ಕ್ವೀನ್ಸ್ ಲ್ಯಾಂಡ್ : ಭಾರತ ಮತ್ತು ಆಸ್ಟ್ರೇಲಿಯಾ ವನಿತೆಯರ ಹಗಲು-ರಾತ್ರಿ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಮಳೆಯ ಕಾಟದಿಂದ ಮೊದಲ ಎರಡು ದಿನಗಳ ಆಟ ಪೂರ್ಣವಾಗಿ ನಡೆಯದ ಕಾರಣ ಈ ಟೆಸ್ಟ್ ಪಂದ್ಯ ಫಲಿತಾಂಶವಿಲ್ಲದೆ ಮುಗಿದಿದೆ.
ಭಾರತ ಮಹಿಳೆಯರು ಮೊದಲ ಇನ್ನಿಂಗ್ಸ್ನಲ್ಲಿ ಸ್ಮೃತಿ ಮಂದಾನ(127) ಅವರ ಶತಕದ ನೆರವಿನಿಂದ 377/8 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡರೆ, ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 96.4 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಘೋಷಿಸಿತು. ಎಲಿಸ್ ಪೆರ್ರಿ 68 ರನ್ ಮತ್ತು ಗಾರ್ಡ್ನರ್ 51 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.