ಕರ್ನಾಟಕ

karnataka

IND vs NZ: ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್ ಸರಣಿಗೆ ತಂಡ ಪ್ರಕಟ; ಅಜಿಂಕ್ಯ ರಹಾನೆ ನಾಯಕ

By

Published : Nov 12, 2021, 1:33 PM IST

Updated : Nov 12, 2021, 1:41 PM IST

ನವೆಂಬರ್ 25 ರಂದು ಕಾನ್ಪುರದಲ್ಲಿ ನ್ಯೂಜಿಲ್ಯಾಂಡ್​ (New Zealand) ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ತಂಡದ ನಾಯಕತ್ವದ ವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ (BCCI) ಮಾಹಿತಿ ನೀಡಿದೆ. ಇನ್ನು ಮುಂಬೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ (Virat Kohli) ಆಗಮಿಸಲಿದ್ದು, ತಂಡದ ಮುಂದಾಳತ್ವ ವಹಿಸಿಕೊಳ್ಳಲಿದ್ದಾರೆ.

India name Test squad: Virat Kohli rested for first Test against NZ, Rahane to lead
India name Test squad: Virat Kohli rested for first Test against NZ, Rahane to lead

ಮುಂಬೈ (ಮಹಾರಾಷ್ಟ್ರ):ನ್ಯೂಜಿಲ್ಯಾಂಡ್​ (New Zealand) ವಿರುದ್ಧದ ಈ ತಿಂಗಳ ಕಿನೆಯಲ್ಲಿ ನಡೆಯಲಿರುವ ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಇಂದು ತಂಡವನ್ನು ಪ್ರಕಟಿಸಿದೆ. ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು ಅನುಭವಿ ಆಟಗಾರ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.

ಎರಡನೇ ಟೆಸ್ಟ್​ (second Test) ಪಂದ್ಯಕ್ಕೆ ರನ್​ ಮಿಷನ್​ ವಿರಾಟ್ ಕೊಹ್ಲಿ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ನುಡುವೆ ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ರಿಷಭ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಚೇತೇಶ್ವರ ಪೂಜಾರ ಮೊದಲ ಪಂದ್ಯಕ್ಕೆ ಉಪ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧ ಎರಡು ಟೆಸ್ಟ್​ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯವು ಕಾನ್ಪುರದಲ್ಲಿ ನವೆಂಬರ್​ 25ರಂದು ಆರಂಭವಾಗಲಿದೆ. ಇನ್ನು ಎರಡನೇ ಪಂದ್ಯ ಡಿಸೆಂಬರ್​ 3ರಿಂದ ಮುಂಬೈನಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿ ಬಳಿಕ ರೋಹಿತ್‌ ಶರ್ಮಾ ಟೆಸ್ಟ್​ ಸರಣಿಯ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು.

ಟೀಂ ಇಂಡಿಯಾದ ತಂಡ: ಅಜಿಂಕ್ಯ ರಹಾನೆ (ನಾಯಕ), ಚೇತೇಶ್ವರ ಪೂಜಾರ (ಉಪ ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಾಹಾ (ವಿಕೆಟ್​ ಕೀಪರ್​), ಕೆಎಸ್ ಭರತ್ (ವಿಕೆಟ್​ ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ.

Last Updated : Nov 12, 2021, 1:41 PM IST

ABOUT THE AUTHOR

...view details