ನವದೆಹಲಿ:ಕೊರೊನಾ ಕಾರಣಕ್ಕಾಗಿ ನಿಂತಿದ್ದ ಇರಾನಿ ಕಪ್ ಮೂರು ವರ್ಷಗಳ ಬಳಿಕ ಮತ್ತೆ ನಡೆಯಲಿದ್ದು, ರಣಜಿ ಟ್ರೋಫಿ ಚಾಂಪಿಯನ್ ಸೌರಾಷ್ಟ್ರ ವಿರುದ್ಧ ಭಾರತ ಇತರ ತಂಡ ಸೆಣಸಲಿದೆ. ಮುಂದಿನ ತಿಂಗಳು 1 ರಿಂದ 5 ರವರೆಗೆ ಪಂದ್ಯ ನಡೆಯಲಿದ್ದು, ಭಾರತ ಇತರ ತಂಡವನ್ನು ಹನುಮ ವಿಹಾರಿ ಮುನ್ನಡೆಸಲಿದ್ದಾರೆ.
ರಾಜ್‌ಕೋಟ್‌ನಲ್ಲಿ ನಡೆಯಲಿರುವ ಪಂದ್ಯಾವಳಿಗೆ ಬಿಸಿಸಿಐ 15 ಜನರ ಭಾರತ ಇತರ ತಂಡವನ್ನು ಪ್ರಕಟಿಸಿದೆ. ಇಂಡಿಯಾ ಎ ತಂಡವನ್ನು ಮುನ್ನಡೆಸಿದ್ದ ಮಯಾಂಕ್ ಅಗರ್ವಾಲ್, ಯುವ ಆಟಗಾರ ಪ್ರಿಯಾಂಕ್ ಪಾಂಚಾಲ್, ದುಲೀಪ್ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್ ಮತ್ತು ಯಶ್ ಧುಲ್ರಂತಹ ಬ್ಯಾಟರ್ಗಳನ್ನು ತಂಡ ಹೊಂದಿದೆ.
ಉದಯೋನ್ಮುಖ ವೇಗಿ ಉಮ್ರಾನ್ ಮಲಿಕ್, ಬಿಗ್ ಹಿಟ್ಟರ್ಸರ್ಫರಾಜ್ ಖಾನ್ ಕೂಡ ತಂಡದಲ್ಲಿದ್ದಾರೆ. ಇರಾನ್ ಟ್ರೋಫಿ ಸೆಣಸಾಟದಲ್ಲಿ ಸೌರಾಷ್ಟ್ರ ಪರವಾಗಿ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಭಾರತ ಇತರೆ ತಂಡ ಇಂತಿದೆ:ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್, ಯಶ್ ಧುಲ್, ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್, ಕೆ.ಎಸ್.ಭರತ್, ಉಪೇಂದ್ರ ಯಾದವ್, ಜಯಂತ್ ಯಾದವ್, ಸೌರಭ್ ಕುಮಾರ್, ಆರ್ ಸಾಯಿ ಕಿಶೋರ್, ಉಮಕೇಶ್ ಕುಮಾರ್, ಕೆ. ಸೇನ್, ಅರ್ಜಾನ್ ನಾಗ್ವಾಸ್ವಾಲ್ಲಾ.
ಓದಿ:ಐಸಿಸಿ ಬ್ಯಾಟಿಂಗ್ ಶ್ರೇಯಾಂಕ: 2ನೇ ಸ್ಥಾನಕ್ಕೇರಿ ಸೂರ್ಯಕುಮಾರ್ ಯಾದವ್ ಜೀವನಶ್ರೇಷ್ಠ ಸಾಧನೆ