾನ್ ಮಲಿಕ್, ಇಶಾನ್ ಪೊರೆಲ್, ಅರ್ಜಾನ್ ನಾಗ್ವಾಸ್ವಾಲ್ಲಾ

ABOUT THE AUTHOR

...view details