ಕರ್ನಾಟಕ

karnataka

ETV Bharat / sports

ತವರಿನಲ್ಲಿ ಸತತ 15ನೇ ಟೆಸ್ಟ್ ಸರಣಿ ಜಯ.. ವಿಶ್ವದಾಖಲೆ ಮತ್ತಷ್ಟು ಬಲಿಷ್ಠಪಡಿಸಿಕೊಂಡ ಭಾರತ.. - ತವರಿನಲ್ಲಿ ಸತತ 15 ಟೆಸ್ಟ್ ಸರಣಿ ಗೆದ್ದ ಭಾರತ

2012-13ರಲ್ಲಿ ಇಂಗ್ಲೆಂಡ್ ವಿರುದ್ಧ 1-2ರಲ್ಲಿ ಟೆಸ್ಟ್​ ಸರಣಿಯನ್ನು ಕಳೆದುಕೊಂಡಿತ್ತು. ಆದರೆ 2016-17ರ ಪ್ರವಾಸದಲ್ಲಿ 4-0ಯಲ್ಲಿ ಮಣಿಸುವ ಮೂಲಕ ಭಾರತ ಸೇಡು ತೀರಿಸಿಕೊಂಡಿತ್ತು. ಆದರೆ, 2013ರಿಂದ 2022ರ ಶ್ರೀಲಂಕಾ ಸರಣಿಯವರೆಗೆ ಸತತ 15 ಟೆಸ್ಟ್​ ಸರಣಿಯನ್ನು ಗೆದ್ದು ಪ್ರಾಬಲ್ಯ ಸಾಧಿಸಿದೆ..

India Increase world record of most consecutive Test series wins at home
ತವರಿನಲ್ಲಿ ಸತತ15ನೇ ಟೆಸ್ಟ್ ಸರಣಿ ಜಯ

By

Published : Mar 15, 2022, 4:22 PM IST

ಬೆಂಗಳೂರು :ಶ್ರೀಲಂಕಾ ವಿರುದ್ಧ ಟೆಸ್ಟ್​ ಸರಣಿಯನ್ನು ಗೆಲ್ಲುವ ಮೂಲಕ ಭಾರತ ತಂಡ ತವರಿನಲ್ಲಿ ತಮ್ಮ ಆಧಿಪತ್ಯವನ್ನು ಮುಂದುವರಿಸಿದೆ. 2013ರ ನಂತರ ಆಡಿರುವ ಎಲ್ಲಾ ಟೆಸ್ಟ್​ ಸರಣಿಗಳು ಟೀಂ ಇಂಡಿಯಾ ಪಾಲಾಗಿವೆ.

2012-13ರಲ್ಲಿ ಇಂಗ್ಲೆಂಡ್ ವಿರುದ್ಧ 1-2ರಲ್ಲಿ ಟೆಸ್ಟ್​ ಸರಣಿಯನ್ನು ಕಳೆದುಕೊಂಡಿತ್ತು. ಆದರೆ, 2016-17ರ ಪ್ರವಾಸದಲ್ಲಿ 4-0ಯಲ್ಲಿ ಮಣಿಸುವ ಮೂಲಕ ಭಾರತ ಸೇಡು ತೀರಿಸಿಕೊಂಡಿತ್ತು. ಆದರೆ, 2013ರಿಂದ 2022ರ ಶ್ರೀಲಂಕಾ ಸರಣಿಯವರೆಗೆ ಸತತ 15 ಟೆಸ್ಟ್​ ಸರಣಿಯನ್ನು ಗೆದ್ದು ಪ್ರಾಬಲ್ಯ ಸಾಧಿಸಿದೆ.

2013ರಲ್ಲಿ ಆಸ್ಟ್ರೇಲಿಯ ತಂಡವನ್ನು 4-0ಯಲ್ಲಿ ಮಣಿಸುವ ಮೂಲಕ ಭಾರತ ತಂಡ ತವರಿನಲ್ಲಿ ಸರಣಿ ಗೆಲುವಿನ ಅಭಿಯಾನ ಆರಂಭಿಸಿತ್ತು. ಇದೀಗ 9 ವರ್ಷಗಳ ಅವಧಿಯಲ್ಲಿ ಪಾಕಿಸ್ತಾನವನ್ನು ಹೊರತುಪಡಿಸಿ (ಪಾಕ್​ ವಿರುದ್ಧ ಆಡಿಲ್ಲ) 8 ದೇಶಗಳ ವಿರುದ್ಧ ಭಾರತ ಸತತ 15 ಟೆಸ್ಟ್​ ಸರಣಿಗಳನ್ನು ಗೆದ್ದ ದಾಖಲೆಗೆ ಪಾತ್ರವಾಗಿದೆ.

