ಕರ್ನಾಟಕ

karnataka

ETV Bharat / sports

ICC Cricket World Cup: ಆಗ್ರಾದ ಪ್ರೇಮಸೌಧ ತಲುಪಿದ ವಿಶ್ವಕಪ್​ ಟ್ರೋಫಿ.. ಕಪ್​ ನೋಡಲು ಮುಗಿಬಿದ್ದ ಪ್ರವಾಸಿಗರು - ETV Bharath Kannada news

ವಿಶ್ವಕಪ್​ ಟ್ರೋಫಿ ವಿಶ್ವದ ನಾನಾ ದೇಶಗಳನ್ನು ಸುತ್ತಿ ಈಗ ಭಾರತವನ್ನು ತಲುಪಿದೆ. ಆಗ್ರಾದ ತಾಜ್​ ಮಹಲ್​ ಮುಂದೆ ಟ್ರೋಫಿ ಇಟ್ಟು ವಿಡಿಯೋ ಮತ್ತು ಫೋಟೋ ಶೂಟ್​ ಮಾಡಲಾಗಿದೆ.

ICC Cricket World Cup
ICC Cricket World Cup

By

Published : Aug 16, 2023, 1:26 PM IST

ಆಗ್ರಾದ ಪ್ರೇಮಸೌಧ ತಲುಪಿದ ವಿಶ್ವಕಪ್​ ಟ್ರೋಫಿ

ಆಗ್ರಾ (ಉತ್ತರ ಪ್ರದೇಶ):ಇನ್ನು 50 ದಿನದಲ್ಲಿ ಭಾರತದಲ್ಲಿ ವಿಶ್ವ ಕ್ರಿಕೆಟ್​ ಜಾತ್ರೆ ಜರುಗಲಿದೆ. ಇದಕ್ಕಾಗಿ ಐಸಿಸಿ ಜೋರಾಗಿಯೇ ಪ್ರಚಾರ ಮಾಡುತ್ತಿದೆ. ಅಕ್ಟೋಬರ್​ 5 ರಂದು ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಪಂದ್ಯದ ಮುಖಾಂತರ ಅಧೃತ ಚಾಲನೆ ಸಿಗಲಿದೆ. ಈಗಾಗಲೇ ವಿಶ್ವಕಪ್​ನ ವೇಳಾ ಪಟ್ಟಿ ಬಿಡುಗಡೆಯಾಗಿದ್ದು, ಟಿಕೆಟ್​ ಬುಕ್ಕಿಂಗ್​​ ಸಹ ಆರಂಭವಾಗಿದೆ.

ವಿಶ್ವಕಪ್​ನಲ್ಲಿ ಭಾಗವಹಿಸುವ ದೇಶಗಳನ್ನೆಲ್ಲ ಸುತ್ತಿರುವ ವಿಶ್ವಕಪ್​ ಈಗ ಭಾರತಕ್ಕೆ ಬಂದಿದೆ. ಇಂದು (ಬುಧವಾರ) ಮುಂಜಾನೆ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟ್ರೋಫಿ ಆಗ್ರಾದ ತಾಜ್​ ಮಹಲ್​ಗೆ ತಲುಪಿದೆ. ರಾಯಲ್ ಗೇಟ್ ಮುಂದೆ ಟ್ರೋಫಿ ಇಟ್ಟುಕೊಂಡು ಛಾಯಾಗ್ರಹಣ ಮತ್ತು ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಈ ವೇಳೆ, ತಾಜ್‌ಮಹಲ್‌ಗೆ ಬಂದಿರುವ ಪ್ರವಾಸಿಗರು ಕ್ರಿಕೆಟ್ ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋಶೂಟ್, ವಿಡಿಯೋ ಶೂಟ್ ಮತ್ತು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಅಕ್ಟೋಬರ್​ 05 ರಂದು ಐಸಿಸಿ ವಿಶ್ವಕಪ್​ನ ಮೊದಲ ಪಂದ್ಯ ಗುಜರಾತ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ನವೆಂಬರ್​ 19ಕ್ಕೆ ಫೈನಲ್​ ಪಂದ್ಯವೂ ಇದೇ ಮೈದಾನದಲ್ಲಿ ನಡೆಯಲಿದೆ. ಸುಮಾರು ಒಂದೂವರೆ ತಿಂಗಳು ಭಾರತದಲ್ಲಿ ಏಕದಿನ ಕ್ರಿಕೆಟ್​ನ ಜಾತ್ರೆಯೇ ಇರಲಿದೆ. ನಾನಾ ದೇಶಗಳನ್ನು ಸುತ್ತಿ ಬಂದಿರುವ ವಿಶ್ವಕಪ್​ ಅನ್ನು ಪಂದ್ಯಗಳು ನಡೆಯಲಿರುವ ಮೈದಾನಗಳಲ್ಲಿ ಪ್ರಯಾಣಿಸಲಿದೆ.

