ಮೊಹಾಲಿ: ಆಕರ್ಷಕ ಶತಕ ಸಿಡಿಸಿ ಭಾರತ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದ ಜಡೇಜಾ 175 ರನ್ಗಳಿಸಿದ್ದ ವೇಳೆ ನಾಯಕ ರೋಹಿತ್ ಶರ್ಮಾ ಡಿಕ್ಲೇರ್ ಘೋಷಿಸಿದ್ದರು. ಆದರೆ ನಾಯಕ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲಾತಾಣದಲ್ಲಿ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದರು. ಆದರೆ ಸ್ವತಃ ಜಡೇಜಾ ಈ ಕುರಿತು ಪ್ರತಿಕ್ರಿಯಿಸಿದ್ದು, ಮ್ಯಾನೇಜ್ಮೆಂಟ್ಗೆ ಡಿಕ್ಲೇರ್ ಘೋಷಿಸಿ ಎಂದು ಸಲಹೆ ಕೊಟ್ಟಿದ್ದು ನಾನೇ ಎಂದು ಚರ್ಚೆಗೆ ತೆರೆ ಎಳೆದಿದ್ದಾರೆ.
ಶುಕ್ರವಾರ 45 ರನ್ಗಳಿಸಿದ್ದ ರವೀಂದ್ರ ಜಡೇಜಾ 2ನೇ ದಿನವಾದ ಇಂದು ತಮ್ಮ 2ನೇ ಟೆಸ್ಟ್ ಶತಕ ಪೂರ್ಣಗೊಳಿಸಿದರು. ಆ ಶತಕವನ್ನು 175 ರನ್ಗಳ ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು. ಅಭಿಮಾನಿಗಳು ಆಲ್ರೌಂಡರ್ನಿಂದ ದ್ವಿಶತಕವನ್ನು ಎದುರು ನೋಡುತ್ತಿದ್ದರು. ಆದರೆ ಈ ವೇಳೆ ರೋಹಿತ್ ಶರ್ಮಾ ಭಾರತದ ಮೊದಲ ಇನ್ನಿಂಗ್ಸ್ಗೆ ಡಿಕ್ಲೇರ್ ಘೋಷಿಸಿದರು. ಇದು ಚರ್ಚೆಗೆ ಕಾರಣವಾಗಿತ್ತು.