ಕರ್ನಾಟಕ

karnataka

ETV Bharat / sports

ಧರ್ಮಶಾಲಾ ಕ್ರೀಡಾಂಗಣ: ವಿಶ್ವದ ಅತಿ ಎತ್ತರದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಿದ್ದೇ ಒಂದು ಅದ್ಭುತ

ಭವ್ಯವಾದ ಧೌಲಾ ಧಾರ್ ಪರ್ವತಗಳ ತೊಟ್ಟಿಲಲ್ಲಿರುವ ಅದ್ಭುತವಾದ ಕ್ರೀಡಾಂಗಣದಲ್ಲಿ ಇಂದು ಭಾರತ, ನ್ಯೂಜಿಲೆಂಡ್ ಹಣಾಹಣಿ ನಡೆಯಲಿದೆ.

world cup
ಧರ್ಮಶಾಲಾ

By ETV Bharat Karnataka Team

Published : Oct 22, 2023, 9:28 AM IST

ಧರ್ಮಶಾಲಾ:ಹಿಮಾಲಯದ ತಪ್ಪಲಿನಲ್ಲಿರುವ ನಯನಮನೋಹರ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಭಾರತ, ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಪ್ರಸಕ್ತ ವಿಶ್ವಕಪ್​ನಲ್ಲಿ ಈವರೆಗೆ ವಿಜಯಯಾತ್ರೆ ಮುಂದುವರಿಸಿರುವ ಬಲಿಷ್ಠ ಉಭಯ ತಂಡಗಳ ಹಣಾಹಣಿಗೆ ಹಿಮಾಲಯದ ಸ್ಟೇಡಿಯಂ ಸಾಕ್ಷಿಯಾಗಲಿದೆ.

ಹಿಮಾಲಯದ ತಪ್ಪಲಿನಲ್ಲಿ ಬೆಟ್ಟಗಳನ್ನು ಕೊರೆದು ಇಳಿಜಾರು ಪ್ರದೇಶದಲ್ಲಿ ಸುಂದರವಾದ ಸ್ಟೇಡಿಯಂ ನಿರ್ಮಿಸಿರುವುದೇ ಒಂದು ಅದ್ಭುತ. ಬೆಟ್ಟದ ಮೇಲೆ ಹಸಿರಿನಿಂದ ಕಂಗೊಳಿಸುವ ನಯನಮನೋಹರ ಸ್ಟೇಡಿಯಂ ನಿರ್ಮಾಣ ಅಷ್ಟು ಸುಲಭವಲ್ಲ. ಆದ್ರೆ ಹರಸಾಹಸಪಟ್ಟು ಇಲ್ಲಿ ವಿಶ್ವದ ಎತ್ತರ ಕ್ರಿಕೆಟ್ ಮೈದಾನ ನಿರ್ಮಿಸಲಾಗಿದೆ.

ಸ್ಟೇಡಿಯಂ ನಿರ್ಮಿಸಲು ಮೊದಲು ಇಳಿಜಾರನ್ನು ವೃತ್ತಾಕಾರದ ಪ್ರಸ್ಥಭೂಮಿಯ ಆಕಾರಕ್ಕೆ ತಂದು ನಂತರ ಅಲ್ಲಿ ಹರಿಯುತ್ತಿದ್ದ ನದಿ ಮೂಲದ ಮಾರ್ಗವನ್ನು ಯಾವುದೇ ಅಡೆತಡೆ ಬದಲಿಸಲಾಗಿದೆ. ಸದ್ಯ 21,800 ಆಸನಗಳ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣ ವಿಶ್ವಕಪ್​ ಗೌರವಾರ್ಥವಾಗಿ ಐಸಿಸಿ ಬಣ್ಣಗಳಿಂದ ಅಲಂಕಾರಗೊಂಡಿದೆ. ಸ್ಟೇಡಿಯಂನ ಒಂದು ತುದಿಯಲ್ಲಿ ಆಳವಾದ ಕಣಿವೆ ಮತ್ತು ಇನ್ನೊಂದು ಕಡೆ ಪರ್ವತ ಶಿಖರಗಳು ನಮನ ಸಲ್ಲಿಸುವಂತಿವೆ.

ವಿಶ್ವದ ಹಲವು ದೇಶಗಳಲ್ಲಿ ಬೆಟ್ಟಗಳಲ್ಲಿ ಮೈದಾನ ಮಾಡಲಾಗಿದೆ. ಆದರೆ ಧರ್ಮಶಾಲಾ ಕ್ರೀಡಾಂಗಣವು ಹಿಮಾಲಯದ ತಪ್ಪಲಿನಲ್ಲಿರುವುದು ವಿಶೇಷ. ಇದು 1457 ಮೀಟರ್‌ಗಳಿಗಿಂತ ಎತ್ತರದಲ್ಲಿದ್ದು, ವಿಶ್ವದ ಅತಿ ಎತ್ತರದ ಮತ್ತು ಏಕೈಕ ಕ್ರಿಕೆಟ್ ಮೈದಾನವಾಗಿದೆ.

ದಲೈ ಲಾಮಾ ಅವರು ಇಲ್ಲಿ ಒಮ್ಮೆ ಕುಳಿತು ಇಡೀ ಪಂದ್ಯವನ್ನು ನೋಡಿದ ಬಳಿಕ ಕ್ರೀಡಾಂಗಣವನ್ನು ಬಣ್ಣಿಸಿದ್ದರು. ಇದು ವಿಶ್ವ ಮತ್ತು ಭಾರತದಲ್ಲಿರುವ ಅತ್ಯದ್ಭುತವಾದ ಏಕೈಕ ಹಚ್ಚ ಹಸಿರ ಸ್ಟೇಡಿಯಂ ಎಂದು ಕರೆದಿದ್ದರು.