ತಾಜ್​ ಮಹಲ್​ ಮುಂದೆ ವಿಶ್ವಕಪ್​ ಟ್ರೋಫಿಯನ್ನು ಇಟ್ಟಿರುವ ಫೋಟೋವನ್ನು ಐಸಿಸಿ ತನ್ನ ಎಕ್ಸ್​ ಆ್ಯಪ್​ ಖಾತೆಯಲ್ಲಿ ಹಂಚಿಕೊಂಡಿದೆ. ಅದಕ್ಕೆ "ಕ್ರಿಕೆಟ್ ವಿಶ್ವಕಪ್​ 2023 ಇನ್ನು 50 ದಿನ ಬಾಕಿ" ಎಂದು ಕ್ಯಾಪ್ಶನ್​ ಕೊಡಲಾಗಿದೆ. ಪಂದ್ಯಕ್ಕೆ 100 ದಿನಗಳು ಬಾಕಿ ಇದ್ದಾಗ ವಿಶ್ವಕಪ್ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಟ್ರೋಫಿ ಭೂಮಿಯ 18 ಕಡೆ ಪ್ರಯಾಣ ಬೆಳೆಸಿದೆ.

ಭದ್ರತೆಗೆ ಬೌನ್ಸರ್‌ಗಳ ನಿಯೋಜನೆ: ತಾಜ್‌ಮಹಲ್‌ನಲ್ಲಿ ಬೆಳಗ್ಗೆಯಿಂದಲೇ ಪ್ರವಾಸಿಗರ ದಂಡೇ ನೆರೆದಿತ್ತು. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್ ವಿಶ್ವಕಪ್ ಟ್ರೋಫಿಯ ಭದ್ರತೆಗೆ ಬೌನ್ಸರ್​ಗಳನ್ನು ನಿಯೋಜಿಸಲಾಗಿತ್ತು. ಸುಮಾರು ಒಂದು ಗಂಟೆ ಕಾಲ ಕ್ರಿಕೆಟ್ ವಿಶ್ವಕಪ್ ಟ್ರೋಫಿಯ ವಿಡಿಯೋ ಚಿತ್ರೀಕರಣ ಮತ್ತು ಛಾಯಾಗ್ರಹಣ ಮಾಡಲಾಯಿತು. ತಾಜ್‌ಮಹಲ್‌ನ ಹಿರಿಯ ಸಂರಕ್ಷಣಾ ಸಹಾಯಕ ಪ್ರಿನ್ಸ್ ವಾಜಪೇಯಿ ಅವರು ಟ್ರೋಫಿಯ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಐಸಿಸಿಯಿಂದ ಅನುಮತಿ ಕೇಳಲಾಗಿದೆ ಎಂದು ತಿಳಿದರು.

ಪೈಪೋಟಿ ನಡೆಸಿದ ಪ್ರವಾಸಿಗರು: ತಾಜ್ ಮಹಲ್‌ನಲ್ಲಿ ಫೋಟೋಶೂಟ್ ಮುಗಿದ ನಂತರ, ಪ್ರವಾಸಿಗರಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮತ್ತು ಕ್ರಿಕೆಟ್ ವಿಶ್ವಕಪ್ ಟ್ರೋಫಿಯೊಂದಿಗೆ ವಿಡಿಯೋ ಮಾಡಲು ನೂಕುನುಗ್ಗಲು ಕಂಡು ಬಂದಿದೆ. ಭದ್ರತಾ ಸಿಬ್ಬಂದಿ ಬಹಳ ಕಷ್ಟಪಟ್ಟು ಜನರನ್ನು ನಿಭಾಯಿಸಿದರು.

ಇದನ್ನೂ ಓದಿ:M S Dhoni: ಭಾರತ ಕ್ರಿಕೆಟ್‌ ತಂಡದ ಚಾಣಾಕ್ಷ ನಾಯಕ ಧೋನಿ ನಿವೃತ್ತಿಗೆ ಮೂರು ವರ್ಷ

ABOUT THE AUTHOR

...view details