ಕರ್ನಾಟಕ

karnataka

ETV Bharat / sports

ಲಾಬುಶೇನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವಾರ್ನ್, ಸೈಮಂಡ್ಸ್ - ಮಾರ್ನಸ್ ಲಾಬುಶೇನ್

ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಿಂದಾಗಿ ಬಿಬಿಎಲ್ ಪಂದ್ಯದ ಆರಂಭ ವಿಳಂಬವಾಯಿತು. ಆ ವೇಳೆ ವಾರ್ನ್ ಮತ್ತು ಸೈಮಂಡ್ಸ್, ಮಾರ್ನಸ್ ಲಾಬುಶೇನ್ ಬಗ್ಗೆ ಮಾತನಾಡಿದ್ದರು.

ವಾರ್ನ್, ಸೈಮಂಡ್ಸ್
Warne, Symonds

By

Published : Jan 9, 2021, 11:40 AM IST

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಶೇನ್ ವಾರ್ನ್ ಮತ್ತು ಆಂಡ್ರ್ಯೂ ಸೈಮಂಡ್ಸ್, ಮಾರ್ನಸ್ ಲಾಬುಶೇನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಶುಕ್ರವಾರ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ನಡುವೆ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಪಂದ್ಯದ ಕುರಿತು ಈ ಜೋಡಿ ಪ್ರತಿಕ್ರಿಯಿಸಲು ಸಜ್ಜಾಗಿತ್ತು, ಆ ವೇಳೆ ಫಾಕ್ಸ್ ಸ್ಪೋಟ್ರ್ಸ್​ನ ಸ್ಟ್ರೀಮಿಂಗ್ ಆರ್ಮ್ ಫೀಡ್ ಲೈವ್​ನಲ್ಲಿ ಈ ಜೋಡಿ ಅವಹೇಳನಕಾರಿಯಾಗಿ ಮಾತನಾಡಿದ್ದು, ರೇಕಾರ್ಡ್​ ಆಗಿದ್ದು, ಆ ವಿಡಿಯೋ ಸೋಸಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಿಂದಾಗಿ ಬಿಬಿಎಲ್ ಪಂದ್ಯದ ಆರಂಭ ವಿಳಂಬವಾಯಿತು. ಆ ವೇಳೆ, ವಾರ್ನ್ ಮತ್ತು ಸೈಮಂಡ್ಸ್, ಮಾರ್ನಸ್ ಲಾಬುಶೇನ್ ಬಗ್ಗೆ ಮಾತನಾಡಿದ್ದರು.

ಇಎಸ್‌ಪಿಎನ್‌ಕ್ರಿನ್‌ಫೊ ಪ್ರಕಾರ, ಲಾಬುಶೇನ್ ಅವರನ್ನ ಬೌಲಿಂಗ್‌ಗೆ ತರಬೇಕು ಎಂದು ವಾರ್ನ್‌ ಸಂಭಾಷಣೆ ಪ್ರಾರಂಭಿಸಿದರು. ಆಗ, ಸೈಮಂಡ್ಸ್ "ಎಡಿಡಿ" ಎಂಬ ಪದವನ್ನು ಮಾರ್ನಸ್ ಲಾಬುಶೇನ್ ಗೆ ಬಳಸಿದ್ದಾರೆ. "ಎಡಿಡಿ" ಎಂದರೆ ಅವರಿಗೆ ಗಮನದ ಕೊರತೆ ಇದೆ ಎಂದರ್ಥ.

ಓದಿ : ಅಂಪೈರ್ ವಿರುದ್ಧ ಆಸೀಸ್ ನಾಯಕ ಅಸಮಾಧಾನ: ದಂಡ ವಿಧಿಸುವ ಸಾಧ್ಯತೆ

ನಂತರ ವಾರ್ನ್ ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್‌ನನ್ನು ಬ್ಯಾಟ್ ಮಾಡುವಾಗ ಮತ್ತು ಫೀಲ್ಡಿಂಗ್​ ಮಾಡುವಾಗ ಅವರ ವರ್ತನೆ ಮಿತಿ ಮೀರಿರುತ್ತೆ, ಇದು ಉಳಿದವರನ್ನ ಕಿರಿಕಿರಿಗೆ ಒಳಪಡಿಸುತ್ತದೆ ಎಂದು ಹೇಳಿದ್ದರು.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕಾಯೋ ಸ್ಪೋಟ್ಸ್​ ಸಂಸ್ಥೆ (Kayo) ಕ್ಷಮೆಯಾಚಿಸಿದೆ. "ನಮ್ಮ ಸ್ಟ್ರೀಮ್ ಮೊದಲೇ ಪ್ರಾರಂಭವಾಯಿತು ಮತ್ತು ಸ್ವೀಕಾರಾರ್ಹವಲ್ಲದ ಕೆಲವು ಕಾಮೆಂಟ್‌ಗಳನ್ನು ಪ್ರಸಾರ ಮಾಡಲಾಯಿತು. ಇದಕ್ಕಾಗಿ ನಮ್ಮ ಟೀಮ್​ ಮತ್ತು ಕಾಮೆಂಟರಿ ತಂಡದ ಪರವಾಗಿ, ನಾವು ಕ್ಷಮೆಯಾಚಿಸುತ್ತೇವೆ" ಎಂದು ಕಾಯೋ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.

ABOUT THE AUTHOR

...view details