ಕರ್ನಾಟಕ

karnataka

ETV Bharat / sports

ಭಾರತ v/s ಆಸ್ಟ್ರೇಲಿಯಾ: ಎಂತಹದ್ದೇ ಪರಿಸ್ಥಿತಿ ಎದುರಿಸಲು ನಾವು ಸಿದ್ಧರಿದ್ದೇವೆ- ಕೊಹ್ಲಿ - ಬಾರ್ಡರ್ ಗವಾಸ್ಕರ್ ಟ್ರೋಫಿ 2020

ಪಿಂಕ್​ ಬಾಲ್​ ಟೆಸ್ಟ್ ಪಂದ್ಯಗಳಿಗೆ ಇಳಿಯುವಾಗ ಸಾಕಷ್ಟು ವಿಶ್ಲೇಷಿಸಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು. ಪರಿಸ್ಥಿತಿ ಎದುರಿಸುತ್ತಿದ್ದಂತೆ ಮುಂದಿನದ್ದು ತೆರೆದುಕೊಳ್ಳುತ್ತದೆ. ನಮ್ಮ ಯೋಜನೆಗಳು ಬಹುಮಟ್ಟಿಗೆ ವಿಂಗಡನೆಯಾಗಿವೆ. ಎದುರಾಗಲಿರುವ ಎಲ್ಲ ಬ್ಯಾಟ್ಸ್‌ಮನ್‌ಗಳನ್ನು ಎದುರಿಸಲು ನಾವು ಸಿದ್ಧವಾಗಿದ್ದೇವೆ. ನಮ್ಮ ಗೇಮ್​ ಪ್ಲಾನ್​ಗಳನ್ನು ಸ್ಥಿರವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುತ್ತೇವೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

Kohli
ಕೊಹ್ಲಿ

By

Published : Dec 16, 2020, 4:01 PM IST

ಅಡಿಲೇಡ್:ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದು, 'ಮುಂದಿನ ಕೆಲವು ದಿನಗಳಲ್ಲಿ ಎದುರಾಗುವ ಯಾವುದೇ ಸವಾಲುಗಳನ್ನು ಎದುರಿಸಲು ತಮ್ಮ ತಂಡ ಸಜ್ಜಾಗಿದೆ' ಎಂದು ಹೇಳಿದ್ದಾರೆ.

ಪಿಂಕ್​ ಬಾಲ್​​ ಮೊದಲ ಟೆಸ್ಟ್ ಪಂದ್ಯ ಗುರುವಾರದಿಂದ ಪ್ರಾರಂಭವಾಗಲಿದ್ದು, ಆಸೀಸ್​ ಬ್ಯಾಟ್ಸ್‌ಮನ್‌ಗಳು ಎದುರಿಸಲು ಬೌಲರ್‌ಗಳು ಮೊದಲ ಸೆಷನ್​ನಿಂದಲೇ ಶಿಸ್ತುಬದ್ಧ ದಾಳಿ ನಡೆಸಲಿದ್ದಾರೆ ಎಂದಿದ್ದಾರೆ.

ಟೆಸ್ಟ್ ಮ್ಯಾಚ್ ಆಡುವಾಗ ಸರಿಯಾದ ಆಲೋಚನೆ ಇರಬೇಕೆಂದು ನಾನು ಭಾವಿಸುತ್ತೇನೆ. ಟೆಸ್ಟ್ ಕ್ರಿಕೆಟ್ ಎಂಬುದು ಬರಲಿರುವ ಸನ್ನಿವೇಶಗಳನ್ನು ಎದುರಿಸುವುದು. ಸಂದರ್ಭಕ್ಕೆ ತಕ್ಕಂತೆ ಎದುರಾಗುವ ಸಾಮರ್ಥ್ಯಗಳಿಗೆ ಪ್ರತಿಕ್ರಿಯಿಸುವುದು. ಆಕ್ರಮಣಕಾರಿ ಆಡುವಾಗ ರಕ್ಷಣಾತ್ಮಕ ಆಟದ ಮೊರೆ ಹೋಗಬೇಕಾಗುತ್ತದೆ. ಪ್ರತಿ ಸೆಷನ್​ ಬ್ಯಾಟಿಂಗ್ ಅನ್ನು ಉತ್ತಮವಾಗಿ ಕೊನೆಗೊಳಿಸಬೇಕು. ಕೆಲವೊಮ್ಮ ಸೆಷನ್​ ಅನ್ನು ಚೆನ್ನಾಗಿ ಪ್ರಾರಂಭಿಸಿದ ಹೊರತಾಗಿಯೂ ಪಿಂಕ್​ ಬಾಲ್​ ಪಂದ್ಯವು ಪರೀಕ್ಷೆಯನ್ನು ತಂದೊಡ್ಡುತ್ತದೆ. ಕೆಲವೊಮ್ಮೆ ಅಸ್ಥಿರತೆ ತರುತ್ತದೆ. ಆ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡುವುದು ಒಂದು ಟ್ರಿಕಿ. ಬಹುಶಃ ಮೊದಲ ಸೆಷನ್‌ನಲ್ಲಿ ಬೌಲಿಂಗ್ ಮಾಡುವುದು ಹೆಚ್ಚು ಶಿಸ್ತುಬದ್ಧವಾಗಿರುತ್ತದೆ ಎಂದು ಕೊಹ್ಲಿ ಹೇಳಿದರು.

ನನ್ನ ಅನುಪಸ್ಥಿತಿಯಲ್ಲಿ ರಹಾನೆ ತಂಡವನ್ನು ಉತ್ತಮವಾಗಿ ಮುನ್ನಡೆಸಲಿದ್ದಾರೆ: ಕೊಹ್ಲಿ ವಿಶ್ವಾಸ

ಪಿಂಕ್​ ಬಾಲ್​ ಟೆಸ್ಟ್ ಪಂದ್ಯಗಳಿಗೆ ಹೋಗುವಾಗ ಸಾಕಷ್ಟು ವಿಶ್ಲೇಷಿಸಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು. ಪರಿಸ್ಥಿತಿ ಎದುರಿಸುತ್ತಿದ್ದಂತೆ ಮುಂದಿನದ್ದು ತೆರೆದುಕೊಳ್ಳುತ್ತದೆ. ನಮ್ಮ ಯೋಜನೆಗಳು ಬಹುಮಟ್ಟಿಗೆ ವಿಂಗಡನೆಯಾಗಿವೆ. ಎದುರಾಗಲಿರುವ ಎಲ್ಲ ಬ್ಯಾಟ್ಸ್‌ಮನ್‌ಗಳನ್ನು ಎದುರಿಸಲು ನಾವು ಸಿದ್ಧವಾಗಿದ್ದೇವೆ. ನಮ್ಮ ಗೇಮ್​ ಪ್ಲಾನ್​ಗಳನ್ನು ಸ್ಥಿರವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಭಾರತದ ಹನ್ನೊಂದರ ಬಳಗ: ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ವೃದ್ಧಿಮಾನ್ ಸಹಾ, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮತ್ತು ಜಸ್ಪ್ರೀತ್ ಬುಮ್ರಾ.

ABOUT THE AUTHOR

...view details