ಕಾನ್ಪುರ:ಕಿವೀಸ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಅವರ ಅರ್ಧಶತಕದ ಬಲದೊಂದಿಗೆ ಭೋಜನ ವಿರಾಮದ ವೇಳೆಗೆ 1 ವಿಕೆಟ್ಗೆ 82 ರನ್ ಗಳಿಸಿದ್ದ ಭಾರತ ತಂಡ ದಿಢೀರ್ 3 ವಿಕೆಟ್ ಕಳೆದುಕೊಂಡು 154 ರನ್ಗಳಿಸಿದೆ.
ಟಾಸ್ ಗೆದ್ದ ಭಾರತದ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾಗಿ ಯುವ ಆಟಗಾರರಾದ ಶುಭಮನ್ ಗಿಲ್, ಮಯಾಂಕ್ ಅಗರ್ವಾಲ್ ಕಣಕ್ಕಿಳಿದರು. ಆದರೆ, ತಂಡದ ಮೊತ್ತ 21 ರನ್ಗಳಾಗಿದ್ದಾಗಲೇ 28 ಎಸೆತಗಳಲ್ಲಿ 13 ರನ್ ಬಾರಿಸಿದ್ದ ಅಗರ್ವಾಲ್, ಜೇಮಿಸನ್ ಬೌಲಿಂಗ್ನಲ್ಲಿ ಟಾಮ್ ಬ್ಲಂಡೆಲ್ಗೆ ಕ್ಯಾಚ್ ನೀಡಿ ಔಟಾದರು.
ಭೋಜನ ವಿರಾಮದ ಬೆನ್ನಲ್ಲೇ ಅರ್ಧಶತಕ ಸಿಡಿಸಿದ್ದ ಗಿಲ್ (52) ಜೇಮಿಸನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಂತರ ಆಗಮಿಸಿದ ನಾಯಕ ರಹಾನೆ ಚೇತೇಶ್ವರ ಪೂಜಾರ(26) ಅವರೊಂದಿಗೆ 3ನೇ ವಿಕೆಟ್ಗೆ 24ರನ್ ಸೇರಿಸಿದರು. ಪೂಜಾರ 26 ರನ್ಗಳಿಸಿದ್ದ ವೇಳೆ ಸೌಥಿ ಬೌಲಿಂಗ್ನಲ್ಲಿ ಕೀಪರ್ ಬ್ಲಂಡೆಲ್ಗೆ ಕ್ಯಾಚ್ ನೀಡಿ ಔಟಾದರು. ವೇಗದ ಆಟಕ್ಕೆ ಮುಂದಾಗಿ 63 ಎಸೆತಗಳಲ್ಲಿ 6 ಬೌಂಡರಿ ಸಿಡಿಸಿದ್ದ ನಾಯಕ ರಹಾನೆ ಕೂಡ ಜೇಮಿಸನ್ಗೆ 3ನೇ ಬಲಿಯಾದರು.