ಹೈದರಾಬಾದ್ : ಕೊರೊನಾ ಎಫೆಕ್ಟ್ ನಿಂದ 290 ದಿನಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಆರಂಭವಾಗಿದ್ದು, ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಇಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಪಂದ್ಯ ನಡೆಯುತ್ತಿದ್ದು, ಕಾಂಗರೂ ಪಡೆಯ ಬ್ಯಾಟ್ಸ್ಮನ್ಗಳು ಟೀಂ ಇಂಡಿಯಾ ಬೌಲರ್ಗಳಿಗೆ ಬೆವರಿಳಿಸಿದ್ದಾರೆ.
ಐಪಿಎಲ್ನಲ್ಲಿ ಫ್ಲಾಪ್ .. ಟೀಂ ಇಂಡಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಫುಲ್ ಮಾಸ್ - today India Australia first ODI Match
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಫಿಂಚ್ ಪಡೆಗೆ ಉತ್ತಮ ಆರಂಭ ಸಿಕ್ಕಿತು. ಡೇವಿಡ್ ವಾರ್ನರ್ ಜೊತೆ ಓಪನರ್ ಆಗಿ ಕಣಕ್ಕಿಳಿದ ನಾಯಕ ಆ್ಯರೋನ್ ಫಿಂಚ್ (114) ಶತಕ ಸಿಡಿಸಿ ಮಿಂಚಿದರೆ, ವಾರ್ನರ್ (69) ಅರ್ಧಶತಕ ಸಿಡಿಸಿ ಮಿಂಚಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಫಿಂಚ್ ಪಡೆಗೆ ಉತ್ತಮ ಆರಂಭ ಸಿಕ್ಕಿತು. ಡೇವಿಡ್ ವಾರ್ನರ್ ಜೊತೆ ಓಪನರ್ ಆಗಿ ಕಣಕ್ಕಿಳಿದ ನಾಯಕ ಆ್ಯರೋನ್ ಫಿಂಚ್ (114) ಶತಕ ಸಿಡಿಸಿ ಮಿಂಚಿದರೆ, ವಾರ್ನರ್ (69) ಅರ್ಧಶತಕ ಸಿಡಿಸಿ ಮಿಂಚಿದರು.
ವಾರ್ನರ್ ವಿಕೆಟ್ ನಂತರ ಕ್ರೀಸ್ಗಿಳಿದ ಸ್ಟೀವನ್ ಸ್ಮಿತ್ ಅಬ್ಬರದ ಬ್ಯಾಟಿಂಗ್ ಮಾಡಿದರು. ಇನ್ನೂ ಆಶ್ಚರ್ಯವೆಂದರೆ ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ರನ್ ಗಳಿಸಲು ಪರದಾಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಈ ಪಂದ್ಯದಲ್ಲಿ ಅಬ್ಬರಿಸಿದರು. ಕೇವಲ 19 ಬೌಲ್ಗಳಲ್ಲಿ 5 ಬೌಂಡರಿ 3 ಸಿಕ್ಸರ್ ಮೂಲಕ ಭರ್ಜರಿ 45 ರನ್ ಬಾರಿಸಿದರು. ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಪಂಜಾಬ್ ಪರ ಕಣಕ್ಕಿಳಿದಿದ್ದ ಮ್ಯಾಕ್ಸ್‌ವೆಲ್ 13 ಪಂದ್ಯಗಳಲ್ಲಿ ಕೇವಲ 108 ರನ್ ಗಳಿಸಿದ್ದಾರೆ. ಇದರಲ್ಲಿ ಒಂದೂ ಸಿಕ್ಸರ್ ಸಿಡಿಸದಿರುವುದು ಅಚ್ಚರಿ ಮೂಡಿಸಿತ್ತು.