ಇದನ್ನೂ ಓದಿ:ಅಯ್ಯರ್ ಉತ್ತಮವಾಗಿ ಆಡಿದ್ದಾರೆ, ಆದ್ರೆ ರಹಾನೆ-ಪೂಜಾರ ಸ್ಥಾನ ತುಂಬಲು ಇನ್ನೂ ಶ್ರಮಿಸಬೇಕು: ರೋಹಿತ್

ಈಗಾಗಲೇ ತವರಿನಲ್ಲಿ ಹೆಚ್ಚು ಟೆಸ್ಟ್​ ಸರಣಿಯನ್ನು ಗೆದ್ದಿರುವ ವಿಶ್ವದಾಖಲೆಯನ್ನು ಹೊಂದಿರುವ ಭಾರತ ವರ್ಷದಿಂದ ವರ್ಷಕ್ಕೆ ತನ್ನನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತಿದೆ. ಭಾರತವನ್ನು ಹೊರತುಪಡಿಸಿದರೆ ತವರಿನಲ್ಲಿ ಸತತ ಟೆಸ್ಟ್​ ಸರಣಿಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ. ಆಸ್ಟ್ರೇಲಿಯಾ 2 ಬಾರಿ (1994ರಿಂದ 2001, 2004 ರಿಂದ 2008) ಸತತ 10 ಟೆಸ್ಟ್​ ಸರಣಿಗಳನ್ನು ಗೆದ್ದ ದಾಖಲೆ ಹೊಂದಿದೆ.

2013ರಿಂದ ಭಾರತ ಗೆದ್ದ ಟೆಸ್ಟ್​ ಸರಣಿ ಪಟ್ಟಿ

  1. ಆಸ್ಟ್ರೇಲಿಯಾ ವಿರುದ್ಧ 4-0
  2. ವೆಸ್ಟ್​ ಇಡೀಸ್ ವಿರುದ್ಧ 2-0
  3. ದಕ್ಷಿಣ ಆಫ್ರಿಕಾ ವಿರುದ್ಧ 3-0
  4. ನ್ಯೂಜಿಲ್ಯಾಂಡ್ ವಿರುದ್ಧ 3-0 ಜಯ
  5. ಇಂಗ್ಲೆಂಡ್ ವಿರುದ್ಧ 4-0(5 ಪಂದ್ಯ)
  6. ಬಾಂಗ್ಲಾದೇಶದ ವಿರುದ್ಧ 1-0
  7. ಆಸ್ಟ್ರೇಲಿಯಾ ವಿರುದ್ಧ 2-1(4 ಪಂದ್ಯ)
  8. ಶ್ರೀಲಂಕಾ ವಿರುದ್ಧ 1-0(3)
  9. ಅಫ್ಘಾನಿಸ್ತಾನದ ವಿರುದ್ಧ 1-0
  10. ವೆಸ್ಟ್​ ಇಂಡೀಸ್ ವಿರುದ್ಧ 2-0
  11. ದಕ್ಷಿಣ ಆಫ್ರಿಕಾ ವಿರುದ್ಧ 3-0
  12. ಬಾಂಗ್ಲಾದೇಶದ ವಿರುದ್ಧ 2-0
  13. ಇಂಗ್ಲೆಂಡ್ ವಿರುದ್ಧ 3-1(4 ಪಂದ್ಯ)
  14. ನ್ಯೂಜಿಲ್ಯಾಂಡ್ ವಿರುದ್ಧ 1-0(2 ಪಂದ್ಯ)
  15. ಶ್ರೀಲಂಕಾ ವಿರುದ್ಧ 2-0

ABOUT THE AUTHOR

...view details