"ನಮಗೆ ಸ್ಥಳಾವಕಾಶವಿತ್ತು, ಆದರೆ ಅನುರಾಗ್ ಠಾಕೂರ್ ಅವರ ದೂರದೃಷ್ಟಿಯಿಂದಾಗಿ ಈ ಇಳಿಜಾರಿನ ತುಂಡು ಬೆಟ್ಟದಲ್ಲಿ ಸುಂದರ ಕ್ರೀಡಾಂಗಣ ತಲೆಎತ್ತಿದೆ” ಎಂದು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್‌ನ ಕಾರ್ಯಕಾರಿ ಸದಸ್ಯ ಮೋಹಿತ್ ಸುದ್ ಹೇಳುತ್ತಾರೆ. ಮೈದಾನದ ಎರಡು ತುದಿಗಳಲ್ಲಿ ವಿಶಿಷ್ಟವಾದ ಹಿಮಾಚಲಿ ದೇವಾಲಯದ ವಾಸ್ತುಶಿಲ್ಪ ಕಂಗೊಳಿಸುತ್ತದೆ. ಇಲ್ಲಿ ನಿಂತುಕೊಂಡರೆ ಸೂರ್ಯ ಮತ್ತು ಮೋಡಗಳ ಕಣ್ಣಾಮುಚ್ಚಾಲೆಯನ್ನು ನೋಡಬಹುದು. ಪ್ರಸಕ್ತ ವಿಶ್ವಕಪ್​ನಲ್ಲಿ ಇದೇ ಮೊದಲ ಬಾರಿಗೆ ಧರ್ಮಶಾಲಾದಲ್ಲಿ ಐದು ಪಂದ್ಯಗಳು ನಡೆಯಲಿವೆ. ಈ ಮೊದಲು ಕೂಡ T2O ವಿಶ್ವಕಪ್ ಪಂದ್ಯಗಳಿಗೆ ಇದು ಆತಿಥ್ಯ ವಹಿಸಿತ್ತು. ಔಟ್‌ಫೀಲ್ಡ್ ಸ್ಕ್ರಾಚಿಯಾಗಿದ್ದರೂ ಫೀಲ್ಡ​ರ್​​ಗಳಿಗೆ ಯಾವುದೇ ತೊಂದರೆ ಇಲ್ಲ. ಈ ಮೊದಲು ಬರ್ಮುಡಾ ಹುಲ್ಲ ಇತ್ತು, ಇದೀಗ ರೇ ಹುಲ್ಲು ಇದೆ ಎಂದು ಮೋಹಿತ್ ತಿಳಿಸಿದ್ದಾರೆ.

ಆಕರ್ಷಕ ಕ್ರೀಡಾಂಗಣದ ನೆಲದಡಿಯಲ್ಲಿ ಉಪ-ವಾಯು ಸ್ಥಳಾಂತರಿಸುವ ಪ್ರಕ್ರಿಯೆ ಮತ್ತು ಲೇಸರ್-ನೆರವಿನ ಪೈಪ್‌ಗಳಿವೆ, ಇದರಿಂದ ಮೈದಾನ ತ್ವರಿತವಾಗಿ ಒಣಗುತ್ತದೆ. ಧರ್ಮಶಾಲಾವು ದೇಶದ ಎರಡನೇ ಅತಿ ಹೆಚ್ಚು ಮಳೆಯ ಪಟ್ಟಣವಾಗಿದ್ದರೂ 10 ನಿಮಿಷಗಳಲ್ಲಿ ಕ್ರೀಡಾಂಗಣವನ್ನು ಒಣಗಿಸಬಹುದು. ಈ ಮೈದಾನ ಸ್ಪಿನ್ನರ್ ಮತ್ತು ಸ್ವಿಂಗ್ ಬೌಲರ್​ಗಳಿಗೆ ಪೂರಕವಾಗಿದೆ. ಹೆಚ್ಚು ಚಳಿ, ಭಾರಿ ಮಳೆ ಮತ್ತು ಹೆಚ್ಚಿನ ತೇವಾಂಶದ ಹೊರತಾಗಿಯೂ, ಫೀಲ್ಡ್‌ನಲ್ಲಿರುವ ಹುಲ್ಲು ಹುಲುಸಾಗಿದೆ ಎಂದು ಹೇಳಿದ್ದಾರೆ.

ಈ ಕ್ರೀಡಾಂಗಣವು 2005 ರಲ್ಲಿ ಉದ್ಘಾಟನೆಯಾದರೂ ಎಂಟು ವರ್ಷಗಳ ನಂತರ ಇಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆಯಿತು. ಆ ಬಳಿಕ ಇಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ದೇಶದ ಇನ್ನಿತರ ಪ್ರಮುಖ ಕ್ರೀಡಾಂಗಣಗಳಿಗೆ ಹೋಲಿಸಿದರೆ, ಇಲ್ಲಿ ಮೂಲಸೌಕರ್ಯಗಳ ಕೊರತೆ ಇದೆ.

ಇದನ್ನೂ ಓದಿ: ICC Cricket World​: ಧರ್ಮಶಾಲಾದಲ್ಲಿ ಇಂದು ಭಾರತ, ಕಿವೀಸ್ ಮುಖಾಮುಖಿ.. ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?

ABOUT THE AUTHOR

...view details