ಕರ್ನಾಟಕ

karnataka

ETV Bharat / sports

ಸೂಪರ್ 12 ಹೈವೋಲ್ಟೇಜ್​ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಇಂಗ್ಲೆಂಡ್ - ಆಸ್ಟ್ರೇಲಿಯಾ vs ಇಂಗ್ಲೆಂಡ್

ಇಂಗ್ಲೆಂಡ್ ತಂಡ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದ್ದರೆ, ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್​ ಬದಲಿಗೆ ಆಷ್ಟನ್ ಅಗರ್​ಗೆ ಅವಕಾಶ ನೀಡಿದೆ.

ICC T20I world cup
ಇಂಗ್ಲೆಂಡ್ vs ಆಸ್ಟ್ರೇಲಿಯಾ

By

Published : Oct 30, 2021, 7:30 PM IST

Updated : Oct 30, 2021, 7:57 PM IST

ದುಬೈ:ಸೂಪರ್​ 12 ಮೊದಲ ಗುಂಪಿನಲ್ಲಿ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡ್ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ಕೆಮಾಡಿಕೊಂಡಿದೆ.

ಎರಡೂ ತಂಡಗಳು ಲೀಗ್​ನಲ್ಲಿ ತಾವಾಡಿರುವ 2 ಪಂದ್ಯಗಳಲ್ಲೂ ಗೆಲುವು ಸಾಧಿಸಿವೆ. ಇಂದಿನ ಪಂದ್ಯ 3ನೇ ಪಂದ್ಯವಾಗಿದ್ದು, ಗೆದ್ದ ತಂಡಕ್ಕೆ ಸೆಮಿಫೈನಲ್ ಪ್ರವೇಶಿ ಬಹುತೇಕ ಖಚಿತವಾಗಲಿದೆ.

ಇಂಗ್ಲೆಂಡ್ ತಂಡ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದ್ದರೆ, ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್​ ಬದಲಿಗೆ ಆಷ್ಟನ್ ಅಗರ್​ಗೆ ಅವಕಾಶ ನೀಡಿದೆ.

ಮುಖಾಮುಖಿ: ಎರಡೂ ತಂಡಗಳು ಒಟ್ಟು 19 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 10 ಮತ್ತು ಇಂಗ್ಲೆಂಡ್ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಟಿ20 ವಿಶ್ವಕಪ್​ನಲ್ಲಿ 2 ಪಂದ್ಯಗಳನ್ನಾಡಿದ್ದು, ತಲಾ ಒಂದು ಜಯ ಸಾಧಿಸಿವೆ. ಇಂಗ್ಲೆಂಡ್ 2010ರ ವಿಶ್ವಕಪ್ ಫೈನಲ್​​ನಲ್ಲಿ ಜಯ ಸಾಧಿಸಿತ್ತು.

ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ),ಗ್ಲೇನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ಕೀಪರ್), ಪ್ಯಾಟ್ ಕಮಿನ್ಸ್, ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್

ಇಂಗ್ಲೆಂಡ್ (ಪ್ಲೇಯಿಂಗ್ XI): ಜೇಸನ್ ರಾಯ್, ಜೋಸ್ ಬಟ್ಲರ್ (ಕೀಪರ್), ಡೇವಿಡ್ ಮಲಾನ್, ಜಾನಿ ಬೈರ್‌ಸ್ಟೋವ್, ಇಯಾನ್ ಮಾರ್ಗನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಟೈಮಲ್ ಮಿಲ್ಸ್

Last Updated : Oct 30, 2021, 7:57 PM IST

ABOUT THE AUTHOR

...view details