ಬ್ರಿಸ್ಬೇನ್:ಭಾರತ ಹೊಸ ಇತಿಹಾಸ ಸೃಷ್ಟಿಗೆ ಇಲ್ಲಿನ ಗಬ್ಬಾ ಕ್ರೀಡಾಂಗಣ ಸಾಕ್ಷಿಯಾಯಿತು. ಕೊನೆಯ ಟೆಸ್ಟ್ನ ಅಂತಿಮ ದಿನದಾಟದಲ್ಲಿ 324 ರನ್ ಗುರಿ ಬೆನ್ನತ್ತಿದ್ದ ಭಾರತ, 3 ವಿಕೆಟ್‌ಗಳ ರೋಚಕ ಜಯ ದಾಖಲಿಸಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.
'ತೀರಾ ಭಾವುಕನಾಗಿದ್ದೇನೆ. ಸಾಮಾನ್ಯವಾಗಿ ಎಂದೂ ಕಣ್ಣೀರು ಹಾಕಿದವನಲ್ಲ. ಆದರೆ, ಈ ಶ್ರೇಷ್ಠ ಸರಣಿ ಗೆಲುವಿನ ನಂತರ ಸಹಜವಾಗಿಯೇ ಕಣ್ಣಲ್ಲಿ ನೀರು ಬರುತ್ತಿವೆ' ಎಂದು ರವಿ ಶಾಸ್ತ್ರಿ ಹೇಳಿದರು.
ಭಾರತ ತಂಡದ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ಅಜಿಂಕ್ಯ ರಹಾನೆ ಇತಿಹಾಸದಲ್ಲಿ ಈವರೆಗೂ ಆಡಿದ ಶ್ರೇಷ್ಠ ಸರಣಿಗಳಲ್ಲಿ ಇದೂ ಒಂದು. ಕೋವಿಡ್ ನಂತರ ಮೈದಾನಕ್ಕಿಳಿದ ಮೊದಲ ಟೆಸ್ಟ್ನಲ್ಲಿ 36 ರನ್ಗಳಿಗೆ ತಂಡ ಆಲೌಟ್ ಆಗಿತ್ತು. ಅಲ್ಲದೆ, ಅನುಭವಿ ಆಟಗಾರರು ಗಾಯಗೊಂಡರು. ಹೀಗಾಗಿ, ಉಳಿದ ಪಂದ್ಯಗಳಲ್ಲಿ ಕಠಿಣ ಸ್ಪರ್ಧೆಯೊಡ್ಡಲಾರರು ಎಂದು ಟೀಕಿಸಿದವರೇ ಹೆಚ್ಚು. ಆದರೆ, ನಮ್ಮ ಹುಡುಗರು ಅದಕ್ಕೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಹೀಗಾಗಿ, ಸಂತೋಷಕ್ಕೆ ಪಾರವೇ ಇಲ್ಲವಾಗಿದೆ ಎಂದು ಆನಂದ ಭಾಷ್ಪ ಸುರಿಸಿದರು.
ಇದನ್ನೂ ಓದಿ:ಕೊನೆಯ ಬಾರಿ ಗಬ್ಬಾದಲ್ಲಿ ಆಸೀಸ್ ಸೋತಾಗ ಕೊಹ್ಲಿ ಹುಟ್ಟಿ 16 ದಿನಗಳಾಗಿತ್ತು!
ಟೀಕೆ ಮತ್ತು ಅನುಭವಿಗಳ ಕೊರತೆ ಎದುರಿಸಿ 2020-21ರ ಸರಣಿ ಗೆಲುವಿಗೆ ಕಾರಣರಾದ ನಾಯಕ ಅಜಿಂಕ್ಯ ರಹಾನೆ ಬಳಗವನ್ನು ಶ್ಲಾಘಿಸಿದರು. ಆಟಗಾರರು ಮಾನಸಿಕವಾಗಿ ಗಟ್ಟಿಯಾಗಿದ್ದರೆ ಎಂತಹ ಸವಾಲನ್ನೂ ಕೂಡ ಎದುರಿಸಬಹುದು ಎಂಬುದಕ್ಕೆ ಈ ಸರಣಿ ಗೆಲುವೇ ಉತ್ತಮ ಉದಾಹರಣೆ ಎಂದು ಹೇಳಿದರು.